Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಫ್ 1: ಆಸ್ಟ್ರಿಯಾದಲ್ಲೂ ಮರ್ಸಿಡೀಸ್ ಪ್ರಾಬಲ್ಯ

ಸ್ಪೀಲ್ ಬರ್ಗ್, ಜೂ.23: ಆಸ್ಟ್ರಿಯಾದಲ್ಲಿ ನಡೆದ ಎಫ್ 1 ರೇಸಿನಲ್ಲೂ ಮರ್ಸಿಡೀಸ್ ತಂಡ ತನ್ನ ಪ್ರಾಬಲ್ಯ ಮೆರೆದಿದೆ. ಮರ್ಸಿಡೀಸ್ ನ ನಿಕೋ ಗೆದ್ದರೆ, ಅದೇ ತಂಡದ ಇನ್ನೊಬ್ಬ ಚಾಲಕ ಲೂಯಿಸ್ ಎರಡನೇ ಸ್ಥಾನ ಪಡೆದು ಕೊಂಡರು.

ವಿಲಿಯಂಸ್ ತಂಡದ ಬೋತ್ತಾಸ್ ಮೂರನೇ ಹಾಗು ಫಿಲೆಪೆ ಮಾಸಾ ನಾಲ್ಕನೇ ಸ್ಥಾನ ಪಡೆದರು. ಇದು ವಿಲಿಯಂಮ್ಸ್ ತಂಡದ ಈ ಋತುವಿನಲ್ಲಿ ಮೊದಲ ಬಾರಿಗೆ ಪೋಡಿಯಮ್ ಏರಿತು. ಕ್ವಾಲಿಫಾಯಿಂಗ್ ನಲ್ಲಿ ವಿಲಿಯಂಸ್ ತಂಡದ ಫಿಲೆಪೆ ಮಾಸಾ ಮೊದಲನೇ ಸ್ಥಾನ ಪಡೆದಿದ್ದರು.ಅದೇ ತಂಡದ ಬೋತ್ತಾಸ್ ಎರಡನೇ ಸ್ಥಾನ ಗಳಿಸಿದ್ದರು. ಮರ್ಸಿಡೀಸ್ ತಂಡ ಪೋಲ್ ಗಳಿಕೆಗೆ ಕೊನೆಗೂ ತೆರೆ ಬಿದ್ದಿತ್ತು.

ಪ್ರಸಕ್ತ ಸಾಲಿನಲ್ಲಿ ಇದೇ ಮೊದಲನೇ ಬಾರಿ ಪೋಲ್ ಪಡೆಯಲು ಮರ್ಸಿಡೀಸ್ ವಿಫಲವಾಯಿತು. ನಿಕೋ ರೋಸಬರ್ಗ್ ಮೂರನೇ ಮತ್ತು ಲೂಯಿಸ್ ಹ್ಯಾಮಿಲ್ಟನ್ ಒಂಬತ್ತನೇ ಸ್ಥಾನ ಪಡೆದರು ಹಾಗು ಫೆರಾರಿ ತಂಡದ ಅಲಾನ್ಸೊ ನಾಲ್ಕನೇ ಸ್ಥಾನ ಪಡೆದರು.

ರೇಸಿನ ಮೊದಲನೇ ಸುತ್ತಿನಲ್ಲಿಯೇ ಲೂಯಿಸ್ ಉತ್ತಮ ಆರಂಭ ಪಡೆದು ನಾಲ್ಕನೇ ಸ್ಥಾನಕ್ಕೇ ಬಂದರು. ವಿಲಿಯಂಸ್ ತಂಡದ ಚಾಲಕರು ರೇಸಿನ ಉದ್ದಕ್ಕೂ ಮರ್ಸಿಡೀಸ್ ತಂಡಕ್ಕೆ ಉತ್ತಮ ಪ್ರತಿರೋಧ ತೋರಿಸಿದರು. ಮರ್ಸಿಡೀಸ್ ತಂಡದ ಪಿಟ್ ಸ್ಟಾಪ್ ರಣನೀತಿಯಿಂದಾಗಿ ವಿಲಿಯಂಸ್ ತಂಡದ ಚಾಲಕರನ್ನು ಹಿಂದೆ ಹಾಕಲು ಸಾಧ್ಯವಾಯಿತು.

ರೆಡ್ ಬುಲ್ ಗೆ ಕೈ ಕೊಟ್ಟ ಅದೃಷ್ಟ

ರೆಡ್ ಬುಲ್ ಗೆ ಕೈ ಕೊಟ್ಟ ಅದೃಷ್ಟ

ಇದು ರೆಡ್ ಬುಲ್ ತಂಡದ ರೇಸ್ ಸರ್ಕ್ಯೂಟ್ ಆಗಿದ್ದು, ಆದರೇ ಆ ತಂಡದ ಚಾಲಕರು ಉತ್ತಮ ಫಲಿತಾಂಶ ಪಡೆಯಲು ವಿಫಲರಾದರು. ವೆಟ್ಟೆಲ್ ಅದೃಷ್ಟ ಮತ್ತೇ ಕೈ ಕೊಟ್ಟಿತು. ಅವರು ಮತ್ತೇ ಕಾರ್ ಸಮಸ್ಯಯಿಂದ ರೇಸಿನಿಂದ ಹೊರಗಾದರು. ಡೇನಿಯಲ್ ಎಂಟನೇ ಸ್ಥಾನಕ್ಕೇ ತೃಪ್ತಿ ಪಡಬೇಕಾಯಿತು. ಫೆರಾರಿ ತಂಡದ ಅಲನ್ಸೊ ಐದನೇ ಸ್ಥಾನ ಗಳಿಸಿದರು.

ಫೋರ್ಸ್ ಇಂಡಿಯಾದ ಪೆರೆಜ್ ಮತ್ತು ನಿಕೋ ಹಲ್ಕನ್ ಬೆರ್ಗ್ ಕ್ರಮವಾಗಿ ಆರನೇ ಮತ್ತು ಒಂಬತ್ತನೇ ಸ್ಥಾನ ಪಡೆಯುವದೊಂದಿಗೆ ತಂಡಕ್ಕೆ ಉತ್ತಮ ಅಂಕಗಳನ್ನು ಗಳಿಸಿದರು. ಫೆರಾರಿಯ ಕಿಮಿ ಹತ್ತನೆಯವರಾಗಿ ರೇಸ್ ಮುಗಿಸಿದರು.

ಮೊದಲ ಹತ್ತು ಫಲಿತಾಂಶಗಳು

ಮೊದಲ ಹತ್ತು ಫಲಿತಾಂಶಗಳು

1. ನಿಕೋ ರೋಸ್ ಬರ್ಗ್ (ಚಿತ್ರದಲ್ಲಿ : ಕಪ್ ಜತೆ ನಿಕೋ)
2. ಲೂಯಿಸ್ ಹ್ಯಾಮಿಲ್ಟನ್
3. ವಾಲ್ಟೇರಿ ಬೋತ್ತಾಸ್
4. ಫಿಲಿಪೆ ಮಾಸಾ
5. ಫರ್ನಾಂಡೊ ಅಲಾನ್ಸೊ
6. ಸೇರ್ಜಿಯೋ ಪೆರೆಜ್
7. ಕೆವಿನ್ ಮ್ಯಾಗ್ನೂಸೆನ್
8. ಡೇನಿಯಲ್ ರಿಚಿಯಾರ್ಡೊ
9. ನಿಕೊ ಹಲ್ಕನ್ ಬೆರ್ಗ್
10. ಕಿಮಿ ರೈಕನನ್

ಪ್ರಸಕ್ತ ಋತುವಿನ ಮೊದಲ ಐದು ಚಾಲಕರು

ಪ್ರಸಕ್ತ ಋತುವಿನ ಮೊದಲ ಐದು ಚಾಲಕರು

1. ನಿಕೋ ರೋಸ್ ಬರ್ಗ್ : 165
2. ಲೂಯಿಸ್ ಹ್ಯಾಮಿಲ್ಟನ್ : 135 (ಚಿತ್ರದಲ್ಲಿ : ಎರಡನೇ ಸ್ಥಾನ ಪಡೆದ ಲೂಯಿಸ್)
3. ಫೆರ್ನಾಂಡೊ ಅಲನ್ಸೊ : 83
4. ಡೇನಿಯಲ್ ರಿಕ್ಯಾರ್ಡೊ : 79
5. ಸೆಬಾಸ್ಟಿಯನ್ ವೆಟ್ಟೆಲ್ : 60

ಪ್ರಸಕ್ತ ಋತುವಿನ ಮೊದಲ ಐದು ತಂಡಗಳು

ಪ್ರಸಕ್ತ ಋತುವಿನ ಮೊದಲ ಐದು ತಂಡಗಳು

1. ಮರ್ಸಿಡೀಸ್ : 301
2. ರೆಡ್ ಬುಲ್ : 143
3. ಫೆರಾರಿ : 98
4. ಫೋರ್ಸ್ ಇಂಡಿಯಾ : 87
5. ವಿಲಿಯಂಸ್ : 85
ಚಿತ್ರದಲ್ಲಿ : ಆಸ್ಟ್ರಿಯಾದ ಸ್ಪೀಲ್ ಬರ್ಗ್ ನ ರೆಡ್ ಬುಲ್ ರಿಂಗ್ ನ ಜಿಪಿಯಲ್ಲಿ ಮರ್ಸಿಡೀಸ್ ಚಾಲಕರಾದ ಲೂಯಿಸ್ ಹ್ಯಾಮಿಲ್ಟನ್, ನಿಕೋ ರೋಸ್ ಬರ್ಗ್ ಅವರಿಂದ ಶಾಂಪೈನ್ ಹಾರಿಸುತ್ತಾ ಸಂಭ್ರಮಿಸಿದ್ದು ಹೀಗೆ.. ಚಿತ್ರ: ಪಿಟಿಐ

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+