ಚೊಚ್ಚಲ ದ.ಏಷ್ಯನ್ ಥ್ರೋಬಾಲ್ ಟೂರ್ನಿಗೆ ಆತಿಥ್ಯ ವಹಿಸಲಿದೆ ಬೆಂಗಳೂರು

ಬೆಂಗಳೂರು, ನವೆಂಬರ್ 27: ಏಷ್ಯಾನ್ ಥ್ರೋಬಾಲ್ ಫೆಡರೇಷನ್ ಮತ್ತು ಭಾರತೀಯ ಥ್ರೋಬಾಲ್ ಫೆಡರೇಷನ್ ಸಹಯೋಗದಲ್ಲಿ ಮುಂದಿನ ವರ್ಷ ಬೆಂಗಳೂರಿನಲ್ಲಿ ದಕ್ಷಿಣ ಏಷ್ಯನ್ ಥ್ರೋಬಾಲ್ ಲೀಗ್‌ನ ಆತಿಥ್ಯ ವಹಿಸಲು ನಾವು ಉತ್ಸುರಾಗಿದ್ದೇವೆ. ಈ ಟೂರ್ನಮೆಂಟ್ ಮೂಲಕ ಜನರಿಗೆ ಥ್ರೋಬಾಲ್ ಆಟವನ್ನು ನೆನಪಿಸುವುದರಲ್ಲದೆ ಈ ಕ್ರೀಡೆಯತ್ತ ಹೆಚ್ಚಿನ ಜನ ಆಸಕ್ತಿ ತಾಳುವಂತೆ ಮಾಡುವತ್ತ ಹೆಜ್ಜೆ ಇಡುತ್ತಿದ್ದೇವೆ ಎಂದು ಏಷ್ಯನ್ ಥ್ರೋಬಾಲ್ ಫೆಡರೇಷನ್‌ನ ಅಧ್ಯಕ್ಷೆ ಎ. ಯಾಸ ರಾಮಚಂದ್ರ ಹೇಳಿದರು.
ಟೂರ್ನಿ ನಡೆಸುವ ಕುರಿತಾಗಿ ಸೋಮವಾರ (ನವೆಂಬರ್ 26) ಬೆಂಗಳೂರಿನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಚುರುಕುಗೊಳಿಸುವ ಈ ಸುಲಭವಾದ ಕ್ರೀಡೆ ಸಾಕಷ್ಟು ಜನಪ್ರಿಯಗೊಂಡಿಲ್ಲ. ಹೀಗಾಗಿ ಈ ಕ್ರೀಡೆಯನ್ನು ಹೆಚ್ಚಿನ ಜನರಿಗೆ ತಲುಪಿಸುವ ಯತ್ನವಾಗಬೇಕಿದೆ ಎಂದವರು ಹೇಳಿದರು.
ಮುಂದಿನ ವರ್ಷ ಜನವರಿ 18ರಿಂದ 22ಕ್ಕೆ ಬೆಂಗಳೂರಿನಲ್ಲಿ ಟೂರ್ನಿ ನಡೆಸಲು ಉದ್ದೇಶಿಸಲಾಗಿದೆ. ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್, ಥೈಲ್ಯಾಂಡ್, ಇಂಡೋನೇಷ್ಯಾ, ಭೂತಾನ್, ಮಲೇಷಿಯಾ ಮತ್ತು ಫಿಲಿಪ್ಪೈನ್ ದೇಶಗಳ ಸ್ಪರ್ಧಾಳುಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತದಲ್ಲಿಯೇ ಆರಂಭವಾದ ಕ್ರೀಡೆ
'ಥ್ರೋಬಾಲ್ ಇದು ಭಾರತದ ಮಣ್ಣಿನ ಕ್ರೀಡೆ. ಶಾಲಾ-ಕಾಲೇಜುಗಳಲ್ಲಿ ಇತ್ತೀಚೆಗೆ ಕೊಂಚ ಜನಪ್ರಿಯಗೊಳ್ಳುತ್ತಲೂ ಇದೆ. ಯಾಕೆಂದರೆ ಇದು ತೀರಾ ಸರಳವಾದ ಮತ್ತು ಆರ್ಥಿಕವಾಗಿಯೂ ಕೈಗೆಟುಕಬಲ್ಲ ಕ್ರೀಡೆ. ಶಾಲೆ, ಕಾಲೇಜು, ಸಾರ್ವಜನಿಕ ಪ್ರದೇಶ, ಅಪಾರ್ಟ್ಮೆಂಟ್ ಹೀಗೆ ಎಲ್ಲಿಯೂ ಆಟಬಹುದಾದ ಕ್ರೀಡೆಯಿದು. ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ಬಹಳಷ್ಟು ಕ್ರೀಡಾಪಟುಗಳು ಬಹುಮಾನ ಗೆದ್ದಿದ್ದಿದೆ' ಎಂದು ಯಾಸ ರಾಮಚಂದ್ರ ತಿಳಿಸಿದರು.

ಸಿದ್ಧತೆಗಳು ನಡೆಯುತ್ತಿವೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಏಷ್ಯಾನ್ ಥ್ರೋಬಾಲ್ ಪ್ರಧಾನ ಕಾರ್ಯದರ್ಶಿ ಎಸ್ ಮಣಿ ಮಾತನಾಡಿ, 'ನಮ್ಮ ದೇಶದಲ್ಲೇ ಆರಂಭವಾದ ಈ ಥ್ರೋಬಾಲ್ ಕ್ರೀಡೆಯನ್ನು ಜಗತ್ತಿನಗಲ ಹಬ್ಬಿಸಲು ಮುಂದಡಿಯಿಡುತ್ತಿರುವುದಕ್ಕೆ ಖುಷಿಯೆನಿಸಿದೆ. ಎಂಟು ದೇಶಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ' ಎಂದರು.

ಅತ್ಯಂತ ಹಳೆಯ ಆಟ
ಥ್ರೋಬಾಲ್ ಅನ್ನು ಅತ್ಯಂತ ಹಳೆಯ ಆಟಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಆದರೂ ಇದಕ್ಕೆ ಜಾಗತಿಕವಾಗಿ ಮಾನ್ಯತೆ ಲಭಿಸಿಲ್ಲ. ಮೊಟ್ಟ ಮೊದಲ ದಕ್ಷಿಣ ಏಷ್ಯಾ ಥ್ರೋಬಾಲ್ ಟೂರ್ನಮೆಂಟನ್ನು ಆಯೋಜಿಸುವುದರೊಂದಿಗೆ ಮಾನ್ಯತೆ ಪಡೆಯುವಲ್ಲಿ ವೇಗ ಹೆಚ್ಚಿಸಿಕೊಳ್ಳುವುದಲ್ಲದೇ, ಹಲವಾರು ಅಂತಾರಾಷ್ಟ್ರೀಯ ಟೂರ್ನಮೆಂಟ್ಗಳಲ್ಲಿ ಈ ಆಟ ಸೇರಿಸುವುದನ್ನು ಫೆಡರೇಷನ್ ಎದುರುನೋಡುತ್ತಿದೆ.

ಅನೇಕ ಪ್ರಶಸ್ತಿಗಳು ಬಂದಿವೆ
ಭಾರತೀಯ ಥ್ರೋಬಾಲ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಟಿ ರಾಮಣ್ಣ ಮಾತನಾಡಿ, 'ಭಾರತೀಯ ಪುರುಷರು ಮತ್ತು ಮಹಿಳಾ ತಂಡಗಳು ಅನೇಕ ಅಂತಾರಾಷ್ಟ್ರೀಯ ಟೂರ್ನಮೆಂಟ್ ಗಳಲ್ಲಿ ಭಾಗವಹಿಸಿ ಬಹಳ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ. ಆದರೂ ಈ ಕ್ರೀಡೆ ಅಷ್ಟೇನೂ ಜನಪ್ರಿಯಗೊಂಡಂತಿಲ್ಲ. ಟೂರ್ನಮೆಂಟ್ ಗಳು ಅದೂ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳು ಹೆಚ್ಚು ನಡೆದಷ್ಟು ಕ್ರೀಡೆಯೊಂದು ಹೆಚ್ಚು ಬೆಳಕಿಗೆ ಬರಲು ಸಾಧ್ಯ. ಆ ನೆಲೆಯಲ್ಲಿ ನಾವು ಪ್ರಯತ್ನಿಸುವುದರಲ್ಲಿದ್ದೇವೆ' ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications