Flashback 2022: ಸಾಧನೆಯ ಕಿರೀಟಕ್ಕೆ ಹಲವು ಗರಿಗಳು: 2022ರಲ್ಲಿ ನೀರಜ್ ಚೋಪ್ರಾ ಗೆದ್ದ ಪದಕಗಳು, ಪಡೆದ ಪ್ರಶಸ್ತಿಗಳ ವಿವರ

ಟೋಕಿಯೊ ಒಲಿಂಪಿಕ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆಲ್ಲುವ ಮೂಲಕ ಪ್ರಖ್ಯಾತರಾದವರು ನೀರಜ್ ಚೋಪ್ರಾ. ಒಲಿಂಪಿಕ್ ಚಿನ್ನವನ್ನು ಗೆದ್ದ ದೇಶದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ. ಅಂದಿನಿಂದ ಅವರನ್ನು ಚಿನ್ನದ ಹುಡುಗ ಎಂದೇ ಕರೆಯಲಾಗುತ್ತದೆ. ಕ್ರಿಕೆಟ್ ಆಟದ ಪಾರಮ್ಯದ ನಡುವೆಯೂ ಅಥ್ಲಿಟ್ ಒಬ್ಬರು ಈ ಮಟ್ಟದಲ್ಲಿ ಹೆಸರು ಗಳಿಸಿದ್ದು ಕಡಿಮೆ ಸಾಧನೆಯಲ್ಲ.
ಅವರು ಯಾವುದೇ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದಾಕ್ಷಣ ಭಾರತಕ್ಕೆ ಒಂದು ಪದಕ ಖಚಿತ ಎನ್ನುವಂತೆ ಸಾಧನೆ ಮಾಡಿದ್ದಾರೆ. ಹಲವು ಯುವ ಅಥ್ಲಿಟ್‌ಗಳಿಗೆ ನೀರಜ್ ಚೋಪ್ರಾ ಮಾದರಿಯಾಗಿ ನಿಲ್ಲುತ್ತಾರೆ. ಟೋಕಿಯೊ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮುನ್ನ, ಅವರು 2018ರ ಏಷ್ಯನ್ ಗೇಮ್ಸ್ ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ನೀರಜ್ ಚೋಪ್ರಾ ಇದುವರೆಗೂ, ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಪ್ರತಿನಿಧಿಸಿದ ಹಂತಗಳಲ್ಲಿ 12 ಚಿನ್ನದ ಪದಕ ಸೇರಿದಂತೆ 19 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2022ರಲ್ಲಿ ನೀರಜ್ ಚೋಪ್ರಾ ಹಲವು ದಾಖಲೆಗಳನ್ನು ಮಾಡಿದರು. ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದವು, ಅದೆಲ್ಲದರ ವಿವರ ಹೀಗಿದೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ
2022ರಲ್ಲಿ ಅಮೆರಿಕದ ಯೂಜಿನ್‌ನಲ್ಲಿ ನಡೆದ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. 2003ರಲ್ಲಿ ಲಾಂಗ್ ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ನಂತರ, 24 ವರ್ಷದ ಹುಡುಗ ನೀರಜ್ ಚೋಪ್ರಾ ಬೆಳ್ಳಿ ಗೆಲ್ಲುವ ಮೂಲಕ ಪದಕ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು ಎನಿಸಿಕೊಂಡರು.
ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.13 ಮೀ ಎಸೆಯುವುದರೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಪದಕವನ್ನು ಗೆಲ್ಲುವ ಮೂಲಕ ನೀರಜ್ ಚೋಪ್ರಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.

ಹಲವು ಪದಕಗಳನ್ನು ಗೆದ್ದ ಚೋಪ್ರಾ
ಜೂನ್ 14 ರಂದು ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30ಮೀಟರ್ ಎಸೆತದೊಂದಿಗೆ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು.
ನಂತರ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀ ಎಸೆಯುವ ಮೂಲಕ ತಮ್ಮದೇ ಆದ ರಾಷ್ಟ್ರೀಯ ದಾಖಲೆ ಮುರಿದರು. ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು. ಕುವರ್ಟೆನ್ ಗೇಮ್ಸ್ (Kuortane Games)ನಲ್ಲಿ 86.69 ಮೀಟರ್ ದೂರ ಎಸೆಯುವ ಮೂಲಕ ಅವರು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.

ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ
ಲೌಸೇನ್‌ನಲ್ಲಿನ ಡೈಮಂಡ್ ಲೀಗ್‌ನಲ್ಲಿ ಅವರು 89.08 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಜ್ಯೂರಿಚ್‌ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಗ್ರ್ಯಾಂಡ್ ಫೈನಲ್‌ಗೆ ಅರ್ಹತೆ ಗಳಿಸಿದರು. ಅವರು 88.44 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಪ್ರಶಸ್ತಿ ಗೆದ್ದರು. ಹಂಗೇರಿಯ ಬುಡಾಪೆಸ್ಟ್‌ನ ಜ್ಯೂರಿಚ್ ಫೈನಲ್ ಮತ್ತು 2023 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಿಗೆ ಅರ್ಹತೆ ಪಡೆದರು.
ಸೆಪ್ಟೆಂಬರ್ 8, 2022 ರಂದು, ನೀರಜ್ ಚೋಪ್ರಾ ಜ್ಯೂರಿಚ್‌ನಲ್ಲಿ ನಡೆದ 2022 ಡೈಮಂಡ್ ಲೀಗ್ ಫೈನಲ್‌ನಲ್ಲಿ 88.44 ಮೀಟರ್ ಎಸೆಯುವ ಮೂಲಕ ಚಾಂಪಿಯನ್ ಆದರು. ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎನ್ನುವ ಸಾಧನೆ ಮಾಡಿದರು. ಗಾಯದ ಕಾರಣದಿಂದ ಅವರು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.

ಸಾಧನೆಗೆ ಸಂದಿತು ಪದ್ಮಶ್ರೀ ಗೌರವ
24 ಹರೆಯದ ನೀರಜ್ ಚೋಪ್ರಾ ಕ್ರೀಡೆಯಲ್ಲಿ ಮಾಡಿದ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2018ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2020ರಲ್ಲಿ ಅವರಿಗೆ ವಿಶಿಷ್ಟ ಸೇವಾ ಪದಕ ನೀಡಲಾಗಿತ್ತು. 2021ರಲ್ಲಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದಿದ್ದರು.
2022ರಲ್ಲಿ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು. ಪರಮ ವಿಶಿಷ್ಟ ಸೇವಾ ಪದಕವನ್ನು ಕೂಡ 2022ರಲ್ಲಿ ನೀರಜ್ ಚೋಪ್ರಾ ಅವರಿಗೆ ನೀಡಿ ಗೌರವಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications