ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಪಘಾತದಲ್ಲಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಫ್ಲಿಂಟಾಫ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

Former England Cricketer Andrew Flintoff Hospitalized After Seriously Injured in Accident

ಜನಪ್ರಿಯ ಬಿಬಿಸಿ ಟೆಲಿವಿಷನ್ ಶೋ "ಟಾಪ್ ಗೇರ್' ಚಿತ್ರೀಕರಣದ ವೇಳೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.

45 ವರ್ಷದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಫ್ಲಿಂಟಾಫ್ ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ಘಟನಾ ಸ್ಥಳದಲ್ಲಿ ವೈದ್ಯಕೀಯ ಆರೈಕೆಯನ್ನು ನೀಡಲಾಯಿತು. ಅದರೆ ಅವರಿಗಾಗಿರುವ ಗಾಯ ಜೀವಕ್ಕೆ ಅಪಾಯಕಾರಿಯಾಗಿಲ್ಲ ಎಂದು ಬಿಬಿಸಿ ಸುದ್ದಿ ವೆಬ್‌ಸೈಟ್ ತಿಳಿಸಿದೆ.

ಲಂಡನ್‌ನ ದಕ್ಷಿಣ ಭಾಗದಲ್ಲಿರುವ ಡನ್ಸ್‌ಫೋಲ್ಡ್ ಪಾರ್ಕ್ ಏರೋಡ್ರೋಮ್‌ನಲ್ಲಿರುವ ಕಾರ್ಯಕ್ರಮದ ಪರೀಕ್ಷಾರ್ಥ ಟ್ರ್ಯಾಕ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ.

Former England Cricketer Andrew Flintoff Hospitalized After Seriously Injured in Accident

ಆಂಡ್ರ್ಯೂ ಫ್ಲಿಂಟಾಫ್ ಅವರು ಇಂಗ್ಲೆಂಡ್‌ನಲ್ಲಿ 'ಫ್ರೆಡ್ಡಿ' ಎಂದು ಪ್ರಸಿದ್ಧರಾಗಿದ್ದು, ಈ ಮಾಜಿ ಸ್ಟಾರ್ ಆಲ್‌ರೌಂಡರ್ 32ನೇ ವಯಸ್ಸಿನಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೊದಲು ಇಂಗ್ಲೆಂಡ್‌ ತಂಡಕ್ಕಾಗಿ 79 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

ಆಂಡ್ರ್ಯೂ ಫ್ಲಿಂಟಾಫ್ ಹಿಟ್ ಮೋಟಾರ್ ಶೋ ಟಾಪ್ ಗೇರ್ ಅನ್ನು ಸಹ ನಿರೂಪಿಸುವುದು ಸೇರಿದಂತೆ ಟಿವಿ ಕಾರ್ಯಕ್ರಮಗಳಲ್ಲಿ ವೃತ್ತಿಜೀವನವನ್ನು ಹೊಂದಿದ್ದಾರೆ.

"ಡಿಸೆಂಬರ್ 14ರ ಮಂಗಳವಾರ ಬೆಳಗ್ಗೆ ಟಾಪ್ ಗೇರ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಅಪಘಾತದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಗಾಯಗೊಂಡರು. ವೈದ್ಯಕೀಯ ಸಿಬ್ಬಂದಿ ತಕ್ಷಣ ಘಟನಾ ಸ್ಥಳಕ್ಕೆ ಹಾಜರಾಗಿದ್ದಾರೆ," ಎಂದು ಬಿಬಿಸಿ ವಕ್ತಾರರು ತಿಳಿಸಿದ್ದಾರೆ.

"ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ನಾವು ಸರಿಯಾದ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಖಚಿತಪಡಿಸುತ್ತೇವೆ," ಎಂದು ಹೇಳಿದ್ದಾರೆ.

ಆಂಡ್ರ್ಯೂ ಫ್ಲಿಂಟಾಫ್ ಕ್ರಿಕೆಟ್ ವೃತ್ತಿಜೀವನದಲ್ಲಿ 2005 ಮತ್ತು 2009ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಆಶಸ್ ಸರಣಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

Story first published: Wednesday, December 14, 2022, 10:04 [IST]
Other articles published on Dec 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X