Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಆಫ್ರಿಕಾದ ದೈತರನ್ನು ಮನೆಗಟ್ಟಿದ ಫ್ರೆಂಚರು

ಬ್ರಸಿಲಿಯಾ, ಜು.1: ಫೀಫಾ ವಿಶ್ವಕಪ್‌ನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಫ್ರಿಕಾದ ದೈತ್ಯ ತಂಡ ನೈಜೀರಿಯಾವನ್ನು 2-0 ಅಂತರದಲ್ಲಿ ಬಗ್ಗು ಬಡಿದ ಫ್ರಾನ್ಸ್ ತಂಡ ವಿಶ್ವಕಪ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಬಾರಿಯ ವಿಶ್ವಕಪ್ ನ ಹಲವು ಪಂದ್ಯಗಳಂತೆ ಈ ಪಂದ್ಯದಲ್ಲೂ ಕೊನೆ ಅವಧಿಯಲ್ಲಿ ಎರಡು ಗೋಲುಗಳು ನಿರ್ಣಾಯಕವಾಗಿ ಪರಿಣಮಿಸಿತು.

ಸೋಮವಾರ ರಾತ್ರಿ ನಡೆದ ಪಂದ್ಯದ ಎರಡನೇ ಅವಧಿಯಲ್ಲಿ ಫ್ರಾನ್ಸ್ ತಂಡದ ಪಾಲ್ ಪೊಗ್ಬಾ 79ನೇ ನಿಮಿಷದಲ್ಲಿ ಫ್ರಾನ್ಸ್ ಖಾತೆಗೆ ಮೊದಲ ಗೋಲು ದಾಖಲಿಸಿದರು. [ಉಗ್ರರ ಮುಂದೆ ಶೀಲ ಒತ್ತೆಯಿಟ್ಟ ಗಾಯಕಿ]

ಹೆಚ್ಚುವರಿ ಸಮಯ 90+2ನೇ ನಿಮಿಷದಲ್ಲಿ ನೈಜೀರಿಯಾದ ಆಟಗಾರ ಜೋಸೆಫ್ ಯೊಬೊ ಅವರ ಸ್ವಯಂಕೃತ ಅಪರಾಧದಿಂದಾಗಿ ಫ್ರಾನ್ಸ್‌ನ ಖಾತೆಗೆ ಇನ್ನೊಂದು ಗೋಲು ಸೇರ್ಪಡೆಗೊಂಡಿತು. ಯೊಬೊ ಸ್ವಯಂಗೋಲು ನೆರವಿನಲ್ಲಿ 2-0 ಅಂತರದಲ್ಲಿ ಗೆಲುವು ಸಾಧಿಸಿದ ಫ್ರಾನ್ಸ್ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿತು.

ಪಂದ್ಯದ ಆರಂಭದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಆಫ್ರಿಕಾದ ಸೂಪರ್ ಈಗಲ್ಸ್ ಕೊನೆ ತನಕ ಅದೇ ಪೌರುಷ ಉಳಿಸಿಕೊಳ್ಳಲು ಆಗದೆ ಹೆಣಗಾಡಿದರು. ಪಂದ್ಯದ 20ನೇ ನಿಮಿಷದೊಳಗೆ ಗೋಲು ಗಳಿಕೆ ಅವಕಾಶವನ್ನು ಬ್ಲೈಸಿ ಮಾಟುಡಿ ಕೈಚೆಲ್ಲಿದ್ದು ಮುಳುವಾಯಿತು.

ಫ್ರೆಂಚರ ಸಂಭ್ರಮದ ಕ್ಷಣ

ಫ್ರೆಂಚರ ಸಂಭ್ರಮದ ಕ್ಷಣ

ಪಂದ್ಯದ ಹೆಚ್ಚುವರಿ 92ನೇ ನಿಮಿಷದಲ್ಲಿ ಯೋಬೋ ಮತ್ತೊಂದು ಆಕರ್ಷಕ ಗೋಲು ಬಾರಿಸಿದರು. ಇದರಿಂದಾಗಿ ಫ್ರಾನ್ಸ್ ಗೆ 2-0ಯಿಂದ ಗೆಲುವು ಸಿಕ್ಕಿತು. ಆದರೆ, ಬಲಿಷ್ಠ ನೈಜೀರಿಯಾ ಮಾತ್ರ ಸೋಲಿನಿಂದ ವಿಶ್ವಕಪ್ ಗೆ ವಿದಾಯ ಹೇಳಬೇಕಾಯಿತು.

 ರೋಚಕವಾಗಿದ್ದ ಫ್ರಾನ್ಸ್ -ನೈಜೀರಿಯಾ ಪಂದ್ಯ

ರೋಚಕವಾಗಿದ್ದ ಫ್ರಾನ್ಸ್ -ನೈಜೀರಿಯಾ ಪಂದ್ಯ

ಬಲಿಷ್ಠ ನೈಜೀರಿಯಾಗೆ ಆರಂಭದಿಂದಲೇ ಸವಾಲು​ ಹಾಕುವ ಮೂಲಕ ಅತ್ಯಂತ ಅಚ್ಚುಕಟ್ಟಾಗಿ ಎದುರಾಳಿ ಆಟಗಾರರನ್ನ ಕಟ್ಟಿ ಹಾಕಿತು. ಹೀಗಾಗಿ ನೈಜೀರಿಯಾ ಒಂದೇ ಒಂದು ಗೋಲು ಕೂಡ ಮಾಡಲಾಗಲಿಲ್ಲ.

 ಪಂಡಿತರ ಲೆಕ್ಕಾಚಾರ ಉಲ್ಟಾ ಆಯಿತು

ಪಂಡಿತರ ಲೆಕ್ಕಾಚಾರ ಉಲ್ಟಾ ಆಯಿತು

ನೈಜೀರಿಯಾ ತಂಡ ಪಂದ್ಯದಲ್ಲಿ ಗೆಲುವು ಸಾಧಿಸಲಿದೆ. ಫ್ರಾನ್ಸ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಲಯ ಕಂಡುಕೊಂಡಿಲ್ಲ ಎಂದು ಪಂಡಿತರು ನುಡಿದಿದ್ದ ಭವಿಷ್ಯ ಸುಳ್ಳಾಯಿತು.

ಕ್ವಾರ್ಟರ್ ಫೈನಲ್ ಕನಸು ನನಸಾಗಲಿಲ್ಲ

ಕ್ವಾರ್ಟರ್ ಫೈನಲ್ ಕನಸು ನನಸಾಗಲಿಲ್ಲ

ನೈಜೀರಿಯಾ ತಂಡ ಕ್ವಾರ್ಟರ್ ಫೈನಲ್ ಕನಸು ಇನ್ನೂ ನನಸಾಗಿಲ್ಲ. ಸತತವಾಗಿ ಮೂರನೇ ಬಾರಿ 16ರ ಹಂತ ದಾಟಲಾಗದೆ ಮನೆಗೆ ಹಿಂತಿರುಗುತ್ತಿದೆ.

ಸಮಬಲದ ಹೋರಾಟ ಕಂಡು ಬಂದಿತು

ಸಮಬಲದ ಹೋರಾಟ ಕಂಡು ಬಂದಿತು

ಫ್ರಾನ್ಸ್ 48% ಚೆಂಡಿನ ಹಿಡಿತ ಸಾಧಿಸಿದರೆ, ನೈಜೀರಿಯಾ 52% ಹೊಂದಿತ್ತು. ಎರಡು ತಂಡಗಳು 2 ಬಾರಿ ಮಾತ್ರ ಬದಲಿ ಆಟಗಾರರನ್ನು ಬಳಸಿದ್ದು ಕುತೂಹಲಕಾರಿಯಾಗಿತ್ತು. ಫ್ರಾನ್ಸಿಗೆ 12 ಕಾರ್ನರ್ಸ್ ಸಿಕ್ಕರೆ, ನೈಜೀರಿಯಾ 9 ಬಾರಿ ಅವಕಾಶ ಸಿಕ್ಕಿತ್ತು.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+