Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ : ಭಾರತ-ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ 'ಹೌಸ್ ಫುಲ್'

ಆಡಿಲೇಡ್, ಫೆ.6: ವಿಶ್ವಕಪ್ ಟೂರ್ನಿ ಫೆ.14ರಂದು ಆರಂಭಗೊಳ್ಳಲಿದ್ದು ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಫೆ.15ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಧೋನಿ ತಂಡ ಆಡಲಿದೆ. ಮೊದಲ ಅಭ್ಯಾಸ ಪಂದ್ಯಕ್ಕೆ ಪ್ರೇಕ್ಷಕರು ಮುಗಿ ಬಿದ್ದಿದ್ದು ಪಾಸ್ ಗಳು ಸಂಪೂರ್ಣ ಮಾರಾಟವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಶುಕ್ರವಾರ ಟಿಕೆಟ್ ಮಾರಾಟ ವಿವರಗಳನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಅಭ್ಯಾಸ ಪಂದ್ಯ (ಫೆ.8) ಹಾಗೂ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ(ಫೆ.9) ದ ಟಿಕೆಟ್ ಗಳು ಹಂಚಲಾಗಿದೆಯಂತೆ.[ವಿಶ್ವಕಪ್ ಅಪ್ಲಿಕೇಷನ್ ಇಳಿಸಿಕೊಳ್ಳೋದು ಹೇಗೆ?]

Full house: No tickets left for India-Australia World Cup warm-up match

ಅಭ್ಯಾಸ ಪಂದ್ಯಗಳ ಟಿಕೆಟ್ ಗಳು ಉಚಿತವಾಗಿದ್ದು, ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಪಡೆದುಕೊಂಡು ಹೋಗಿದ್ದಾರೆ.

ವಾರಾಂತ್ಯಗಳಲ್ಲಿ ಅಭ್ಯಾಸ ಪಂದ್ಯ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಐಸಿಸಿ ಹೇಳಿದೆ. ಅಭ್ಯಾಸ ಪಂದ್ಯದ ಟಿಕೆಟ್ ಪಡೆಯಲು ಕೂಡಾ ವೆಬ್ ಸೈಟ್ ಆರಂಭಿಸಲಾಗಿದ್ದು, ಕ್ರಿಕೆಟ್ ವರ್ಲ್ಡ್ ಕಪ್.ಕಾಂ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ 7,50,000 ಟಿಕೆಟ್ ಮಾರಾಟ ಮಾಡಿರುವ ಐಸಿಸಿ, ವೆಬ್ ಸೈಟ್, ಆಂಡ್ರಾಯ್ಡ್ ಅಪ್ಲಿಕೇಷನ್ ಮೂಲಕ ಕೂಡಾ ಟಿಕೆಟ್ ಮಾರುತ್ತಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿರುವ ಟೀಂ ಇಂಡಿಯಾ, ಫೆ.8 ಅಫ್ಘಾನಿಸ್ತಾನದ ಜೊತೆ ಸೆಣಸಲಿದೆ. ಫೆ.15 ರಂದು ಪಾಕಿಸ್ತಾನ ಜೊತೆ ಕಾದಾಡಲಿದೆ. [ಭಾರತ-ಪಾಕಿಸ್ತಾನ ಕದನ ಟಿಕೆಟ್ ದಾಖಲೆ ಮಾರಾಟ]

ಒಟ್ಟಾರೆ 14 ಅಭ್ಯಾಸ ಪಂದ್ಯವಾಡಲಿದ್ದು ಯಾವ ಅಭ್ಯಾಸ ಪಂದ್ಯಕ್ಕೂ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮಾನ್ಯತೆ ಇರುವುದಿಲ್ಲ. ಅಭ್ಯಾಸ ಪಂದ್ಯಗಳಲ್ಲಿ 11 ಆಟಗಾರರ ಬದಲಿಗೆ 15 ಆಟಗಾರರನ್ನು ಕಣಕ್ಕಿಳಿಸಬಹುದಾಗಿದೆ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+