For Quick Alerts
ALLOW NOTIFICATIONS  
For Daily Alerts

ಲಿಯೋನೆಲ್ ಮೆಸ್ಸಿ ಧೂಳಿಪಟ ಮಾಡಿದ ದಾಖಲೆಗಳು

By Mahesh

ಬಾರ್ಸಿಲೋನಾ, ನ.24: ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಲಾ ಲೀಗಾದಲ್ಲಿ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ.

ಬಾರ್ಸಿಲೋನಾ ಪರ ಆಡುವ ಮೆಸ್ಸಿ ಸೆವಿಲ್ಲಾ ತಂಡದ ವಿರುದ್ಧ ಹ್ಯಾಟ್ರಿಕ್ ಸಾಧಿಸುವ ಮೂಲಕ ಸ್ಪಾನೀಷ್ ಫುಟ್ಬಾಲ್ ಲೀಗ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡರು.

ಮೆಸ್ಸಿ ಮಾಡಿರುವ ದಾಖಲೆಗಳನ್ನು ಸದ್ಯಕ್ಕಂತೂ ಯಾರೂ ಮುರಿಯಲು ಸಾಧ್ಯವಿಲ್ಲ, ಮೆಸ್ಸಿ ಆಟವನ್ನು ನೋಡುವುದೇ ಆನಂದ ಎಂದು ಬಾರ್ಸಿಲೋನಾ ಕೋಚ್ ಲೂಯಿಸ್ ಎನ್ರಿಕ್ಯೂ ಹೇಳಿದ್ದಾರೆ. [ಹಣ ಹಂಚಿದ ಫುಟ್ಬಾಲ್ ತಾರೆಯರು]

Full list of records broken by Lionel Messi

ಅತ್ಯಧಿಕ ಗೋಲುಗಳ ಸುಮಾರು 59ವರ್ಷ ಹಳೆಯ ದಾಖಲೆ ಮುರಿದಿರುವ ಮೆಸ್ಸಿ 288 ಪಂದ್ಯಗಳಿಂದ 253 ಗೋಲು ಗಳಿಸಿದ್ದಾರೆ. ಇದಕ್ಕೂ ಮುನ್ನ 1955ರಲ್ಲಿ ಅಥ್ಲೆಟಿಕೋ ಬಿಲ್ಬೋ ಕ್ಲಬ್ ಪರ ಆಡುತ್ತಿದ್ದ ಟೆಲ್ಮೋ ಜರಾ ಎಂಬ ಆಟಗಾರ 251 ಗೋಲು ಗಳಿಸಿದ್ದು ದಾಖಲೆಯಾಗಿತ್ತು.[ಮೆಸ್ಸಿಗೆ ಗೋಲ್ಡನ್ ಬಾಲ್]

ತಮ್ಮ 13ನೇ ವಯಸ್ಸಿನಲ್ಲೇ ಬಾರ್ಸಿಲೋನಾ ಕ್ಯಾಂಪಿನಲ್ಲಿ ಕಾಣಿಸಿಕೊಂಡ ಮೆಸ್ಸಿ 2004-05ರಲ್ಲಿ ಅಧಿಕೃತವಾಗಿ ಪ್ರತಿಷ್ಠಿತ ಕ್ಲಬ್ ನ ಸ್ಟಾರ್ ಆಟಗಾರನಾಗಿ ಮುಂದುವರೆದಿದ್ದಾರೆ. ಸುಮಾರು 10 ಸೀಸನ್ ಗಳ ನಂತರ 27 ವರ್ಷ ವಯಸ್ಸಿನ ಅದ್ಭುತ ಆಟಗಾರ ಫುಟ್ಬಾಲ್ ಲೀಗ್ ನ ಅತಿಹೆಚ್ಚು ಗೋಲುಗಳ ಸರದಾರ ಎನಿಸಿದ್ದಾನೆ. [ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು]

ಮೆಸ್ಸಿ ಧೂಳಿಪಟ ಮಾಡಿದ ದಾಖಲೆಗಳ ವಿವರ(ನವೆಂಬರ್ 23, 2014ರ ಅನ್ವಯ)
* ಲಾ ಲೀಗಾ ಟಾಪ್ ಸ್ಕೋರರ್ : 253 ಗೋಲು (288 ಪಂದ್ಯಗಳು)
* ಬಾರ್ಸಿಲೋನಾ ಪರ ಟಾಪ್ ಸ್ಕೋರರ್: 368
* ಚಾಂಪಿಯನ್ಸ್ ಲೀಗ್ ಟಾಪ್ ಸ್ಕೋರರ್: 71 (ಜಂಟಿಯಾಗಿ ಸ್ಪೇನಿನ ರೌಲ್)
* ಲಾ ಲೀಗಾ ಸೀಸನ್ ನ ಹೆಚ್ಚು ಗೋಲು: 50
* ಒಂದು ಋತುವಿನಲ್ಲಿ ಹೆಚ್ಚು ಗೋಲು : 68
* ಸತತವಾಗಿ ಹೆಚ್ಚು ಲಾ ಲೀಗಾ ಪಂದ್ಯಗಳಲ್ಲಿ ಗೋಲು ಗಳಿಕೆ: 21
* ಹೆಚ್ಚು ಫೀಫಾ ಶ್ರೇಷ್ಠ ಆಟಗಾರ ಪ್ರಶಸ್ತಿ(Ballon d'Or) : 4(2010-13)
* ಯುರೋಪಿಯನ್ ಪಂದ್ಯವೊಂದರಲ್ಲೇ ಹೆಚ್ಚು ಗೋಲು: 5 (ಗರ್ಡ್ ಮುಲ್ಲರ್ ಜೊತೆ ಜಂಟಿ)
* ಎಲ್ ಕ್ಲಾಸಿಕಾಸ್ ನಲ್ಲಿ ಹೆಚ್ಚು ಗೋಲು: 21
* ಲಾ ಲೀಗಾ ಋತುವೊಂದರಲ್ಲೇ ಹೆಚ್ಚು ಹ್ಯಾಟ್ರಿಕ್ : 8 (2004-05)
* ಕ್ಲಬ್ ವಿಶ್ವಕಪ್ ನಲ್ಲಿ ಹೆಚ್ಚು ಗೋಲು: 4 (ಡೆನಿಲ್ಸನ್ ಜೊತೆ ಜಂಟಿಯಾಗಿ)
* ಹೆಚ್ಚು ಗೋಲುಗಳು ವರ್ಷವೊಂದರಲ್ಲಿ: 91 (2012)

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+