ಜಪಾನ್ ಒಲಿಂಪಿಕ್ಸ್‌ಗೆ ಅಸ್ತು ಎಂದ 'ಜಿ7' ರಾಷ್ಟ್ರಗಳು

ಜಪಾನ್‌ನ 2020ರ ಸಮ್ಮರ್ ಒಲಿಂಪಿಕ್ಸ್‌ನ್ನು ಜುಲೈ 23ರಂದು ಆರಂಭಿಸಿ ಆಗಸ್ಟ್ 8ರಂದು ಮುಗಿಸಲು ಜಪಾನ್ ಚಿಂತನೆಯನ್ನು ನಡೆಸಿತ್ತು. ಆದರೆ ಕೊರೊನಾವೈರಸ್ ನಡುವೆ ಒಲಿಂಪಿಕ್ಸ್ ನಡೆಸುವುದು ಕಷ್ಟ ಮತ್ತು ಇದಕ್ಕೆ ಇತರೆ ದೇಶಗಳು ಒಪ್ಪಿಗೆ ನೀಡಲಿವೆಯೇ ಎಂಬ ಪ್ರಶ್ನೆ ಮೂಡಿತ್ತು.
ಈ ಎಲ್ಲಾ ಗೊಂದಲಗಳಿಗೆ ಇದೀಗ ತೆರೆ ಬಿದ್ದಿದ್ದು ಜಿ ಸೆವೆನ್ ರಾಷ್ಟ್ರಗಳು ಜಪಾನ್ ಒಲಿಂಪಿಕ್ಸ್ ನಡೆಸಲು ಸಮ್ಮತಿಯನ್ನು ಸೂಚಿಸಿವೆ. ಎಲ್ಲಾ ಜಿ ಸೆವೆನ್ ರಾಷ್ಟ್ರಗಳು ಕೂಡ ಜಪಾನ್ ಒಲಿಂಪಿಕ್ಸ್ ಟೂರ್ನಿಯನ್ನು ನಡೆಸಲು ಸಮ್ಮತಿ ಸೂಚಿಸಿವೆ ಎಂಬ ವಿಷಯವನ್ನು ಜಪಾನ್ ಪ್ರಧಾನಮಂತ್ರಿ ಯೋಶಿಹಿದೆ ಸುಗಾ ಹಂಚಿಕೊಂಡಿದ್ದಾರೆ.
'ಕೊವಿಡ್ 19 ಮೀರಿಸುವಲ್ಲಿ ಜಾಗತಿಕ ಏಕತೆಯ ಸಂಕೇತವಾಗಿ ಟೋಕಿಯೋ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್ 2020ನ್ನು ಸುರಕ್ಷಿತ ಮತ್ತು ಸರಿಯಾದ ಮಾರ್ಗದಲ್ಲಿ ನಡೆಸಲು ನಮ್ಮೆಲ್ಲರ ಸಹಮತ ಇದೆ' ಎಂದು ಜಿ ಸೆವೆನ್ ಕಮ್ಯುನಿಕ್ ತಿಳಿಸಿದೆ. ಹೀಗಾಗಿ ಈ ಹಿಂದೆ ತೀರ್ಮಾನಿಸಿದಂತೆ ಜುಲೈ 23ರಂದು ಜಪಾನ್ ಒಲಿಂಪಿಕ್ಸ್ ಆರಂಭವಾಗಲಿದ್ದು ಈಗಾಗಲೇ ಕೆಲ ಕ್ರೀಡಾಪಟುಗಳಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications