ಕ್ರಿಕೆಟಿಗ ಗೌತಮ್ ಗಂಭೀರ್, ಫುಟ್ಬಾಲಿಗ ಸುನಿಲ್ ಛೆಟ್ರಿಗೆ ಪದ್ಮಶ್ರೀ ಗೌರವ

ನವದೆಹಲಿ, ಜನವರಿ 26: ವಿಶಿಷ್ಟ ಸಾಧನೆಗಾಗಿ ಪರ್ವತಾರೋಹಿ ಬಚೇಂದ್ರಿ ಪಾಲ್‌ಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಗೌರವ ಲಭಿಸಿದೆ. ಭಾರತದ ಕ್ರಿಕೆಟಿಗ ಗೌತಮ್ ಗಂಭೀರ್, ಫುಟ್ಬಾಲ್ ಸ್ಟಾರ್ ಸುನಿಲ್ ಛೆಟ್ರಿ, ಕುಸ್ತಿಪಟು ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ.
70ನೇ ವರ್ಷದ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತ ಸರ್ಕಾರ 2019ರ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದೆ. ಭಾರತದ ನಾಲ್ಕನೇ ಅತ್ಯುನ್ನತ ಗೌರವವಾದ 'ಪ್ರದ್ಮಶ್ರೀ' ಪಟ್ಟಿಯಲ್ಲಿ ಛೆಟ್ರಿ, ಗಂಭೀರ್, ಪೂನಿಯಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರ ಒಟ್ಟು 94 ಹೆಸರುಗಳು ಸೇರಿವೆ.
ಈ ವರ್ಷ ಪ್ರಕಟಗೊಂಡಿರುವ ಪದ್ಮಶ್ರೀ ಪಟ್ಟಿಯಲ್ಲಿ ದ್ರೋಣವಲ್ಲಿ ಹಾರಿಕಾ (ಚೆಸ್), ಶರತ್ ಕಮಲ್ (ಟೇಬಲ್ ಟೆನ್ನಿಸ್), ಬೊಂಬಾಯ್ಲಾ ದೇವಿ ಲೈಶ್ರಾಮ್ (ಬಿಲ್ಲುಗಾರಿಕೆ), ಅಜಯ್ ಠಾಕೂರ್ (ಕಬಡ್ಡಿ) ಮತ್ತು ಪ್ರಶಾಂತಿ ಸಿಂಗ್ (ಬಾಸ್ಕೆಟ್ ಬಾಲ್) ಹೆಸರುಗಳಿದ್ದು, ಈ ಸಾಧಕರು ಗೌರವಕ್ಕೆ ಪಾತ್ರರಾಗಿದ್ದಾರೆ.
Story first published: Saturday, January 26, 2019, 12:45 [IST]
Other articles published on Jan 26, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications