Commonwealth Games: ಕಡಿಮೆ ಕ್ರೀಡೆಯಿಂದಾಗಿ ಭಾರತದ ಪದಕದ ಆಸೆಗೆ ಪೆಟ್ಟು ಬೀಳುತ್ತದಾ?
ನವದೆಹಲಿ: ಪ್ರಸಕ್ತ ಸಾಲಿನ ಕಾಮನ್ ವೆಲ್ತ್ ಗೇಮ್ಸ್ 2026 ಗ್ಲಾಸ್ಗೋದಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಿ ಜುಲೈ 23 ರಿಂದ ಆಗಸ್ಟ್ 2 ವರೆಗೆ ನಡೆಯಲಿಯಲಿದೆ. ಈ ಕ್ರೀಡಾ ಕೂಟದಲ್ಲಿ 10 ವಿವಿಧ ಕ್ರೀಡೆಗಳು ನಡೆಯಲಿವೆ.
ಕಳೆದ ಬಾರಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕ್ರೀಡಾ ಕೂಡದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ 61 ಪದಕಗಳನ್ನು ಪಡೆದು ಬೀಗಿತ್ತು. ಆದರೆ ಈ ಬಾರಿ ಕ್ರೀಡಾಕೂಟದಲ್ಲಿ ಹಲವು ವಿಭಾಗಗಳಿಗೆ ಕತ್ತರಿ ಬಿದ್ದಿದೆ. ಹೀಗಾಗಿ ಭಾರತೀಯ ಪದಕಗಳ ಆಸೆಗೆ ಪೆಟ್ಟು ಬಿದ್ದಿದೆ.

ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾ ಕೂಟದಿಂದ ಬ್ಯಾಡ್ಮಿಂಟನ್, ಕುಸ್ತಿ, ಟೇಬಲ್ ಟೆನಿಸ್, ಹಾಕಿ, ಸ್ಕ್ವಾಷ್, ಕ್ರಿಕೆಟ್ ಕೀಡೆಗಳನ್ನು ಈ ಬಾರಿ ಕೈ ಬಿಡಲಾಗಿದೆ. 2022ರ ಕ್ರೀಡಾ ಕೂಟದಲ್ಲಿ ಭಾರತ ಭಾಗವಹಿಸದ ಬೀಚ್ ವಾಲಿಬಾಲ್ ಹಾಗೂ ಸೆವೆನ್ ರಗ್ಬಿಯನ್ನು ಸಹ ಈ ಕ್ರೀಡಾಕೂಟದಿಂದ ಕೈ ಬಿಡಲಾಗಿದೆ. ಕಳೆದ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅತಿ ಹೆಚ್ಚು ಪದಕಗಳ ಬೇಟೆ ನಡೆಸಿದ್ದ ಕುಸ್ತಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಕ್ರೀಡೆಯನ್ನು ಕೈ ಬಿಟ್ಟಿದ್ದು ಭಾರತಕ್ಕೆ ಪೆಟ್ಟು ಬಿದ್ದಿದೆ. ಇದೇ ವಿಭಾಗದಲ್ಲಿ ಭಾರತ ಕಳೆದ ಕ್ರೀಡಾಕೂಟದಲ್ಲಿ 25 ಪದಕಗಳನ್ನು ಗೆದ್ದುಕೊಂಡಿತ್ತು.
ಈ ಬಾರಿಯ ಕ್ರೀಡಾ ಕೂಟದಲ್ಲಿ ಕೇವಲ 10 ವಿಭಾಗಗಳಲ್ಲಿ ಕ್ರೀಡಾ ಪಟುಗಳು ಕಣಕ್ಕೆ ಇಳಿಯಲಿದ್ದು, ಭಾರತದ ಪದಕದ ನಿರೀಕ್ಷೆಗೆ ಹೊಡೆತ ಬಿದ್ದಿದೆ. ಕಳೆದ ಬಾರಿಯ ಕ್ರೀಡಾಕೂಟದಲ್ಲಿದ್ದ ಹಲವು ಕ್ರೀಡೆಗಳು ಈ ಬಾರಿ ಸೇರಿಸಲಾಗಿಲ್ಲ. ಹೀಗಾಗಿ ಇದರ ನೇರ ಪರಿಣಾಮ ಭಾರತದ ಚಿನ್ನದ ಪದಕಗಳ ಮೇಲೂ ಬೀಳಲಿದೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಪದಕದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ಕ್ರೀಡಾ ಕೂಟದಲ್ಲಿ 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕ ಗೆದ್ದು ಸಾಧನೆ ಮಾಡಿತ್ತು. ಅಲ್ಲದೆ 205 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಗೆದ್ದ 22 ಬಂಗಾರ ಪದಕಗಳು 13 ವಿವಿಧ ಕ್ರೀಡೆಯಲ್ಲಿ ಬಂದಿದ್ದವು. ಆದರೆ ಈ ಬಾರಿ ಆ ಕ್ರೀಡಾಕೂಟವನ್ನು ಕೈ ಬಿಡಲಾಗಿದೆ.
124 ಕ್ರೀಡಾಪಟುಗಳು ಕಣಕ್ಕೆ
ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 6 ಚಿನ್ನದ ಪದಕಗಳನ್ನು ಕುಸ್ತಿಯಲ್ಲಿ, 4 ಟೇಬಲ್ ಟೆನಿಸ್‌ನಲ್ಲಿ, ಬ್ಯಾಡ್ಮಿಂಟನ್‌ನಲ್ಲಿ 3 ಬಂಗಾರದ ಪದಕ ಗೆದ್ದಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಭಾರತದ ಪದಕದ ಬೇಟೆಗೆ ಪೆಟ್ಟು ಬೀಳಲಿದೆ. ಗ್ಲಾಸ್ಗೋದಲ್ಲಿ ನಡೆಯಲಿರುವ ಕ್ರೀಡಾ ಕೂಟದಲ್ಲಿ ಭಾರತದ 124 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
ಕುಸ್ತಿಯಲ್ಲಿ 12 ಪದಕ
ಕಳೆದ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಕುಸ್ತಿ ವಿಭಾಗದಲ್ಲಿ ಪದಕದ ಬೇಟೆ ನಡೆಸಿತ್ತು. ಈ ವೇಳೆ ಕ್ರೀಡಾಪಟುಗಳು 6 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದಿದ್ದರು. ಪರಿಣಾಮ ಪದಕದ ಬೇಟೆಯಲ್ಲಿ ಕುಸ್ತಿ ವಿಭಾಗದ ಶೇಕಡಾ 19 ಕ್ಕಿಂತಲೂ ಹೆಚ್ಚಿನ ಕಾಣಿಕೆ ನೀಡಿತ್ತು.
ಭಾರತ ಅತಿ ಹೆಚ್ಚು ಪದಕಗಳನ್ನು ಕುಸ್ತಿ ಬಿಟ್ಟಂತೆ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಗೆದ್ದುಕೊಂಡಿತ್ತು. ಈ ವಿಭಾಗದಲ್ಲಿ ಭಾರತ 4 ಚಿನ್ನ, 1 ಬೆಳ್ಳಿ, 2 ಕಂಚಿನ ಗೆದ್ದು ಬೀಗಿತ್ತು. ಇನ್ನು ಬ್ಯಾಡ್ಮಿಂಟನ್ ವಿಭಾಗದಲ್ಲಿ 3 ಬಂಗಾರ, 1 ಬೆಳ್ಳಿ 2 ಕಂಚಿನ ಸಾಧನೆ ಮಾಡಿತ್ತು. ಈ ಕ್ರೀಡಾಕೂಟದಿಂದ ಕ್ರಿಕೆಟ್ ಹಾಗೂ ಹಾಕಿ ಕ್ರೀಡೆಯನ್ನು ಕೈ ಬಿಟ್ಟಿದ್ದು ಭಾರತದ ಪದಕದ ಆಸೆಗೆ ಪೆಟ್ಟು ಬಿದ್ದಿದೆ.
ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತದ ಪರ ಯಾವೆಲ್ಲಾ ಕ್ರೀಡಾಪಟುಗಳು ಅಬ್ಬರಿಸುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications