ಕವಾಡಿಗನ ಮಗನಿಗೆ ಮತ್ತೆ ವಿಶ್ವ ಚಾಂಪಿಯನ್ ಕಿರೀಟ
ಲಾಸ್ ವೇಗಾಸ್, ಜುಲೈ 24: ಕೆಲ ದಿನಗಳ ಹಿಂದೆ ವಿಶ್ವ ಬಾಲಕರ ಗಾಲ್ಫ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ
ಹರ್ಯಾಣದ ಅಶಿಕ್ಷಿತ ಕವಾಡಿಗರೊಬ್ಬರ 10 ವರ್ಷದ ಬಾಲಕ ಶುಭಂ ಜಗ್ಲಾನ್ ಈಗ ಮತ್ತೊಮ್ಮೆ ಮತ್ತೊಂದು ವಿಶ್ವ ಚಾಂಪಿಯನ್ ಶಿಪ್ ಗೆದ್ದಿದ್ದಾರೆ.
ಹರ್ಯಾಣದ ಪಾಣಿಪತ್ ಜಿಲ್ಲೆಯ ಇಸ್ರಾನ ಎಂಬ ರೈತ, ಹಾಲು ಮಾರಾಟಗಾರ (ಕವಾಡಿಗ) ಹಳ್ಳಿಯ ಶುಭಂ ಈ ಚಾಂಪಿಯನ್ ಶಿಪ್ ನಲ್ಲಿ ಮೂರು ದಿನಗಳಿಂದ ಮೂರು ಸುತ್ತಿನ ಪಂದ್ಯಗಳನ್ನು ಆಡಿ, ಒಟ್ಟು 179 ಅಂಕವನ್ನು ಗಿಟ್ಟಿಸಿಕೊಂಡು ಅಂಡರ್-10 ವಿಭಾಗದ ಗಾಲ್ಫ್ ಚಾಂಪಿಯನ್‌ಷಿಪ್ ಗೆದ್ದುಕೊಂಡಿದ್ದರು.
ಕ್ಯಾಲಿಫೋರ್ನಿಯಾದ ವೆಲ್ಕ್ ರೆಸಾರ್ಟ್ ಫೌಂಟನ್ ಕೋರ್ಸ್ ನಲ್ಲಿ ಜ್ಯೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್ ಕಿರೀಟ ಧರಿಸಿದ್ದರು. [ರೈತನ ಮಗನಾಗಿ ವಿಶ್ವ ಗಾಲ್ಫ್ ಚಾಂಪಿಯನ್ ಗೆದ್ದಿದ್ದು ಹೆಮ್ಮೆ]

ಎರಡನೇ ಚಾಂಪಿಯನ್ ಶಿಪ್: ಐದು ಸ್ಟ್ರೋಕ್ ಗಳಿಂದ ಮೂರು ಸುತ್ತಿನಲ್ಲಿ 106 ಅಂಕಗಳಿಸಿದ ಶುಭಂ ಅವರು ಅಮೆರಿಕದ ಜಸ್ಟೀನ್ ಡಾಂಗ್ ಹಾಗೂ ಶಿಹಾನ್ ಸಂಧು ಅವರನ್ನು ಹಿಂದಿಕ್ಕಿದರು.
ಥೈಲ್ಯಾಂಡ್ ನ ಪೊಂಗ್ ಸಪಾಕ್ ಲೋಪಾಕ್ಡಿ ಕೂಡಾ ಶುಭಂ ಓಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಏಂಜೆಲ್ ಪಾರ್ಕ್ ನಲ್ಲಿ ನಡೆದ 9-10 ವರ್ಷ ವಯೋಮಿತಿ ವಿಭಾಗದಲ್ಲಿ ಶುಭಂ ಅವರು ಎರಡು ವಾರದೊಳಗೆ ಎರಡನೇ ಬಾರಿ ವಿಶ್ವ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ.
ಕಳೆದ ವರ್ಷ ರನ್ನರ್ಸ್-ಅಪ್ ಪ್ರಶಸ್ತಿ ಜಯಿಸಿರುವ ಶುಭಂ, ಈ ವರ್ಷ ಎರಡು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಅಮಿತ್ ಲೂಥ್ರಾರ ಗಾಲ್ಫ್ ಫೌಂಡೇಶನ್ ನೆರವಿನಿಂದ ಶುಭಂ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications