2020ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ 10 ಟೂರ್ನಿಗಳಿವು

ಬೆಂಗಳೂರು: 2020ನೇ ವರ್ಷದ ಕೊನೇ ಕ್ಷಣದಲ್ಲಿ ನಾವಿದ್ದೇವೆ. 2020ರ ಇಸವಿ ಒಂದಿಷ್ಟು ಖುಷಿ ತಂದಿದ್ದರೆ, ಮತ್ತೊಂದಿಷ್ಟು ಬೇಸರಕ್ಕೂ ಕಾರಣವಾಗಿರಬಹುದು. ಕಹಿಯನ್ನೆಲ್ಲಾ ಮರೆತು ಖುಷಿಯನ್ನಷ್ಟೇ ಮೆಲಕು ಹಾಕುತ್ತ ನಾವು ಹೊಸ ವರ್ಷವನ್ನು ಬರಮಾಡಿಕೊಳ್ಳಬೇಕು, ಮುಂದಡಿಯಿಡಬೇಕು.
2020ರ ಇಸವಿ ಕ್ರೀಡಾಕ್ಷೇತ್ರಕ್ಕೆ ಅಂಥ ಒಳ್ಳೆಯ ವರ್ಷವಾಗಿರಲಿಲ್ಲ. ಕಾರಣ ಈ ವರ್ಷ ಅನೇಕ ಪ್ರತಿಷ್ಠಿತ ಕ್ರೀಡಾಕೂಟಗಳು ಕೊರೊನಾ ವೈರಸ್ ಕಾರಣಕ್ಕಾಗಿ ರದ್ದಾಗಿದ್ದವು. ಆದರೂ ವರ್ಷದ ಕೊನೇ ಕ್ಷಣಗಳಲ್ಲಿ ಒಂದಿಷ್ಟು ಕ್ರೀಡಾಕೂಟಗಳು ಯಶಸ್ವಿಯಾಗಿ ನಡೆದಿದೆ, ನಡೆಯುತ್ತಿದೆ.
2020ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಬಾರಿ ಹುಡುಕಲ್ಪಟ್ಟ ಕ್ರೀಡಾಸ್ಪರ್ಧೆಗಳಾವುವು ಅಂತ ಮಾಹಿತಿ ಕಲೆ ಹಾಕಿದರೆ ಅತೀ ಹೆಚ್ಚು ಹುಡುಕಲ್ಪಟ್ಟ ಟೂರ್ನಿಯಲ್ಲಿ ಹೆಚ್ಚಿನವು ಫುಟ್ಬಾಲ್ ಟೂರ್ನಿಗಳು ಅನ್ನೋದು ವಿಶೇಷ. ಇನ್ನು ಕ್ರಿಕೆಟ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹೆಚ್ಚು ಹುಡುಕಲ್ಪಟ್ಟಿದೆ.
2020ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾ ಸ್ಪರ್ಧೆಗಳು ಕೆಳಗಿವೆ
1) ಇಂಡಿಯನ್ ಪ್ರೀಮಿಯರ್ ಲೀಗ್
2) ಯುಇಎಫ್ಎ ಚಾಂಪಿಯನ್ಸ್ ಲೀಗ್
3) ಇಂಗ್ಲಿಷ್ ಪ್ರೀಮಿಯರ್ ಲೀಗ್
4) ಫ್ರೆಂಚ್ ಓಪನ್
5) ಲಾ ಲಿಗಾ
6) ಸೀರೀ ಎ
7) ಆಸ್ಟ್ರೇಲಿಯನ್ ಓಪನ್
8) ಎನ್ಬಿಎ ಬಾಸ್ಕೆಟ್‌ಬಾಲ್ ಲೀಗ್
9) ಯುಇಎಫ್ಎ ಯುರೋಪಾ ಲೀಗ್
10) ಯುಇಎಫ್ಎ ನೇಷನ್ಸ್ ಲೀಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications