Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಪ್ರದರ್ಶನ ಹೇಗಿದೆ?' ಎಂಬ ಪ್ರಶ್ನೆಗೆ ಶಾಕಿಂಗ್ ಉತ್ತರ ನೀಡಿದ ಧನದಾಹಿ ಮಾಜಿ ಪತ್ನಿ

2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಬಿರುಗಾಳಿ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಭಾರತದ ವೇಗಿ ಮೊಹಮ್ಮದ್ ಶಮಿ ಕೈಯಲ್ಲಿ ಚೆಂಡನ್ನು ಹಿಡಿದಿಟ್ಟುಕೊಂಡೇ ಜೀವನ ಸಾಗಿಸುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಗಾಯಗೊಂಡು ಹೊರಗುಳಿದ ಬಳಿಕ ಮೊಹಮ್ಮದ್ ಶಮಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸುವ ಮೊದಲು ಆರಂಭಿಕ ನಾಲ್ಕು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು.

ನಂತರ ಮೊಹಮ್ಮದ್ ಶಮಿ ಆಡಿದ 4 ಪಂದ್ಯಗಳಿಂದ ಎರಡು ಬಾರಿ ಐದು ವಿಕೆಟ್ ಸೇರಿದಂತೆ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೊಹಮ್ಮದ್ ಶಮಿ ಮೈದಾನದಲ್ಲಿ ಗೆದ್ದಿದ್ದಾರೆ. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ. ಅವರ ವೈವಾಹಿಕ ಜೀವನ ಅಷ್ಟೊಂದು ಚೆನ್ನಾಗಿಲ್ಲ.

mohammed-shami-cricket-world-cup-performace


ಮೊಹಮ್ಮದ್ ಶಮಿ ವಿರುದ್ಧ ಅವರ ವಿಚ್ಚೇದಿತ ಪತ್ನಿ ಹಸಿನ್ ಜಹಾನ್ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಹೊರಿಸಿದ್ದರಿಂದ ಕೋಲ್ಕತ್ತಾದ ಅಲಿಪುರ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ ಮತ್ತು ಕೋರ್ಟ್‌ ಶಮಿಗೆ ಜಾಮೀನು ಮಂಜೂರು ಮಾಡಿದೆ.

ಸದ್ಯ ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಪ್ರದರ್ಶನದಿಂದ ಭಾರತ ತಂಡ ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಅವರ ಮಾಜಿ ಪತ್ನಿ ಹಸಿನ್ ಜಹಾನ್ ಮಾತ್ರ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ತನ್ನ ಮಾಜಿ ಪತಿಗೆ ಶುಭ ಹಾರೈಸುವುದಿಲ್ಲ. ಆದಾಗ್ಯೂ, ಮೊಹಮ್ಮದ್ ಶಮಿ ಉತ್ತಮವಾಗಿ ಆಟವಾಡುವುದನ್ನು ನೋಡಲು ನನಗೆ ಸಂತೋಷವಾಗಿದೆ. ಏಕೆಂದರೆ ನಮ್ಮ ಮಗಳ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಅವನು ಚೆನ್ನಾಗಿ ಹಣ ಗಳಿಸುತ್ತಾನೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ

mohammed-shami-cricket-world-cup-performace

"ನಾನು ಟೀಮ್ ಇಂಡಿಯಾಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ, ಆದರೆ ಅವನಿಗಲ್ಲ," ಎಂದು ಹಸಿನ್ ಜಹಾನ್ ಅವರು ನ್ಯೂಸ್ ನೇಷನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ಅದು ಏನೇ ಇರಲಿ, ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿದರೆ, ಭಾರತ ತಂಡದಲ್ಲಿ ಉಳಿದು ಉತ್ತಮ ಆದಾಯ ಗಳಿಸುತ್ತಾರೆ. ಅದು ಅವರ ಭವಿಷ್ಯವನ್ನು ಭದ್ರಪಡಿಸುತ್ತದೆ," ಎಂದು ಹಸಿನ್ ಜಹಾನ್ ನ್ಯೂಸ್ ನೇಷನ್‌ನಲ್ಲಿ ಹೇಳಿದ್ದಾರೆ.

ಒಂದೆರಡು ವರ್ಷಗಳ ಹಿಂದೆ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಭಾರತೀಯ ಕ್ರಿಕೆಟಿಗನ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ಹಿಂಸೆ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು.

mohammed-shami-cricket-world-cup-performace

ಆರೋಪದ ನಂತರ ಬಿಸಿಸಿಐ ಅವರ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ, ಬಿಸಿಸಿಐ ಮ್ಯಾಚ್ ಫಿಕ್ಸಿಂಗ್ ಆರೋಪಗಳು ನಿರಾಧಾರವೆಂದು ಪುನಃ ಒಪ್ಪಂದಕ್ಕೆ ಸಹಿ ಹಾಕಿತು.

ಮೊಹಮ್ಮದ್ ಶಮಿ ವಿರುದ್ಧ ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ಹಸಿನ್ ಜಹಾನ್ ಎಫ್‌ಐಆರ್ ಕೂಡ ದಾಖಲಿಸಿದ್ದರು. ಶಮಿ ಬೇರೆ ಬೇರೆ ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದರು ಮತ್ತು ಮಾತನಾಡುತ್ತಿದ್ದರು ಮತ್ತು ಪೋನ್ ರೆಕಾರ್ಡಿಂಗ್‌ಗಳನ್ನು ಹಂಚಿಕೊಂಡಿದ್ದಾರೆ ಎಂದು ಹಸಿನ್ ಜಹಾನ್ ಬಹಿರಂಗಪಡಿಸಿದ್ದರು.

ಮೊಹಮ್ಮದ್ ಶಮಿ 2018ರಿಂದ 2020ರವರೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಿದರು ಮತ್ತು ಒಮ್ಮೆ ಅಲ್ಲ, ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯೂ ಕೂಡ ಮಾಡಿದ್ದರು. ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ಅವರು ತಮ್ಮ ನಾಯಕ ರೋಹಿತ್ ಶರ್ಮಾಗೆ ಇದೇ ವಿಷಯವನ್ನು ಬಹಿರಂಗಪಡಿಸಿದ್ದರು.

ಆದರೆ ಕಠಿಣ ಅವಧಿಯಲ್ಲಿ ಮೊಹಮ್ಮದ್ ಶಮಿ ಪುಟಿದೆದ್ದರು. ಕೋವಿಡ್ ವೇಳೆ ಉತ್ತರಪ್ರದೇಶದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ನೆಟ್‌ಗಳನ್ನು ನಿರ್ಮಿಸಿ ದೀರ್ಘ ಸಮಯದ ಕಾಲ ಬೌಲಿಂಗ್ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಅವರ ಪ್ರಯತ್ನಗಳು ಉತ್ತಮವಾಗಿ ಬಂದವು. ನಂತರ ಮೊಹಮ್ಮದ್ ಶಮಿ ಭಾರತ ತಂಡಕ್ಕಾಗಿ ಎಲ್ಲ ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು.

2022ರ ಮೆಗಾ ಹರಾಜಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊಹಮ್ಮದ್ ಶಮಿ ಅವರು ಗುಜರಾತ್ ಟೈಟನ್ಸ್ ತಂಡಕ್ಕೆ ಆಯ್ಕೆಯಾದರು ಮತ್ತು ಅದೇ ವರ್ಷ ಅವರ ಮೊದಲ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದರು.

Story first published: Wednesday, November 8, 2023, 16:26 [IST]
Other articles published on Nov 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+