Neeraj Chopra: ಪಾಕ್‌ನ ಅರ್ಶದ್‌ರನ್ನು ಕರೆದು ಭಾರತದ ಧ್ವಜದ ಪಕ್ಕ ನಿಲ್ಲಿಸಿದ ನೀರಜ್ ಚೋಪ್ರಾ! ಭಾರಿ ಪ್ರಶಂಸೆ
ಭಾರತದ 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಈವೆಂಟ್‌ನಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ, ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನೀರಜ್ ಅವರು ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 88.17 ಮೀಟರ್‌ಗಳ ದೂರವನ್ನು ಎಸೆಯುವ ಮೂಲಕ ಚಿನ್ನವನ್ನು ಗೆದ್ದರು. ಚೋಪ್ರಾಗೆ ಪೈಪೋಟಿ ನೀಡಿದ ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ದೂರ ಕ್ರಮಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಫೈನಲ್ ನಂತರ, ಇಬ್ಬರು ಕ್ರೀಡಾಪಟುಗಳು ಮೈದಾನದಲ್ಲಿ ಅತ್ಯುತ್ತಮ ಕ್ಷಣವನ್ನು ಹಂಚಿಕೊಂಡರು ಅದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.

ನೀರಜ್ ಮತ್ತು ನದೀಮ್ ಬಹಳ ಸಮಯದಿಂದ ಮೈದಾನದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ. ಅವರ ಬಾಂಧವ್ಯ ಮೈದಾನದ ಆಚೆಗೂ ಅತ್ಯುತ್ತಮವಾಗಿದೆ. ಇಬ್ಬರ ನಡುವೆ ಕೂಡ ಉತ್ತಮ ಬಾಂಧವ್ಯ ಇರುವುದು, ಪರಸ್ಪರ ಗೌರವ ನೀಡುವುದನ್ನು ನೋಡಬಹುದಾಗಿದೆ.
ತ್ರಿವರ್ಣ ಧ್ವಜದ ಪಕ್ಕದಲ್ಲಿ ನದೀಮ್
ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ನದೀಮ್ ಮತ್ತೊಮ್ಮೆ 90 ಮೀಟರ್ ಮಾರ್ಕ್ ಅನ್ನು ದಾಟಲು ಬಯಸಿದ್ದರು ಆದರೆ ಅವರು ವಿಫಲರಾದರು. ಬುಡಾಪೆಸ್ಟ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಫೈನಲ್‌ನ ಮುಕ್ತಾಯದ ನಂತರ, ನೀರಜ್ ಮೈದಾನದಲ್ಲಿ ಛಾಯಾಚಿತ್ರಕ್ಕಾಗಿ ನದೀಮ್ ಅವರನ್ನು ಆಹ್ವಾನಿಸಿದರು. ಪಾಕ್‌ನ ಧ್ವಜ ಇಲ್ಲದೆ ಪಕ್ಕದಲ್ಲಿ ನಿಂತಿದ್ದ ನದೀಮ್ ತಕ್ಷಣ ನೀರಜ್ ಚೋಪ್ರಾ ಅವರ ಪಕ್ಕ ಬಂದು ನಿಂತು ಫೋಟೊಗೆ ಫೋಸ್ ಕೊಟ್ಟರು.
86.67 ಮೀಟರ್ ಎಸೆದು ಕಂಚಿನ ಪದಕ ಪಡೆದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಸಹ ನಿಂತರು. ಈವೆಂಟ್‌ನಲ್ಲಿ ನೀರಜ್ ಮತ್ತು ನದೀಮ್ ಇಬ್ಬರೂ ತಮ್ಮ ಸಾಧನೆಗಳಿಗಾಗಿ ಪರಸ್ಪರ ಅಭಿನಂದಿಸಿದ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಪೌಲ್‌ನೊಂದಿಗೆ ಆರಂಭ ಚಿನ್ನದ ಮೂಲಕ ಅಂತ್ಯ
ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ಆಗಿರುವ ನೀರಜ್ ಅವರು ಫೌಲ್‌ನೊಂದಿಗೆ ಪ್ರಾರಂಭಿಸಿದರು ಆದರೆ ಅವರ ಎರಡನೇ ಎಸೆತದಲ್ಲಿ ಅಗ್ರ ಸ್ಥಾನಕ್ಕೆ ಜಿಗಿದರು. ಆ ಕ್ಷಣದಿಂದ ಕೊನೆಯವರೆಗೂ ಅಗ್ರಸ್ಥಾನದಲ್ಲೇ ಮುಂದುವರೆಯುವ ಮೂಲಕ ಪ್ರಾಬಲ್ಯ ಮೆರೆದರು. ನದೀಮ್ ಮೂರನೇ ಸುತ್ತಿನಿಂದ ಅಂಕಪಟ್ಟಿಯಲ್ಲಿ ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡರು. ಭಾರತ ಮತ್ತು ಪಾಕಿಸ್ತಾನ ಕ್ರಮವಾಗಿ ಚಿನ್ನ ಬೆಳ್ಳಿ ಗೆದ್ದು ಸಂಭ್ರಮಿಸಿದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications