15 ದಿನಗಳಲ್ಲಿ 4ನೇ ಅಂತಾರಾಷ್ಟ್ರೀಯ ಚಿನ್ನ ಗೆದ್ದ ಅಥ್ಲೀಟ್ ಹಿಮಾ ದಾಸ್

ಪ್ರೇಗ್, ಜುಲೈ 18: ಭಾರತದ ಸ್ಟಾರ್ ಸ್ಟ್ರಿಂಟರ್ ಹಿಮಾ ದಾಸ್ ಕೇವಲ 15 ದಿನಗಳಲ್ಲಿ 4ನೇ ಅಂತಾರಾಷ್ಟ್ರೀಯ ಬಂಗಾರ ಗೆದ್ದಿದ್ದಾರೆ. ಝೆಕ್ ರಿಪಬ್ಲಿಕ್‌ನಲ್ಲಿ ಬುಧವಾರ (ಜುಲೈ 17) ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನ 200 ಮೀ. ಓಟದಲ್ಲಿ ಹಿಮಾ ಚಿನ್ನದ ಪದಕ ಕೊರಳೇರಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದ 200 ಮೀ. ಓಟವನ್ನು 23.25 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ದಾಸ್ ಬಂಗಾರದ ಪದಕ ಜಯಿಸಿಸಿದರು. ಇದೇ ವಿಭಾಗದ ರಜತ ಪದಕ ಭಾರತ ಮತ್ತೊಬ್ಬ ಕ್ರೀಡಾಪಟು ವಿಕೆ ವಿಸ್ಮಯ ಅವರಿಗೆ ಲಭಿಸಿತು. ವಿಸ್ಮಯ 23.43 ಸೆಕೆಂಡ್ ಸಾಧನೆ ತೋರಿದರು.
19ರ ಹರೆಯದ ದಾಸ್ ಜುಲೈ 2ರಂದು ಯುರೋಪ್‌ನಲ್ಲಿ ಮೊದಲ ಸ್ಪರ್ಧಾತ್ಮಕ ರೇಸ್ ಓಡಿದ್ದರು. ಇದರಲ್ಲಿ ಹಿಮಾಗೆ ಚಿನ್ನ ಲಭಿಸಿತ್ತು. ಕ್ಲಾಡೋ ಅಥ್ಲೆಟಿಕ್ಸ್ ಮೀಟ್, ಪೋಲೆಂಡ್‌ನಲ್ಲಿ ಪೊಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್, ಪೋಲೆಂಡ್‌ನಲ್ಲಿ ಕುಂಟೋ ಅಥ್ಲೆಟಿಕ್ಸ್ ಮೀಟ್, ಟ್ಯಾಬರ್ ಅಥ್ಲೆಟಿಕ್ಸ್ ಮೀಟ್ ಹೀಗೆ ಒಟ್ಟು 4 ಕ್ರೀಡಾಕೂಟಗಳಲ್ಲಿ ಹಿಮಾಗೆ ಬಂಗಾರ ದೊರೆತಿದೆ.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತದ ಪರ ವಿಶ್ವದ ಗಮನ ಸೆಳೆಯುತ್ತಿರುವ ದಾಸ್ ಇತ್ತೀಚೆಗಷ್ಟೇ ಮಾನವೀಯ ಗುಣಕ್ಕಾಗಿ ಭಾರತೀಯರ ಮನ ಗೆದ್ದಿದ್ದರು. ಅಸ್ಸಾಂ ರಾಜ್ಯದವರಾದ ದಾಸ್ ತನ್ನ ತಿಂಗಳ ಸಂಬಳದ ಅರ್ಧಪಾಲು ಹಣವನ್ನು ಅಸ್ಸಾಂ ಪ್ರವಾಹ ಪೀಡಿತರಿಗಾಗಿ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications