ಶೂಟಿಂಗ್: ಅಭಿಷೇಕ್ ವರ್ಮಾಗೆ ಒಲಿಂಪಿಕ್ಸ್ ಅರ್ಹತೆ

ಹೊಸದಿಲ್ಲಿ, ಏಪ್ರಿಲ್ 28: ತಮ್ಮನ್ನು ತಾವು ಹವ್ಯಾಸಿ ಶೂಟರ್ ಎಂದೇ ಹೇಳಿಕೊಳ್ಳುವ ಭಾರತದ ಪ್ರತಿಭಾನ್ವಿತ ಶೂಟರ್ ಅಭಿಷೇಕ್ ವರ್ಮಾ, ಬೀಜಿಂಗ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಹರಿಯಾಣ ಮೂಲದ 29 ವರ್ಷದ ಶಾರ್ಪ್ ಶೂಟರ್ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ತಮ್ಮದಾಗಿಸಿಕೊಂಡರು.
ಶೂಟಿಂಗ್ ಆಯ್ಕೆ ಮಾಡಿಕೊಲ್ಳುವ ಮುನ್ನ ವೃತ್ತಿಯಲ್ಲಿ ವಕೀಲರಾಗಿದ್ದ ಅಭಿಷೇಕ್ ವರ್ಮಾ, ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್ಸ್‌ನ ಆರಂಭಿಕ ಹಂತದಲ್ಲಿ 585 ಅಂಕಗಳನ್ನು ಗಳಿಸಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದರು. ಇದು ಅವರ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ಕೂಡ.
ಬಳಿಕ 8 ಮಂದಿ ಶೂಟರ್‌ಗಳ ನಡುವಣ ಫೈನಲ್ ಸ್ಪರ್ಧೆಯಲ್ಲಿ ಅಭಿಷೇಕ್ 242.7 ಅಂಕಗಳನ್ನು ಗಳಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. 2.3 ಅಂಕಗಳಿಂದ ಹಿಂದೆಬಿದ್ದ ರಷ್ಯಾದ ಶೂಟರ್ ಆರ್ಟಮ್ ಶೆರ್ನೊಸೋವ್ (240.4) ಬೆಳ್ಳಿ ಗೆದ್ದರೆ, ದಕ್ಷಿಣ ಕೊರಿಯಾದ ಹ್ಯಾನ್ ಸೆಯುಂಗ್ವೊ (220) ಕಂಚಿನ ಪದಕ ಬಾಚಿಕೊಂಡರು.
"ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದಾಗಲೇ ಅಥವಾ ಚಿನ್ನ ಗೆಲ್ಲುವುದನ್ನಾಗಲಿ ಯಾವುದರ ನಿರೀಕ್ಷೆಯೂ ನನಗಿರಲಿಲ್ಲ. ಆದರೆ, ಅನಿರೀಕ್ಷಿತವಾಗಿ ಲಭ್ಯವಾಗಿದೆ,'' ಎಂದು ಅಭಿಷೇಕ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಸೌರಭ್ ಚೌಧರಿ ಈ ಮೊದಲು ಒಲಿಂಪಿಕ್ಸ್ ಅರ್ಹತೆ ಪಡೆದುಕೊಂಡಿದ್ದರು. ಇದೀಗ ಅಭಿಷೇಕ್ ಈ ವಿಭಾಗದಲ್ಲಿ ಒಲಿಂಪಿಕ್ ಟಿಕೆಟ್ ಪಡೆದ ಎರಡನೇ ಭಾರತೀಯನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications