ವಿಶ್ವಕಪ್ ಟೂರ್ನಿಯಿಂದ ಚಾಂಪಿಯನ್ ಸ್ಪೇನ್ ಔಟ್
ರಿಯೋ ಡಿ ಜನೈರೋ, ಜೂ.19: ಹಾಲಿ ಚಾಂಪಿಯನ್ ಸ್ಪೇನ್ ಗೆ ಭಾರಿ ಮುಖಭಂಗವಾಗಿದೆ. ಫೀಫಾ ವಿಶ್ವಕಪ್ 2014 ಲೀಗ್ ಹಂತ ಮುಗಿಯುವುದಕ್ಕೂ ಮೊದಲೇ ಟೂರ್ನಿಯಿಂದ ಸ್ಪೇನ್ ಹೊರಬಿದ್ದಿದೆ. ಕಳೆದ ರಾತ್ರಿ ಮರಕಾನದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಗೂಳಿಗಳನ್ನು ಚಿಲಿ ತಂಡ 'ಚಿಂದಿ' ಮಾಡಿಬಿಟ್ಟಿದೆ. ಇದೇ ಮರಕಾನ ಸ್ಟೇಡಿಯಂನಲ್ಲಿ ಫೈನಲ್ ಆಡುವ ಕನಸು ಕಾಣುತ್ತಿದ್ದ ಸ್ಪೇನ್ 0-2 ಅಂತರದ ಗೋಲಿನಿಂದ ಸೋಲು ಕಂಡಿದೆ.
ವಿಶ್ವಕಪ್ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ 5-1 ಅಂತರದ ಹೀನಾಯ ಸೋಲು ಕಂಡಿದ್ದ ಸ್ಪೇನ್ ತಂಡ ತನ್ನ ತಂತ್ರಗಾರಿಕೆಗೆ ತಾನೇ ಬಲಿಯಾಗಿದೆ. ವಿಶ್ವಕಪ್ ಇತಿಹಾಸದಲ್ಲಿ ಹಾಲಿ ಚಾಂಪಿಯನ್ ತಂಡ ಲೀಗ್ ಹಂತ ದಾಟಲು ಸತತವಾಗಿ ವಿಫಲವಾಗಿರುವುದು ಇದು ಎರಡನೇ ಬಾರಿ. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]
2010ರಲ್ಲಿ ಅಂದಿನ ಚಾಂಪಿಯನ್ ಇಟಲಿ ತಂಡ ಇದೇ ರೀತಿ ಕಳಪೆ ಪ್ರದರ್ಶನ ನೀಡಿತ್ತು ಸ್ಲೊವೇಕಿಯಾ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ 3-2 ಅಂತರದಲ್ಲಿ ಇಟಲಿ ಸೋತು ಲೀಗ್ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿತ್ತು.

ಒಟ್ಟಾರೆ, ಕಪ್ ವಿನ್ನರ್ ತಂಡ ಲೀಗ್ ಹಂತ ಮುಗಿಯುವ ಮುನ್ನವೇ ದಾಟಲು ಸಾಧ್ಯವಾಗದಿರುವುದು ಇದು ನಾಲ್ಕನೇ ಬಾರಿ, ಇಟಲಿ(1950, 2010), ಬ್ರೆಜಿಲ್(1966) ಹಾಗೂ ಫ್ರಾನ್ಸ್ (2002) ಲೀಗ್ ಹಂತದಿಂದಲೇ ನಿರ್ಗಮಿಸಿದ ಇತರೆ ತಂಡಗಳಾಗಿವೆ. ಸ್ಪೇನ್ ತಂಡ ತನ್ನ ಅಂತಿಮ ಲೀಗ್ ಪಂದ್ಯವನ್ನು ಜೂ.23 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಆಸ್ಟ್ರೇಲಿಯಾ ತಂಡ ಕೂಡಾ ಟೂರ್ನಿಯಿಂದ ಗೌರವಯುತವಾಗಿ ನಿರ್ಗಮಿಸಿದೆ.['ಬಿ ' ಗುಂಪಿನ ವೇಳಾಪಟ್ಟಿ]
ಸ್ಪೇನ್ ಹಾಗೂ ಚಿಲಿ ಪಂದ್ಯದ ಮುಖ್ಯಾಂಶಗಳು:
* ಒಟ್ಟಾರೆ ಶಾಟ್ಸ್(ಗುರಿ ಮುಟ್ಟಿದ್ದು) : ಸ್ಪೇನ್ 15(9) vs ಚಿಲಿ 7(4)
*ಫೌಲ್ಸ್ : ಸ್ಪೇನ್ 14 vs ಚಿಲಿ 15
* ಚೆಂಡಿನ ಹಿಡಿತ : ಸ್ಪೇನ್ 56%vs ಚಿಲಿ 44%
* ಕಾರ್ನರ್ಸ್ : ಸ್ಪೇನ್ 7 vs ಚಿಲಿ 1
* ಆಫ್ ಸೈಡ್ : ಸ್ಪೇನ್ 1 vs ಚಿಲಿ 2
* ಹಳದಿ ಕಾರ್ಡ್ : ಸ್ಪೇನ್ 1 vs ಚಿಲಿ 2
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications