ಭಾರತೀಯ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‍ಶಿಪ್ 2022: ಹೋಂಡಾ ತಂಡ ಪ್ರಕಟ

2022ರ ಸವಾಲಿಗೆ ಸಿದ್ಧವಾಗಿರುವ ಹೋಂಡಾ ರೇಸಿಂಗ್ ಇಂಡಿಯಾ, ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್‍ವೇನಲ್ಲಿ ಈ ವಾರಾಂತ್ಯದಲ್ಲಿ ನಡೆಯಲಿರುವ ಇಡೆಮಿಟ್ಸು ಹೋಂಡಾ ಇಂಡಿಯಾ ಟ್ಯಾಲೆಂಟ್ ಕಪ್ ಮತ್ತು ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‍ಶಿಪ್ (ಐಎನ್‍ಎಂಆರ್ ಸಿ)ಗಾಗಿ ಇಂದು ತನ್ನ ಸವಾರರ ತಂಡವನ್ನು ಪ್ರಕಟಿಸಿದೆ.
ಎಂಆರ್‍ಎಫ್, ಎಂಎಂಎಸ್‍ಸಿ, ಎಫ್‍ಎಂಎಸ್‍ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‍ಶಿಪ್ (ಐಎನ್‍ಎಂಆರ್ ಸಿ)ನ 5 ಸುತ್ತುಗಳ ಸೀಸನ್‍ನಲ್ಲಿ ಪ್ರೊ-ಸ್ಟಾಕ್ 165ಸಿಸಿ ವಿಭಾಗದಲ್ಲಿ ಹೋಂಡಾದಿಂದ ಎರಡು ಬಲಶಾಲಿ ತಂಡಗಳನ್ನು ಪ್ರತಿನಿಧಿಸುವ ಮೂವರು ರೈಡರ್ ಗಳ ಹೆಸರು ಪ್ರಕಟಿಸಿದೆ. ಹೋಂಡಾ ಸಿಬಿಆರ್150ಆರ್‍ನಲ್ಲಿ ಸವಾರಿ ಮಾಡುವ ತಂಡಗಳು ಈ ಚಾಂಪಿಯನ್‍ಶಿಪ್‌ನಲ್ಲಿ ಮೊದಲ ಸ್ಥಾನಗಳ ಗುರಿ ಹೊಂದಿವೆ.

ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಸಿದ್ಧತೆ
ರಾಷ್ಟ್ರೀಯ ಚಾಂಪಿಯನ್‍ಶಿಪ್ ಜೊತೆಗೆ 2022 ಐಎನ್‍ಎಂಆರ್ ಸಿ ಇಡೆಮಿಟ್ಸು ಹೋಂಡಾ ಇಂಡಿಯಾ ಟ್ಯಾಲೆಂಟ್ ಕಪ್‍ಗೆ ಆತಿಥ್ಯ ವಹಿಸಲಿದೆ. ಇದು ಅಂತಾರಾಷ್ಟ್ರೀಯ ಚಾಂಪಿಯನ್‍ಶಿಪ್‌ಗಳಿಗಾಗಿ ಭಾರತದ ಮುಂದಿನ ಭವಿಷ್ಯದ ಸವಾರರನ್ನು ಸಿದ್ಧಗೊಳಿಸಲು ಮತ್ತು ಬೆಳೆಸಲು ವೇದಿಕೆಯಾಗಲಿದೆ.
ಇದರ ಮೊದಲ ಹಂತವಾಗಿ ಕೇವಲ 12 ವರ್ಷ ವಯಸ್ಸಿನ ಕಿರಿಯರು ಸೇರಿದಂತೆ 9 ಮಂದಿ ಸವಾರರು ಇರುವ ಸಿಬಿಆರ್ 150ಆರ್ ವಿಭಾಗದ ಟ್ಯಾಲೆಂಟ್ ಕಪ್ ಇದಾಗಿದೆ.

ಐದು ಸುತ್ತುಗಳ ಅವಕಾಶ
ಹೋಂಡಾ ಹಾರ್ನೆಟ್2.0 ಒನ್ ಮೇಕ್ ರೇಸ್ ಈ ಉತ್ಸಾಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. 5 ಸುತ್ತುಗಳಿಗೂ ಅಧಿಕವಿದ್ದು, ಪ್ರತಿ ಸುತ್ತಿನಲ್ಲಿ ಅವಕಾಶ ನೀಡುತ್ತಿದ್ದು, ದೇಶಾದ್ಯಂತ ಇರುವ 15 ಹೋಂಡಾ ಗ್ರಾಹಕರಿಗೆ ಹೋಂಡಾ ಹಾರ್ನೆಟ್ 2.0 ರೇಸಿಂಗ್‍ನ ರೋಮಾಂಚನ ಅನುಭವದ ಅವಕಾಶ ಸಿಗಲಿದೆ.
''ಹೋಂಡಾ ಹಾರ್ನೆಟ್ 2.0 ಒನ್ ಮೇಕ್ ರೇಸ್ ಜತೆ ಮೋಟಾರ್ ಸ್ಪೋಟ್ಸ್ ಗಳನ್ನು ನಮ್ಮ ಗ್ರಾಹಕರಿಗೆ ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಪ್ರಭಾವಶಾಲಿ ಲೈನ್‍ಅಪ್ ಮತ್ತು ನಮ್ಮ ಪರಿಣಿತ ತಂಡದೊಂದಿಗೆ 2022ರ ಸೀಸನ್ ನಮಗೆ ಪ್ರಶಸ್ತಿಗಳನ್ನು ತರಲಿದೆ ಎಂಬ ವಿಶ್ವಾಸವಿದೆ" ಎಂದು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ.ಲಿ.ನ ಬ್ರಾಂಡ್ ಮತ್ತು ಕಮ್ಯುನಿಕೇಷನ್ ಆಪರೇಟಿಂಗ್ ಆಫೀಸರ್ ಶ್ರೀ ಪ್ರಭು ನಾಗರಾಜ್ ಹೇಳಿದ್ದಾರೆ.

ನಾಲ್ವರು ರೈಡರ್‌ಗಳು, 9 ಯುವ ಸವಾರರು
ಹೋಂಡಾ ಇಂಡಿಯಾ ಟ್ಯಾಲೆಂಟ್ ಕಪ್ ಎನ್‍ಎಸ್‍ಎಫ್250 ಆರ್ 2022 ಸೀಸನ್‍ನಲ್ಲಿ, 11 ಅಪರೂಪದ ಸವಾರರು ಮೋಟೋ3 ಚಾಂಪಿಯನ್‍ಗಳಂತೆ ಅದೇ ಹೋಂಡಾ ಬೈಕ್ ಸವಾರಿ ಮಾಡಲಿದ್ದಾರೆ. ಇದರಲ್ಲಿ ನಾಲ್ವರು ರೈಡರ್‌ಗಳು ಸೇರಿದ್ದಾರೆ.
ಆದರೆ, 9 ಯುವ ಸವಾರರು ಇಡಮಿಟ್ಸು ಹೋಂಡಾ ಇಂಡಿಯಾ ಟ್ಯಾಲೆಂಟ್ ಕಪ್ ಸಿಬಿಆರ್150ಆರ್ ವಿಭಾಗದಲ್ಲಿ ಸೆಣಸಲಿವೆ. ಗ್ರಿಡ್‍ನಲ್ಲಿ ಮೂವರು ಹೊಸ ಸವಾರರು ಕಾಣಿಸಿಕೊಳ್ಳಲಿದ್ದಾರೆ: ತೆಲಂಗಾಣದ ಬೀದಾನಿ ರಾಜೇಂದ್ರ, ಸೈಯದ್ ಮೊಹಮ್ಮದ್ ಮತ್ತು ಪೋತು ವಿಘ್ನೇಶ್, ಕಳೆದ ವರ್ಷ ಹೈದರಾಬಾದ್‌ನಲ್ಲಿ ನಡೆದ ಇಡಮಿಟ್ಸು ಹೋಂಡಾ ಇಂಡಿಯಾ ಟ್ಯಾಲೆಂಟ್ ಹಂಟ್‍ನಲ್ಲಿ ಆಯ್ಕೆಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications