For Quick Alerts
ALLOW NOTIFICATIONS  
For Daily Alerts

Paralympics 2024: ಭಾರತಕ್ಕೆ ಹೆಮ್ಮೆ ತಂದ ಪ್ಯಾರಾ ಅಥ್ಲೀಟ್‌ಗಳು; ಪದಕ ಪಟ್ಟಿಯಲ್ಲಿ ಯಾವ ಸ್ಥಾನ?

ವಿಧಿಯಲ್ಲಿ ಬರೆದಿದ್ದರೆ ರಾಜ ಬಡವನಾಗಬಹುದು, ಬಡವ ರಾಜನಾಗಬಹುದು ಎಂಬ ಗಾದೆಯನ್ನು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ನಿಜ ಮಾಡಿದ್ದಾರೆ. ಒಲಿಂಪಿಕ್ ಕ್ರೀಡಾಕೂಟಗಳಲ್ಲಿ
ಭಾರತವು ತನ್ನ ವೈಫಲ್ಯಗಳಿಂದ ಪದಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಈಗ ಅದೇ ಕ್ರೀಡಾಕೂಟದಲ್ಲಿ ಭಾರತ ತನ್ನ ಅಧಿಪತ್ಯವನ್ನು ಜಗತ್ತಿಗೆ ಸಾರುತ್ತಿದೆ. ಒಂದೇ ವ್ಯತ್ಯಾಸವೆಂದರೆ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. ಕಳದೆ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಮಾಡಿದ ಹಲವು ದಾಖಲೆಗಳನ್ನು ಭಾರತ ಮುರಿದಿದೆ.

How many medals will India win in Paris Paralympics 2024

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಅಥ್ಲೀಟ್‌ಗಳು ಒಟ್ಟು 29 (7 ಚಿನ್ನ, 9 ಬೆಳ್ಳಿ, 13 ಕಂಚು) ಪದಕಗಳನ್ನು ಗೆದ್ದಿದ್ದು, ಕೆಲುವ ಪದಕಗಳ ಗಲ್ಲುವ ಸಾಧ್ಯತೆ ಇದೆ. ಮತ್ತೊಂದೆಡೆ ಭಾರತ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಒಟ್ಟು 6 ಪದಕ (1 ಬೆಳ್ಳಿ ಹಾಗೂ 5 ಕಂಚು) ಸಿಕ್ಕಿದೆ.

ಭಾರತ ಒಲಿಂಪಿಕ್ಸ್‌ ಆರ್ಚರಿಯಲ್ಲಿ ಒಂದೇ ಒಂದು ಪದಕವನ್ನು ಗೆದ್ದಿರಲಿಲ್ಲ, ಈ ಕನಸು ಕೂಡ ಪ್ಯಾರಾ ಅಥ್ಲೀಟ್‌ನಿಂದ ನನಸಾಗಿದೆ. ಭಾರತವು ಒಲಂಪಿಕ್ಸ್‌ನಲ್ಲಿ ಒಟ್ಟು 117 ಸದಸ್ಯರ ತಂಡವನ್ನು ಕಣಕ್ಕಿಳಿಸಿದ್ದರೆ, ಪ್ಯಾರಾಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳ ಸಂಖ್ಯೆ 86 ಆಗಿತ್ತು. ಆದರೆ ಪದಕಗಳ ವಿಷಯದಲ್ಲಿ ಇವೆರಡರ ನಡುವಿನ ವ್ಯತ್ಯಾಸವು ಸಾಕಷ್ಟಿದೆ.

ಅಚ್ಚರಿ ವಿಷಯವೆಂದರೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳಿಂದ ಈ ಅತ್ಯುತ್ತಮ ಪ್ರದರ್ಶನವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಅದರೂ ಇಡೀ ದೇಶವೇ ಮೆಚ್ಚುವಂತಹ ಸಾಧನೆಯನ್ನು ಭಾರತದ ಅಥ್ಲೀಟ್‌ಗಳು ಮಾಡಿದ್ದಾರೆ.

ಪ್ಯಾರಾಲಿಂಪಿಕ್ಸ್‌ ಪದಕಗಳ ಪಟ್ಟಿಯಲ್ಲಿಯೂ ಭಾರತ ಉತ್ತಮ ಸಾಧನೆ ಮಾಡಿದೆ. ಚೀನಾ, ಗ್ರೇಟ್ ಬ್ರಿಟನ್ ಮತ್ತು ಯುಎಸ್ ಪದಕಗಳ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿವೆ. ಆದರೆ ಭಾರತ ಟಾಪ್ -20 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಚೀನಾ, 93-ಚಿನ್ನ- 73- ಬೆಳ್ಳಿ, 49- ಕಂಚಿನ ಪದಕಗಳೊಂದಿಗೆ ಮೊದಲನೇ ಸ್ಥಾನದಲ್ಲಿದೆ. ಗ್ರೇಟ್ ಬ್ರಿಟನ್, 47- ಚಿನ್ನ, 41- ಬೆಳ್ಳಿ, 31- ಕಂಚು ಗೆದ್ದ ಎರಡನೇ ಸ್ಥಾನದಲ್ಲಿದರೆ, ಅಮೆರಿಕಾ 35- ಚಿನ್ನ, 41- ಬೆಳ್ಳಿ, 25- ಕಂಚಿನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಭಾರತ ಕೇಂದ್ರ ಸರ್ಕಾರವು ಒಲಿಂಪಿಕ್ಸ್‌ಗೆ ವ್ಯಯಿಸಿದ ಶೇಕಡಾ 5-10 ರಷ್ಟು ವೆಚ್ಚವನ್ನು ಪ್ಯಾರಾಲಿಂಪಿಕ್ಸ್‌ಗೆ ಖರ್ಚು ಮಾಡಿಲ್ಲ. ಉದಾಹರಣೆಗೆ, ಒಲಿಂಪಿಕ್ಸ್‌ನ ಬಜೆಟ್ 500 ಕೋಟಿ ರೂ. ಆಗಿದ್ದರೆ, ಪ್ಯಾರಾಲಿಂಪಿಕ್ಸ್‌ನ ಬಜೆಟ್ 20-30 ಕೋಟಿ ರೂ. ಆದರೂ ಪ್ರದರ್ಶನದ ವಿಷಯಕ್ಕೆ ಬಂದರೆ ಭಾರತದ ಪ್ಯಾರಾ ಅಥ್ಲೀಟ್‌ಗಳು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ.

Story first published: Sunday, September 8, 2024, 15:13 [IST]
Other articles published on Sep 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+