Budget 2024: ಖೇಲೋ ಇಂಡಿಯಾಗೆ ಗರಿಷ್ಠ ಅನುದಾನ ಘೋಷಣೆ, ಕ್ರೀಡಾ ರಂಗಕ್ಕೆ ಸಿಕ್ಕಿದ್ದೇನು?
ಜುಲೈ 24 ಬುಧವಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ 2024-25ರ ಸಂಪೂರ್ಣ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಕ್ರೀಡಾ ವಲಯಕ್ಕೆ ಬಂಪರ್ ಕೊಡುಗೆ ಘೋಷಣೆ ಮಾಡಲಾಗಿದೆ.
ಕಳೆದ ಬಾರಿಗಿಂತ 2024-25ರ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ರಂಗದ ಅಭಿವೃದ್ದಿಗೆ ಇನ್ನಷ್ಟು ಒತ್ತು ನೀಡಿದೆ. ಕ್ರೀಡಾ ವಲಯಕ್ಕೆ ಒಟ್ಟು 3,442.32 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

ಅದರಲ್ಲಿ ಖೇಲೋ ಇಂಡಿಯಾಕ್ಕೆ 900 ಕೋಟಿ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿರುವುದು ಗಮನಾರ್ಹ. ಇದು ಕಳೆದ ಆರ್ಥಿಕ ವರ್ಷದ ಪರಿಷ್ಕೃತ (880)ಗಿಂತ 20 ಕೋಟಿ ರೂ. ಹೆಚ್ಚಳವಾಗಿದೆ.
ಕ್ರೀಡಾ ಬಜೆಟ್‌ನಲ್ಲಿ ಹೆಚ್ಚಳ
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟ ಜುಲೈ 26 ರಂದು ಆರಂಭವಾಗಲಿದ್ದು, ಆಗಸ್ಟ್ 11 ಕ್ಕೆ ಕೊನೆಗೊಳ್ಳಲಿದೆ. ಇದಾದ ಬಳಿಕ ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಗಳು ಇನ್ನೂ ಎರಡು ವರ್ಷಗಳ ದೂರದಲ್ಲಿವೆ.
ಈ ಮೆಗಾ ಕ್ರೀಡಾಕೂಟಗಳ ಹೊರತಾಗಿಯೂ, ಕ್ರೀಡಾ ಸಚಿವಾಲಯದ ಬಜೆಟ್ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೇವಲ 45.36 ಕೋಟಿ ರೂಪಾಯಿಗಳ ಅತ್ಯಲ್ಪ ಹೆಚ್ಚಳವನ್ನು ಕಂಡಿದೆ. ಕಳೆದ ಹಣಕಾಸು ವರ್ಷ ಕ್ರೀಡಾ ವಲಯಕ್ಕೆ ಬಜೆಟ್‌ನಲ್ಲಿ 3,396.96 ಕೋಟಿ ರೂ.ಗಳನ್ನು ನೀಡಲಾಗಿತ್ತು.
ಖೋಲೋ ಇಂಡಿಯಾದ ಬಜೆಟ್‌ನಲ್ಲಿ ನಿರಂತರ ಹೆಚ್ಚಳ
ಹಲವಾರು ವರ್ಷಗಳಿಂದ ಖೇಲೋ ಇಂಡಿಯಾ ಟೂರ್ನಿಯಲ್ಲಿ ಸರ್ಕಾರವು ಹೆಚ್ಚು ಹೂಡಿಕೆ ಮಾಡಿದೆ. ಇದು ದೇಶಾದ್ಯಂತ ಪ್ರತಿಭೆಗಳನ್ನು ಗುರುತಿಸುವಲ್ಲಿ ಮತ್ತು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
2022-23ರ ಹಣಕಾಸು ವರ್ಷದಲ್ಲಿ ಖೇಲೋ ಇಂಡಿಯಾಕ್ಕೆ 596.39 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಇದೀಗ 2023-24ರ ಬಜೆಟ್‌ನಲ್ಲಿ ಇದನ್ನು 1,000 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ನಂತರ ಅದನ್ನು 880 ರೂ. ಕೋಟಿಗೆ ಪರಿಷ್ಕರಿಸಲಾಗಿದೆ.
ಖೇಲೋ ಇಂಡಿಯಾ ಯುವ ಕ್ರೀಡಾಪಟುಗಳ ಶಕ್ತಿ
2018ರಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ (ಕೆಐವೈಜಿ) ಆರಂಭದಿಂದ ಸರ್ಕಾರವು ಕಾರ್ಯಕ್ರಮದಲ್ಲಿ ಹೆಚ್ಚಿನ ಕ್ರೀಡೆಗಳನ್ನು ಸೇರಿಸುವುದನ್ನು ಮುಂದುವರೆಸಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಅನ್ನು 2020ರಲ್ಲಿ ಪ್ರಾರಂಭಿಸಲಾಯಿತು.
ಅದೇ ವರ್ಷದಲ್ಲಿ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಅನ್ನು ಸಹ ಆರಂಭಿಸಲಾಯಿತು. ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅನ್ನು 2023ರಲ್ಲಿ ಸೇರಿಸಲಾಗಿದೆ.
ಯುವ ಪ್ರತಿಭೆಗಳಿಗೆ ತರಬೇತಿ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ದೇಶದಾದ್ಯಂತ ನೂರಾರು ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ ಆಫ್ ಎಕ್ಸಲೆನ್ಸ್ (ಕೆಐಎಸ್‌ಸಿಇ) ಸ್ಥಾಪಿಸಲಾಗಿದೆ. ಈ ಕೇಂದ್ರಗಳ ಅನೇಕ ಕ್ರೀಡಾಪಟುಗಳು ಇಂದು ಭಾರತೀಯ ಒಲಿಂಪಿಕ್ ತಂಡದ ಭಾಗವಾಗಿದ್ದಾರೆ.
ಎನ್‌ಎಸ್‌ಎಫ್ ಮತ್ತು ಎಸ್‌ಎಐಗಳಿಗೆ ಹೆಚ್ಚು ಅನುದಾನ
ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ (ಎನ್‌ಎಸ್‌ಎಫ್) ನೀಡುವ ನೆರವನ್ನು ಬಜೆಟ್‌ನಲ್ಲಿ 15 ಕೋಟಿ ರೂ.ಗಳಷ್ಟು ಹೆಚ್ಚಿಸಲಾಗಿದೆ. 2023-24ರಲ್ಲಿ ಈ ಮೊತ್ತ 325 ರಿಂದ 340 ಕೋಟಿಗೆ ಏರಿಕೆಯಾಗಿತ್ತು.
ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ಬಜೆಟ್ ಕೂಡ 795.77 ರಿಂದ 822.60 ಕೋಟಿ ರೂ.ಗೆ ಏರಿಕೆಯಾಗಿದ್ದು, 26.83 ಕೋಟಿ ರೂ. ಎಸ್ಎಐ ದೇಶಾದ್ಯಂತ ಕ್ರೀಡಾಂಗಣಗಳ ನಿರ್ವಹಣೆ ಮತ್ತು ಜಾಗತಿಕ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳನ್ನು ಸಿದ್ಧಪಡಿಸಲು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಿಓಪಿಎಸ್) ಅನ್ನು ನಿರ್ವಹಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications