
ಕಳೆಗುಂದಲಿದೆ ಆರಂಭಿಕ ಸಮಾರಂಭ
ಲಂಡನ್, ರಿಯೋ, ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟಗಳು ನಡೆದಾಗ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಸಾವಿರಾರು ಮಂದಿ ಪ್ರತಿಭಾವಂತರು ವಿಶೇಷ ಕಾರ್ಯಕ್ರಮಗಳನ್ನು ನೀಡಿದ್ದರು. ಕ್ಷಾಂತರ ವೀಕ್ಷಕರು ಉದ್ಘಾಟನಾ ಕಾರ್ಯಕ್ರಮ ವೀಕ್ಷಿಸಿ ಜಗದ್ವಿಖ್ಯಾತಿಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಆದರೆ ಈ ಬಾರಿಯ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಕಡಿಮೆ ಸಂಖ್ಯೆಯ ವೀಕ್ಷಕರು ಅತಿಥಿಗಳಿರಲಿದ್ದಾರೆ. ಹಿಂದಿನಂತೆ ಮೆರಗಿನ ಕಾರ್ಯಕ್ರಮಗಳಾವುದೂ ಇರುವುದಿಲ್ಲ. ಸರಳವಾಗಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ವಿಭಿನ್ನ ವಿಜಯ ವೇದಿಕೆ
ಈ ಬಾರಿಯ ಒಲಿಂಪಿಕ್ಸ್ ವೇಳೆ ಕಾಣ ಸಿಗಲಿರುವ ಪ್ರಮುಖ ಬದಲಾವಣೆಯೆಂದರೆ ಪದಕ ವಿಜೇತ ಅಥ್ಲೀಟ್‌ಗಳಿಗೆ ಪದಕ ವಿತರಿಸುವ ವಿಜಯ ವೇದಿಕೆಯ ವೇಳೆ ಹಿಂದಿದ್ದ ಸಂಭ್ರಮ ಇರಲಾರದು. ಪದಕ ವಿಜೇತರ ಮುಂದಿನ ವಿಜಯ ವೇದಿಕೆಯ ಬಳಿಕ ಮೂರು ಪದಕಗಳಿರುತ್ತವೆ. ವಿಜೇತರು ತಮ್ಮ ತಮ್ಮ ಪದಕವನ್ನು ತಾವೇ ಕೊರಳಿಗೇರಿಸಿಕೊಳ್ಳಬೇಕು. ಜೊತೆ ನಿಂತು ಫೋಟೋ ತೆಗೆಯೋದಾಗಲಿ, ಅತಿಥಿಗಳಿಂದ ಕೈ ಕುಲುಕಿಸಿಕೊಳ್ಳೋದಾಗಲಿ, ಅಪ್ಪೋದಾಗಲಿ ಯಾವುದೂ ಇರುವುದಿಲ್ಲ. ಅಲ್ಲದೆ ವಿಜಯ ವೇದಿಕೆ ಕೂಡ ಸಾಮಾಜಿಕ ಅಂತರಕ್ಕೆ ತಕ್ಕಂತೆ ರಚಿಸಲ್ಪಟ್ಟಿರಲಿದೆ.

ಅನೇಕರು ಭಾಗವಹಿಸುತ್ತಿಲ್ಲ
ಜಾಗತಿಕ ಮಟ್ಟದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವುದೆಂದರೇನೇ ಭಾಗ್ಯ ಎನ್ನುವ ಕಾಲವಿತ್ತು. ಆದರೆ ಈ ಬಾರಿ ಕೋವಿಡ್-19 ಭೀತಿಯಿಂದಾಗಿ ಅನೇಕ ಆಟಗಾರರು ಕ್ರೀಡಾಕೂಟದಿಂದ ಹಿಂದೆ ಸರಿದಿದ್ದರು. ನಾರ್ತ್‌ಕೊರಿಯಾದಂತೆ ಕೆಲ ದೇಶಗಳು ಟೋಕಿಯೋ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನೇ ಕಳುಹಿಸಿಲ್ಲ. ಅಲ್ಲದೆ, ಈ ಬಾರಿ ವಿದೇಶಿ ವೀಕ್ಷಕರಿಗೆ ಕ್ರೀಡಾಕೂಟ ವೀಕ್ಷಿಸಲು ಅವಕಾಶವಿಲ್ಲ. ಕಡಿಮೆ ಸಂಖ್ಯೆಯ ವೀಕ್ಷಕರು ಮಾತ್ರ ಸ್ಟೇಡಿಯಂನಲ್ಲಿ ಇರಲಿದ್ದಾರೆ.


Click it and Unblock the Notifications












