ಐಡಿಬಿಐ ಫೆಡರಲ್ ಫ್ಯೂಚರ್ ಫಿಯರ್‌ಲೆಸ್ ಮ್ಯಾರಥಾನ್‌ಗೆ ಆಗಸ್ಟ್ 15ರಂದು ಸಚಿನ್ ಚಾಲನೆ

ನವದೆಹಲಿ, ಆಗಸ್ಟ್ 14: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಆಗಸ್ಟ್ 15ರ ಶನಿವಾರ ನಡೆಯಲಿರುವ ಐಡಿಬಿಐ ಫೆಡರಲ್ ಫ್ಯೂಚರ್ ಫಿಯರ್‌ಲೆಸ್ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸವಾಲು ಸ್ವೀಕರಿಸಲು ಎಲ್ಲರಲ್ಲೂ ಸಕಾರಾತ್ಮಕತೆಯನ್ನು ಉಂಟುಮಾಡುವ, ಸ್ವಾತಂತ್ರ್ಯೋತ್ಸವವನ್ನು ಯಶಸ್ವಿಯಾಗಿಸುವ ಉದ್ದೇಶವನ್ನು ಈ ಮಾರಥಾನ್ ಸ್ಪರ್ಧೆ ಹೊಂದಿದೆ.
'ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವು ಯಾವಾಗಲೂ ಮುಖ್ಯವಾಗಿದೆ. ಅದೂ ಈ ದಿನಗಳಲ್ಲಿ ಅದರ ಮಹತ್ವ ಇನ್ನೂ ಹೆಚ್ಚು. ಐಡಿಬಿಐ ಫೆಡರಲ್ ಫ್ಯೂಚರ್ ಫಿಯರ್ಲೆಸ್ ಮ್ಯಾರಥಾನ್‌ಗಾಗಿ ಉತ್ಸಾಹಭರಿತ ಓಟಗಾರರು ನೋಂದಾಯಿಸಿಕೊಳ್ಳುವುದನ್ನು ನೋಡಲು ಖುಷಿಯಾಗುತ್ತದೆ,' ಎಂದು ಐಡಿಬಿಐ ಫೆಡರಲ್ ಲೈಫ್ ಇನ್ಶೂರನ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಸಚಿನ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಕ್ರಿಕೆಟ್ ದೇವರು, 'ಗುರಿಗಳತ್ತ ಓಡುವಾಗ ಓಟಗಾರರು ಮುನ್ನೆಚ್ಚರಿಕೆಗಳನ್ನು ವಹಿಸುತ್ತಾರೆ ಮತ್ತು ಲಾಕ್‌ಡೌನ್ ಸೂಚನೆಗಳನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಶುಭ ಹಾರೈಸುತ್ತೇನೆ,' ಎಂದರು.
ಎನ್‌ಇಬಿ ಸ್ಪೋರ್ಟ್ಸ್ ಆಯೋಜಿಸಿರುವ ಈ ಸ್ಪರ್ಧೆಗೆ ಈಗಾಗಲೇ 6000 ಕ್ಕೂ ಹೆಚ್ಚು ಓಟಗಾರರು ಮ್ಯಾರಥಾನ್‌ಗಾಗಿ ನಾಲ್ಕು ವಿಭಾಗಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಫುಲ್ ಮ್ಯಾರಥಾನ್ (42.2 ಕೆ), ಹಾಫ್ ಮ್ಯಾರಥಾನ್ (21.1 ಕೆ), 10ಕೆ ಮತ್ತು 5 ಕೆ ಈ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications