
2004ರ ನಂತರ ಫೈನಲ್ ಗೇರಿದ ಪೋರ್ಚುಗೀಸ್
ಪೋರ್ಚುಗಲ್ ತಂಡ 2004ರಲ್ಲಿ ತವರು ನೆಲದಲ್ಲಿ ಯುರೋ ಕಪ್ ಫೈನಲ್‌ನಲ್ಲಿ ಗ್ರೀಸ್ ವಿರುದ್ಧ ಸೋತ ಬಳಿಕ ಇದೇ ಮೊದಲ ಬಾರಿ ಫೈನಲ್‌ಗೆ ತಲುಪಿದೆ. ಚಿತ್ರದಲ್ಲಿ : ಮೊದಲ ಗೋಲು ಗಳಿಸಿದ ರೊನಾಲ್ಡೊ

ಫ್ರಾನ್ಸ್ ಅಥವಾ ಜರ್ಮನಿ ಜತೆ ಗುದ್ದಾಟ
ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ನಲ್ಲಿ ಅತಿಥೇಯ ಫ್ರಾನ್ಸ್ ಹಾಗೂ ಹಾಲಿ ಚಾಂಪಿಯನ್ ಜರ್ಮನಿ ಮುಖಾಮುಖಿಯಾಗಲಿದ್ದು, ಈ ಪಂದ್ಯ ಗೆದ್ದವರು ಪೋರ್ಚುಗೀಸರನ್ನು ಎದುರಿಸಲಿದ್ದಾರೆ.

ಪೋರ್ಚುಗಲ್ ಸಾಧನೆ
ಟೂರ್ನಿ ಆರಂಭದಲ್ಲಿ ಫೇವರೀಟ್ ತಂಡಗಳ ಪೈಕಿ ಕೊನೆ ಸ್ಥಾನದಲ್ಲಿದ್ದ ಪೋರ್ಚುಗಲ್ ತಂಡಕ್ಕೆ ನಾಯಕ ರೊನಾಲ್ಡೊ ಬಲ ತಂದಿದ್ದಾರೆ. ಯುರೋ ಕಪ್‌ನಲ್ಲಿ ಮೂರು ಸೆಮಿಫೈನಲ್ (2004, 2012, 2016) ಆಡಿದ ಏಕೈಕ ಆಟಗಾರ ಎನಿಸಿದ್ದಾರೆ.

ಮೂರು ಸೆಮಿಫೈನಲ್ ಆಡಿದ ಆಟಗಾರ
ಕ್ರಿಸ್ಟಿಯಾನೊ ರೊನಾಲ್ಡೊ ಯುರೋ ಕಪ್‌ನಲ್ಲಿ ಮೂರು ಸೆಮಿಫೈನಲ್‌ಗಳನ್ನು(2004, 2012, 2016) ಆಡಿದ ಮೊದಲ ಆಟಗಾರ. ಪಂದ್ಯದ 50ನೇ ನಿಮಷದಲ್ಲಿ ಅದ್ಭುತ ಹೆಡರ್ ಮೂಲಕ ರೊನಾಲ್ಡೊ ಅವರು ಗೋಲು ಗಳಿಸಿದ ಚಿತ್ರ

ಮೈಕಲ್ ಪ್ಲಾಟಿನಿ ದಾಖಲೆ ಸರಿಗಟ್ಟಿದ ರೊನಾಲ್ಡೊ
ಒಟ್ಟಾರೆ ಯುರೋ ಚಾಂಪಿಯನ್ ಶಿಪ್ ನಲ್ಲಿ 20 ಪಂದ್ಯಗಳನ್ನಾಡಿರುವ ರೊನಾಲ್ಡೊ ಅವರು ಯುರೋ ಕಪ್‌ನಲ್ಲಿ 9 ಗೋಲು ಬಾರಿಸಿ ಮೈಕಲ್ ಪ್ಲಾಟಿನಿ ದಾಖಲೆ ಸರಿಗಟ್ಟಿದ್ದಾರೆ.

ನಾನಿ ಹೊಡೆದ ಗೋಲು
53ನೇ ನಿಮಿಷದಲ್ಲಿ ನಾನಿ ಅವರು ರೊನೊಲ್ಡೊ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದರು.

ರೊನಾಲ್ಡೋ ಗೆಳೆಯ ಬೇಲ್
ರೊನಾಲ್ಡೋ ಗೆಳೆಯ ವೇಲ್ಸ್ ತಂಡದ ಸ್ಟಾರ್ ಗರೇತ್ ಬೇಲ್ ಅವರು ಹೆಚ್ಚಿನ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಚಿತ್ರದಲ್ಲಿ ಬಲಬದಿಯಲ್ಲಿ ಬೇಲ್ AP/PTI

50ರ ದಶಕದ ನಂತರ ವೇಲ್ಸ್ ಸಾಧನೆ
50ರ ದಶಕದ ನಂತರ ವೇಲ್ಸ್ ಉತ್ತಮ ಸಾಧನೆ ತೋರಿ ಸೆಮಿಫೈನಲ್ ತಂದ ತಲುಪಿ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತಪಡಿಸಿತು.

ಎರಡನೇ ಗೋಲಿನ ಸಂಭ್ರಮದಲ್ಲಿ ಪೋರ್ಚುಗೀಸ್
ಎರಡನೇ ಗೋಲಿನ ಸಂಭ್ರಮದಲ್ಲಿ ಪೋರ್ಚುಗೀಸ್ ತಂಡದ ಆಟಗಾರರು

ರೋಚಕ ಫೈನಲ್ ನಿರೀಕ್ಷೆ
ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್/ ಸೋನಿ ಇಎಸ್ ಪಿಎನ್ ನಲ್ಲಿ ಪ್ರಸಾರವಾಗಲಿವೆ. ಸೈಂಟ್ ಡೆನಿಸ್ ನಲ್ಲಿ ಫೈನಲ್ ನಡೆಯಲಿದ್ದು ರೋಚಕ ಹಣಾಹಣಿ ನಿರೀಕ್ಷಿಸಬಹುದು


Click it and Unblock the Notifications
