ಅಥ್ಲೆಟಿಕ್ಸ್ : ಭಾರತದ ಕ್ರೀಡಾಪಟುಗಳ ಸಾಧನೆಯ ಸಂಭ್ರಮ
ಭುವನೇಶ್ವರ, ಜುಲೈ 10: 22ನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚೀನಾದ ಅಧಿಪತ್ಯಕ್ಕೆ ಅಂತ್ಯ ಹಾಡಿರುವ ಭಾರತ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇದೇ ಮೊದಲ ಬಾರಿಗೆ ಭಾರತದ ಕ್ರೀಡಾ ತಂಡ, ಒಟ್ಟು 12 ಬಂಗಾರ ಗೆದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಅತಿಥೇಯ ಭಾರತ ಒಟ್ಟು 29 ಪದಕಗಳನ್ನು ಗಳಿಸಿದೆ. ಈ ಹಿಂದೆ 1985ರಲ್ಲಿ 10 ಚಿನ್ನ, ಐದು ಬೆಳ್ಳಿ ಮತ್ತು ಏಳು ಕಂಚು ಗಳಿಸಿದ್ದೇ ಭಾರತದ ಇಲ್ಲಿವರೆಗಿನ ಉತ್ತಮ ಸಾಧನೆಯಾಗಿತ್ತು. ಆದರೆ, ಈ ಬಾರಿ ಭಾರತದ ಅಥ್ಲೀಟ್ ಗಳು 12 ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಕೊನೆಯ ದಿನ ಮೂರು ಚಿನ್ನ ಗಳಿಸಿದ ಚೀನಾ (ಒಟ್ಟು 8 ಚಿನ್ನ, 7 ಬೆಳ್ಳಿ. 5 ಕಂಚು) ಎರಡನೇ ಸ್ಥಾನ ಗಳಿಸಿದೆ. ಕಜಕಸ್ತಾನ 4 ಚಿನ್ನ, 5 ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

10000 ಮೀಟರ್ ಓಟ ವಿಜೇತರು
ಭಾರತದ ಚಿನ್ನದ ಪದಕ ವಿಜೇತ ಜಿ ಲಕ್ಷ್ಮಣನ್(ಮಧ್ಯದಲ್ಲಿ) ಹಾಗೂ ಬೆಳ್ಳಿ ಪದಕ ವಿಜೇತ ಗೋಪು ಥೊನಕ್ಕಲ್ (ಎಡಗಡೆ) ಪದಕ ಧರಿಸಿ ಸಂಭ್ರಮದಲ್ಲಿದ್ದಾರೆ. 22ನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ 10000 ಮೀಟರ್ ಓಟ ವಿಜೇತರ ಚಿತ್ರ.

4X400 ಮೀಟರ್ ಫೈನಲ್
4X400 ಮೀಟರ್ ಫೈನಲ್ ನಲ್ಲಿ ಭಾರತದ ಮಹಿಳಾ ತಂಡ ರೋಚಕ ಜಯ ದಾಖಲಿಸಿತು. ಮೂರನೇಯವರಾಗಿ ಓಡಿದ ಕರ್ನಾಟಕದ ಪೂವಮ್ಮ ಉತ್ತಮ ಅಂತರ ಕಾಯ್ದುಕೊಂಡರು. 3:31.34 ಸಮಯ ತೆಗೆದುಕೊಂಡು ಓಟ ಮುಕ್ತಾಯಗೊಳಿಸಿದ ತಂಡ ಜಯದ ಓಟ ಓಡಿತು.

ಜಾವಲಿನ್ ಥ್ರೋ
ಜಾವೆಲಿನ್ ಥ್ರೋ ಸ್ಪರ್ಧೆಯೆಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದ ಭಾರತದ ನೀರಜ್ ಛೋಪ್ರಾ(ಎಡಗಡೆ) ಹಾಗೂ ದವೀಂದ ಸಿಂಗ್ ಕಂಗ್ ಅವರು ಕಳಿಂಗ ಸ್ಟೇಡಿಯಂನಲ್ಲಿ ಸಂಭ್ರಮ ಆಚರಿಸಿದ್ದು ಹೀಗೆ..

4X400 ಮೀಟರ್ ಫೈನಲ್
4X400 ಮೀಟರ್ ಫೈನಲ್ ನಲ್ಲಿ ಚಿನ್ನದ ಗೆದ್ದ ಪುರುಷದ ರಿಲೇ ತಂಡ

ಚಿನ್ನದ ಪದಕ ವಿಜೇತ
ಭಾರತದ ಚಿನ್ನದ ಪದಕ ವಿಜೇತ ಜಿ ಲಕ್ಷ್ಮಣನ್(ಮಧ್ಯದಲ್ಲಿ) ಹಾಗೂ ಬೆಳ್ಳಿ ಪದಕ ವಿಜೇತ ಗೋಪು ಥೊನಕ್ಕಲ್ (ಎಡಗಡೆ) ಪದಕ ಧರಿಸಿ ಸಂಭ್ರಮದಲ್ಲಿದ್ದಾರೆ

800 ಮೀಟರ್ಸ್ ಓಟ
800 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದ ಸಂಭ್ರಮದಲ್ಲಿ ಭಾರತದ ಅರ್ಚನಾ ಯಾದವ್ ಗೆ ಸ್ವಲ್ಪದರಲ್ಲೇ ಚಿನ್ನದ ಪದಕ ಕೈತಪ್ಪಿತು. ಶ್ರೀಲಂಕಾದ ನಿಮಾಲಿ ವಲಿವರ್ಷ ಅವರನ್ನು ಅಂತಿಮ ಸುತ್ತಿನಲ್ಲಿ ತಳ್ಳಿದ ಆರೋಪದ ಮೇಲೆ ಅರ್ಚನಾಗೆ ಸಿಕ್ಕ ಪದಕವನ್ನು ಹಿಂಪಡೆಯಲಾಯಿತು.

ಮಹಿಳೆಯರ ಹೆಪ್ಟಾಥ್ಲಾನ್
ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ಒಟ್ಟು 5,942 ಅಂಕ ಗಳಿಸಿದ ಸ್ವಪ್ನಾ ಬರ್ಮನ್ ಚಿನ್ನದ ಪದಕ ತನ್ನದಾಗಿಸಿಕೊಂಡರು.

4X400 ಮೀಟರ್ ಫೈನಲ್
22ನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನ 4X400 ಮೀಟರ್ ಫೈನಲ್ ಓಟದ ದೃಶ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications