Independence Day: ಭಾರತ ಹೆಮ್ಮೆಯಿಂದ ಬೀಗುವಂತೆ ಮಾಡುತ್ತಿರುವ 4 ಸಕ್ರಿಯ ಕ್ರೀಡಾಪಟುಗಳು
76ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಸನಿಹದಲ್ಲಿದೆ ಭಾರತ. ಬ್ರಿಟಿಷರ ದಾಸ್ಯದಿಂದ ಭಾರತ ನೆಲವನ್ನು ಮುಕ್ತವಾಗಿಸಿದ ದಿನವನ್ನು ಪ್ರತಿ ವರ್ಷವೂ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯೊತ್ತರ ಹಾಗೂ ಸ್ವಾತಂತ್ರ್ಯಪೂರ್ವ ಕಾಲದ ಪ್ರಮುಖ ಅಂಶಗಳನ್ನು ನೆನಪಿಸಿಕೊಳ್ಳುವುದು ಸಾಮಾನ್ಯ.
ಭಾರತ ಈಗ ವಿಶ್ವಮಟ್ಟದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದೆ. ಕ್ರೀಡಾಕ್ಷೇತ್ರ ಕೂಡ ಇದಕ್ಕೆ ಹೊರತಾಗಿಲ್ಲ. ಕ್ರೀಡಾ ವಿಭಾಗದಲ್ಲಿ ಭಾರತದ ಸಾಕಷ್ಟು ಕ್ರೀಡಾಪಟುಗಳು ಇಡೀ ದೇಶ ಹೆಮ್ಮೆ ಪಡುವಂತಾ ಸಾಧನೆ ಮಾಡಿದ್ದಾರೆ. ಸ್ವಾತಂತ್ರ್ಯದಿನದ ಸನಿಹದಲ್ಲಿರುವಾಗ ನಾವು ಹೆಮ್ಮೆಯಿಂದ ನೆನಪು ಮಾಡಿಕೊಳ್ಳಬೇಕಾದ 4 ಸಕ್ರಿಯ ಕ್ರೀಡಾಪಟುಗಳ ಮಾಹಿತಿ ಇಲ್ಲಿದೆ.

1. ವಿರಾಟ್ ಕೊಹ್ಲಿ, ಕ್ರಿಕೆಟ್
* 2012ರಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಕೊಹ್ಲಿಯನ್ನು ಐಸಿಸಿ ಏಕದಿನ ಆಟಗಾರ ಎಂದು ಹೆಸರಿಸಲಾಯಿತು.
* ಕೊಹ್ಲಿ 2012, 2014, & 2016ರಲ್ಲಿ ಐಸಿಸಿ ವಿಶ್ವ ಏಕದಿನ ಇಲೆವೆನ್‌ನ ಭಾಗವಾಗಿದ್ದರು.
* ವಿರಾಟ್ ಕೊಹ್ಲಿಗೆ 2013ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಯಿತು.
* ಕೊಹ್ಲಿಯನ್ನು 2011-2012 ಮತ್ತು 2013-2014ರ ಅಂತರರಾಷ್ಟ್ರೀಯ ಕ್ರಿಕೆಟಿಗ ಎಂದು ಹೆಸರಿಸಲಾಗಿತ್ತು.
* 2017ರಲ್ಲಿ ಕೊಹ್ಲಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.
3. ನೀರಜ್ ಚೋಪ್ರಾ, ಅಥ್ಲೆಟಿಕ್ಸ್
* ಪೋಲೆಂಡ್‌ನ ಬೈಡ್‌ಗೊಸ್ಜ್‌ನಲ್ಲಿ ನಡೆದ 2016ರ ಐಎಎಎಫ್ ವಿಶ್ವ ಯು-20 ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೆ ಚೋಪ್ರಾ ವಿಶ್ವ ಜೂನಿಯರ್ ದಾಖಲೆಯನ್ನೂ ಸ್ಥಾಪಿಸಿದ್ದರು.
* 2016ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ 82.23 ಮೀಟರ್ ಎಸೆತದಿಂದ ನೀರಜ್ ಚಿನ್ನದ ಪದಕ ಗೆದ್ದಿದ್ದರು.
* ನೀರಜ್ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2017ರಲ್ಲಿ 85.23 ಮೀಟರ್ ಎಸೆತದಲ್ಲಿ ಬಂಗಾರ ಗೆದ್ದಿದ್ದಾರೆ.
* ನೀರಜ್ ಚೋಪ್ರಾ ಅವರು 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ 86.47 ಮೀಟರ್ ದೂರ ಸಾಧನೆಯ ಮೂಲಕ ಉತ್ತಮ ಪ್ರದರ್ಶನ ತೋರಿದ್ದರು.
* ಮೇ 2018ರಲ್ಲಿ, ದೋಹಾ ಡೈಮಂಡ್ ಲೀಗ್‌ನಲ್ಲಿ 87.43 ಮೀಟರ್ ದೂರ ಈಟಿ ಎಸೆದಿದ್ದ ಚೋಪ್ರಾ ಮತ್ತೆ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು.
* ಈ ಎಲ್ಲಾ ಸಾಧನೆಗಳಿಗೆ ಮುಕುಟವಿಟ್ಟಂತೆ ಒಲುಂಪಿಲ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ ನೀರಜ್ ಚೋಪ್ರ. 2021ರಲ್ಲಿ ಟೋಕಿಯೋದಲ್ಲಿ ನಡೆದ ಕ್ರೀಡಾಕೂಟದಲ್ಲಿ ನೀರಜ್ ಚೋಫ್ರ ಈ ಐತಿಹಾಸಿಕ ಸಾಧನೆ ಮಾಡಿ ಭಾರತ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದರು.
4. ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್
* 2009ರಲ್ಲಿ ಸೈನಾ ನೆಹ್ವಾಲ್ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. ಒಂದು ವರ್ಷದ ನಂತರ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ಅವರಿಗೆ ನೀಡಿತ್ತು.
* 2009ರಲ್ಲಿ ಸೈನಾಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿದೆ.
* 2016ರಲ್ಲಿ ಭಾರತ ಸರ್ಕಾರ ಸೈನಾ ನೆಹ್ವಾಲ್ ಅವರಿಗೆ ಪದ್ಮಭೂಷಣ ನೀಡಿತು. ಇದು ದೇಶದ 3ನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications