Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಭಾರತ ಆರ್ಚರಿ ತಂಡದ ಅಭಿಯಾನ ಶುರು; ಸ್ಪರ್ಧೆ ಎಷ್ಟು ಗಂಟೆಗೆ, ಯಾವ ಚಾನೆಲ್‌ನಲ್ಲಿ ನೇರಪ್ರಸಾರ?

ಜುಲೈ 25 ಗುರುವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿ, ಭಾರತ ತಂಡ ಆರ್ಚರಿಯೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಈ ಅರ್ಹತಾ ಸುತ್ತಿನಲ್ಲಿ ಭಾರತದ ಎಲ್ಲಾ 6 ಪುರುಷ ಮತ್ತು ಮಹಿಳಾ ಬಿಲ್ಲುಗಾರರು ಭಾಗವಹಿಸಲಿದ್ದಾರೆ. ಈ ಈವೆಂಟ್‌ನ ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿ ಇಲ್ಲಿದೆ.

India archery Team campaign begins in Paris Olympics 2024

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಆರ್ಚರಿ ಪದಕಕ್ಕಾಗಿ ಭಾರತದ ಹುಡುಕಾಟ ಮಹಿಳೆಯರ ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳೊಂದಿಗೆ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಇದಾದ ಬಳಿಕ ಸಂಜೆ 5:45ಕ್ಕೆ ಪುರುಷರ ವೈಯಕ್ತಿಕ, ಪುರುಷರ ತಂಡ ಹಾಗೂ ಮಿಶ್ರ ತಂಡ ಸ್ಪರ್ಧೆಗಳು ನಡೆಯಲಿವೆ.

ಇಂದು ನಡೆಯಲಿರುವ ಈ ಅರ್ಹತಾ ಸುತ್ತು ಭಾರತ ತಂಡಕ್ಕೆ ಮಹತ್ವದ್ದಾಗಿದೆ. ನಾಕೌಟ್ ಹಂತದಲ್ಲಿ ಭಾರತ ತಂಡವು ದಕ್ಷಿಣ ಕೊರಿಯಾದಂತಹ ಬಲಿಷ್ಠ ತಂಡವನ್ನು ಎದುರಿಸಬೇಕಾಗಿದೆ.

ಭಾರತ ಆರ್ಚರಿ ತಂಡ

ಪುರುಷರು: ತರುಣದೀಪ್ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್
ಮಹಿಳೆಯರು: ದೀಪಿಕಾ ಕುಮಾರಿ, ಭಜನ್ ಕೌರ್ ಮತ್ತು ಅಂಕಿತಾ ಭಕ್ತ

ಸ್ಪರ್ಧೆ ನಡೆಯುವ ಸ್ಥಳ: ಎಸ್ಪ್ಲಾನೇಡ್ ಡೆಸ್ ಇನ್ವಾಲಿಡ್ಸ್, ಪ್ಯಾರಿಸ್

ಸಮಯ: (ಭಾರತೀಯ ಕಾಲಮಾನ)

  • ಮಹಿಳೆಯರ ವೈಯಕ್ತಿಕ: 1 ಗಂಟೆಗೆ
  • ಮಹಿಳಾ ತಂಡ: ಮಧ್ಯಾಹ್ನ 1 ಗಂಟೆಗೆ
  • ಪುರುಷರ ವೈಯಕ್ತಿಕ: ಸಂಜೆ 5:45
  • ಮಿಶ್ರ ತಂಡ: ಸಂಜೆ 5:45
  • ಪುರುಷರ ತಂಡ: ಸಂಜೆ 5:45

ಪ್ರಸಾರ: ಸ್ಪೋರ್ಟ್ಸ್ 18

ಲೈವ್‌ಸ್ಟ್ರೀಮ್: ಜಿಯೋ ಸಿನಿಮಾ ಆಪ್ ಮತ್ತು ವೆಬ್‌ಸೈಟ್

Story first published: Thursday, July 25, 2024, 13:14 [IST]
Other articles published on Jul 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+