Asian Hockey Champions Trophy: ಲೀಗ್ ಹಂತದಲ್ಲಿ ಅಜೇಯ ಓಟ ಮುಂದುವರೆಸಿದ ಭಾರತ, ಪಾಕ್ ವಿರುದ್ಧ ಭರ್ಜರಿ ಜಯ
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಮೋಘ ಪ್ರದರ್ಶನ ಮುಂದುವರೆದಿದೆ. ತನ್ನ ಲೀಗ್ ಹಂತದ ಐದನೇ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿದೆ. ಈ ಮೂಲಕ ಟೀಮ್ ಇಂಡಿಯಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಜೇಯ ಅಭಿಯಾನವನ್ನು ಮುಂದುವರೆಸಿದೆ.
ಭಾರತದ ಪರ ಈ ಪಂದ್ಯದಲ್ಲಿ ಎರಡೂ ಗೋಲುಗಳನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದರು. ಲೀಗ್ ಹಂತದಲ್ಲಿ ಭಾರತ ಆಡಿದ ಕೊನೆಯ ಪಂದ್ಯ ಇದಾಗಿದ್ದು, ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಪಾಕ್ ಪರ ನದೀಮ್ ಅಹ್ಮದ್ ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದ್ದಾರೆ.

ಪಾಕ್ ಆರಂಭಿಕ ಮುನ್ನಡೆ
ಮೊದಲ ಕ್ವಾರ್ಟರ್‌ನಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ ಪಾಕ್ ಮುನ್ನಡೆ ಸಾಧಿಸಿತು. ಭಾರತದ ರಕ್ಷಣಾ ವಿಭಾಗಕ್ಕೆ ಪೆಟ್ಟು ನೀಡಿದ ಪಾಕ್ ಆಟಗಾರರು 8ನೇ ನಿಮಿಷದಲ್ಲಿ ಸಿಕ್ಕ ಅವಕಾಶದಲ್ಲಿ ಗೋಲು ಬಾರಿಸಿದರು. ಈ ಅವಧಿಯ ಆರಂಭದಲ್ಲಿ ಪಾಕ್ 1-0 ಗೋಲುಗಳ ಮುನ್ನಡೆ ಸಾಧಿಸಲು ನದೀಮ್ ನೆರವಾದರು.
ಮೊದಲಾವಧಿಯಲ್ಲಿ ಹರ್ಮನ್ ಅಬ್ಬರ
ಈ ಅವಧಿಯ ಕೊನೆಯ ಕ್ಷಣದಲ್ಲಿ ಭಾರತೀಯ ಆಟಗಾರರು ಅಟ್ಯಾಕಿಂಗ್ ಆಟವನ್ನು ಪ್ರದರ್ಶಿಸಿದರು. ಈ ಅವಧಿಯ 13ನೇ ನಿಮಿಷದಲ್ಲಿ ಭಾರತಕ್ಕೆ ಒಂದು ಪೆನಾಲ್ಟಿ ಅವಕಾಶ ಲಭಿಸಿತು. ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ನಾಯಕ ಹರ್ಮನ್ ಪ್ರೀತಿ ಯಶಸ್ವಿಯಾದರು. ಹರ್ಮನ್‌ಪ್ರೀತ್ ಸಿಂಗ್ ಮೊದಲ ಕ್ವಾರ್ಟರ್ ಅಂತ್ಯದ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವ ಮೂಲಕ ಪಂದ್ಯದಲ್ಲಿ ಭಾರತ ಸಮಬಲ ಸಾಧಿಸುವಲ್ಲಿ ಶ್ರಮಿಸಿದರು.
ಪೆನಾಲ್ಟಿ ಅವಕಾಶ
ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಭಾರತ ಆಕ್ರಮಣಕಾರಿ ಆಟವನ್ನು ಆಡಿತು. ಎರಡನೇ ಅವಧಿಯ ನಾಲ್ಕನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಅವಕಾಶ ಲಭಿಸಿತು. ಈ ಅವಕಾಶದಲ್ಲೂ ಹರ್ಮನ್ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ 2-1 ಗೋಲುಗಳ ಮುನ್ನಡೆ ತಂದುಕೊಡುವಲ್ಲಿ ಶ್ರಮಿಸಿದರು.
ಗೋಲು ರಹಿತ ಮೂರನೇ, ನಾಲ್ಕನೇ ಅವಧಿ
ಇನ್ನು ಪಾಕ್ ಇನ್ನೊಂದು ಗೋಲು ಬಾರಿಸಿ ಅಂತರವನ್ನು ಸಮನಾಗಿಸಲು ಉಳಿದ ಎರಡೂ ಅವಧಿಯಲ್ಲಿ ಶ್ರಮಿಸಿತು. ಆದರೆ ಭಾರತದ ರಕ್ಷಣಾ ವಿಭಾಗ ಇದಕ್ಕೆ ಸೊಪ್ಪು ಹಾಕಲಿಲ್ಲ. ಈ ಅವಧಿಯಲ್ಲಿ ಭಾರತ ಸಹ ಗೋಲು ಬಾರಿಸುವ ಆಸೆ ಫಲಿಸಲಿಲ್ಲ. ಗೋಲು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹಲವು ಬಾರಿ ಪ್ರಯತ್ನ ನಡೆಸಿದರೂ ಸಫಲವಾಗದೆ ಕೊನೆಗೂ ಭಾರತ ಪಂದ್ಯ ಗೆದ್ದುಕೊಂಡಿತು.
ಭಾರತ 2016ರಲ್ಲಿ ಹಾಕಿ ಕ್ರೀಡೆಯಲ್ಲಿ ಕೊನೆಯ ಬಾರಿಗೆ ಪಾಕ್ ವಿರುದ್ಧ ಸೋಲು ಅನುಭವಿಸಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಒಟ್ಟು 17 ಪಂದ್ಯ ನಡೆದಿದ್ದು, 15 ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯ ಡ್ರಾ ಆಗಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದಿರುವ ಭಾರತ ಅಗ್ರ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications