India In Olympics: ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಪದಕ ವಿಜೇತರು ಯಾರು?
ವಿಶ್ವದ ಹಲವು ಕ್ರೀಡಾಪಟುಗಳ ಕನಸು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಾಗಿದೆ. ಈವರೆಗೆ 25 ಒಲಿಂಪಿಕ್ಸ್‌ನಲ್ಲಿ ಭಾರತದ ನೂರಾರು ಕ್ರೀಡಾಪಟುಗಳು ಭಾಗವಹಿಸಿ 35 ಪದಕಗಳನ್ನು ಗೆದ್ದಿದ್ದಾರೆ.
ಒಂದು ಶತಮಾನಕ್ಕೂ ಹೆಚ್ಚಿನ ಕಾಲದ ಒಲಂಪಿಕ್ಸ್ ಇತಿಹಾಸದಲ್ಲಿ ಭಾರತ ಸಾಧನೆಯು ಹಲವಾರು ಏರಿಳಿತಗಳಿಂದ ತುಂಬಿದೆ. ಉದಾಹರಣೆಗೆ ಹಾಕಿ ವಿಭಾಗದಲ್ಲಿ ದಾಖಲೆಯ ಎಂಟು ಚಿನ್ನದ ಪದಕಗಳು, ಅದರಲ್ಲಿ ಆರು ಸತತವಾಗಿ ಬಂದಿವೆ.

ಭಾರತ ದೇಶವು 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೇವಲ ಒಬ್ಬ ಪ್ರತಿನಿಧಿಯನ್ನು ಹೊಂದಿತ್ತು ಎನ್ನುವುದು ಅಚ್ಚರಿಯಾದರೂ ಸತ್ಯ. ಆ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಬ್ಬರಿಂದಲೇ ಎರಡು ಪದಕಗಳು ಬಂದಿದ್ದವು. ನಂತರ 1920ರ ಆಂಟ್‌ವರ್ಪ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ತಮ್ಮ ಮೊದಲ ಅಧಿಕೃತ ನಿಯೋಗವನ್ನು ಒಲಿಂಪಿಕ್ಸ್‌ಗೆ ಕಳುಹಿಸಿತು.
ಭಾರತ 1900ರಲ್ಲಿ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ಮತ್ತು ಅಂದಿನಿಂದ ದೇಶವು ಚತುರ್ವಾರ್ಷಿಕ ಈವೆಂಟ್‌ನಲ್ಲಿ ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ 35 ಪದಕಗಳನ್ನು ಗೆದ್ದಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ದೇಶಕ್ಕೆ ಮೊದಲ ಬಾರಿಗೆ ಪದಕ ಗೆದ್ದುಕೊಟ್ಟವರೆಂದರೆ ನಾರ್ಮನ್ ಪ್ರಿಚರ್ಡ್.
1875 ಜೂನ್ 23ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದ ನಾರ್ಮನ್ ಗಿಲ್ಬರ್ಟ್ ಪ್ರಿಚರ್ಡ್ ಅವರನ್ನು ನಾರ್ಮನ್ ಟ್ರೆವರ್ ಎಂದೂ ಕರೆಯುತ್ತಾರೆ. ಅವರು ಬ್ರಿಟಿಷ್-ಭಾರತೀಯ ಅಥ್ಲೀಟ್ ಮತ್ತು ನಟರಾಗಿದ್ದರು. ನಾರ್ಮನ್ ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಗೆದ್ದಾಗ ಒಲಂಪಿಕ್ ಪದಕವನ್ನು ಗೆದ್ದ ಮೊದಲ ಏಷ್ಯನ್ ಮೂಲದ ಅಥ್ಲೀಟ್ ಆಗಿದ್ದರು.
1900ರ ಪ್ಯಾರಿಸ್ ಒಲಿಂಪಿಕ್ಸ್: ಭಾರತದ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ನಡೆದ ಈ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಒಲಿಂಪಿಕ್ ಪದಕ ಬಂದಿತು. ಬ್ರಿಟಿಷ್-ಭಾರತೀಯ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ ಅವರು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ಚೊಚ್ಚಲ ಪ್ರಾತಿನಿಧ್ಯದಲ್ಲಿ ಪುರುಷರ 200 ಮೀಟರ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು.
1900ರ ಪ್ಯಾರಿಸ್ ಒಲಿಂಪಿಕ್ಸ್: ನಾರ್ಮನ್ ಪ್ರಿಚರ್ಡ್ ಅದೇ ಒಲಿಂಪಿಕ್ಸ್ ಆವೃತ್ತಿಯಲ್ಲಿ ಮತ್ತೊಂದು ಬೆಳ್ಳಿ ಪದಕವನ್ನು ಗೆದ್ದರು. ಪುರುಷರ 200 ಮೀಟರ್ ಹರ್ಡಲ್ಸ್‌ನಲ್ಲಿ ಎರಡನೇ ಸ್ಥಾನ ಪಡೆದರು. ನಾರ್ಮನ್ ಪ್ರಿಚರ್ಡ್ ಅವರ ಎರಡು ಪದಕಗಳು ಆ ಕ್ರೀಡಾಕೂಟದಲ್ಲಿ ಭಾರತವನ್ನು ಒಟ್ಟಾರೆ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರಿಸಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications