ಪಾಕಿಸ್ತಾನದಲ್ಲಿ ಪಂಕಜ್ ಗೆ 13ನೇ ವಿಶ್ವ ಚಾಂಪಿಯನ್ ಪಟ್ಟ
ಕರಾಚಿ, ಆಗಸ್ಟ್ 12: ಬೆಂಗಳೂರು ನಿವಾಸಿ ಪಂಕಜ್ ಅಡ್ವಾಣಿ ಅವರು ತಮ್ಮ ವೃತ್ತಿ ಬದುಕಿನ 13ನೇ ವಿಶ್ವ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ. ಇಲ್ಲಿ ನಡೆದ ವರ್ಲ್ಡ್ 6 ರೆಡ್ ಸ್ನೂಕರ್ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಪಂಕಜ್ ಸಾಧನೆ ಮೆರೆದಿದ್ದಾರೆ.
ಹಾಲಿ ಚಾಂಪಿಯನ್ ಪಂಕಜ್ ಅವರು ಫೈನಲ್ ಹಂತದಲ್ಲಿ ಚೀನಾದ ಯಾನ್ ಬಿಂಗ್ತೋವೋ ಅವರನ್ನು 6-2 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬೆಸ್ಟ್ ಆಫ್ 11 ಮಾದರಿಯಲ್ಲಿ ಆರಂಭದಲ್ಲೇ 3-0 ಮುನ್ನಡೆ ಪಡೆದ ಪಂಕಜ್ ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. [ಬಿಲಿಯರ್ಡ್ಸ್ : ಪಂಕಜ್ ಗೆ 12ನೇ ಚಾಂಪಿಯನ್ ಪಟ್ಟ]

ಪೂರ್ಣ ವಿವರ: ಪಂಕಜ್ ಅಡ್ವಾಣಿ (ಭಾರತ) ಅವರು ಚೀನಾದ ಯಾನ್ ಬಿಂಗ್ತೋವೋ ಅವರನ್ನು 6-2: 37-21, 57(30)-0, 32-29, 0-66(66), 6-38(37), 48-0, 75(71)-0, 40(35)-28.
ವರ್ಲ್ಡ್ 6 ರೆಡ್ ಚಾಂಪಿಯನ್ ಪಟ್ಟ ಉಳಿಸಿಕೊಂಡಿದ್ದರ ಬಗ್ಗೆ ಹಾಗೂ ವೃತ್ತಿ ಬದುಕಿನ 13ನೇ ವಿಶ್ವ ಮಟ್ಟದ ಪ್ರಶಸ್ತಿ ಗಳಿಸಿದ್ದರ ಬಗ್ಗೆ ಪಂಕಜ್ ಅಡ್ವಾಣಿ ಅವರು ಟ್ವೀಟ್ ಮಾಡಿದ್ದಾರೆ.
(ಪಿಟಿಐ)
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Pankaj Advani bags his 13th world title
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications