For Quick Alerts
ALLOW NOTIFICATIONS  
For Daily Alerts

ಭಾರತ-ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ

By Mahesh

ಮುಂಬೈ, ಅ.27: ಪ್ರವಾಸಿ ಶ್ರೀಲಂಕಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಜ್ಜಾಗುತ್ತಿದೆ. ನ.2ರಿಂದ ಪಂದ್ಯಾವಳಿ ಆರಂಭವಾಗಲಿದೆ. ಕೊನೆ ಏಕದಿನ ಪಂದ್ಯ ಎಂಎಸ್ ಧೋನಿ ಅವರ ರಾಂಚಿಯಲ್ಲಿ ನಡೆಯಲಿದೆ.

ಮೊದಲ ಮೂರು ಏಕ ದಿನ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಅವರು ನಾಯಕರಾಗಿದ್ದು, ಧೋನಿ ಅವರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಕೊನೆಯ ಎರಡು ಪಂದ್ಯಗಳಿಗೆ ಆಡಲು ಧೋನಿ ತಂಡವನ್ನು ಸೇರುವ ನಿರೀಕ್ಷೆಯಿದೆ. ಈ ನಡುವೆ ವೇಗಿ ಮಹಮ್ಮದ್ ಶಮಿ ಅವರು ಶ್ರೀಲಂಕಾ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದು, ಧವಳ್ ಕುಲಕರ್ಣಿ ಅವರ ಜಾಗವನ್ನು ತುಂಬಲಿದ್ದಾರೆ.

ಅಕ್ಟೋಬರ್ 30ರಂದು ಮುಂಬೈನಲ್ಲಿ ಭಾರತ 'ಎ' ವಿರುದ್ಧ ಪ್ರವಾಸಿ ಶ್ರೀಲಂಕಾ ತಂಡ ಅಭ್ಯಾಸ ಪಂದ್ಯವನ್ನಾಡಲಿದೆ. ಏಕದಿನ ಸರಣಿ ಎಲ್ಲಾ ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿವೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ: [ಏಕದಿನ ಪಂದ್ಯಗಳಿಗೆ ಭಾರತ ತಂಡ]

India-Sri Lanka ODI Series 2014 Schedule

* ಅಕ್ಟೋಬರ್ 30 : ಶ್ರೀಲಂಕಾ ವಿರುದ್ಧ ಭಾರತ ಎ ಮುಂಬೈನ ಬ್ರಬೋರ್ನ್ ಸ್ಟೇಡಿಯಂ

ಐದು ಏಕದಿನ ಪಂದ್ಯಗಳು ಹಗಲು ರಾತ್ರಿ ಪಂದ್ಯ ಮಧ್ಯಾಹ್ನ 2.30ಕ್ಕೆ ಪಂದ್ಯ ಶುರು
* ಮೊದಲ ಏಕದಿನ ಪಂದ್ಯ: 2 ನವೆಂಬರ್ (ಭಾನುವಾರ) -ಕಟಕ್
* ಎರಡನೇ ಏಕದಿನ ಪಂದ್ಯ: 6 ನವೆಂಬರ್ (ಗುರುವಾರ) -ಅಹಮದಾಬಾದ್
* ಮೂರನೇ ಏಕದಿನ ಪಂದ್ಯ: 9 ನವೆಂಬರ್ (ಭಾನುವಾರ) -ಹೈದರಾಬಾದ್
* ನಾಲ್ಕನೇ ಏಕದಿನ ಪಂದ್ಯ: 13 ನವೆಂಬರ್ (ಗುರುವಾರ) -ಕೋಲ್ಕತ್ತಾ
* ಐದನೇ ಏಕದಿನ ಪಂದ್ಯ: 16 ನವೆಂಬರ್ (ಭಾನುವಾರ) -ರಾಂಚಿ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ, ಟಿ20 ಹಾಗೂ ಟೆಸ್ಟ್ ಪಂದ್ಯಗಳು ರದ್ದುಗೊಂಡ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡಕ್ಕೆ ಬಿಸಿಸಿಐ ಆಹ್ವಾನ ನೀಡಿದೆ. ವಿಂಡೀಸ್ ವಿರುದ್ಧ ಪಂದ್ಯಗಳನ್ನಾಡದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ತಂಡಕ್ಕೆ ಮರಳಿದ್ದಾರೆ. ವಿಂಡೀಸ್ ವಿರುದ್ಧ ಒಂದೂ ಪಂದ್ಯ ಆಡದ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ [ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ, ವಿಂಡೀಸ್ ಮನೆಗೆ]

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+