ದೋಹಾ ಡೈಮಂಡ್ ಲೀಗ್ 2026: ನೀರಜ್ ಚೋಪ್ರಾ ಹೊರಕ್ಕೆ
ಭಾರತದ ಭರವಸೆಯ ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ಬೆನ್ನುನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಜೂನ್ 19 ರಿಂದ ಆರಂಭವಾಗಲಿರುವ ದೋಹಾ ಡೈಮಂಡ್ ಲೀಗ್ 2026 ರಿಂದ ಹೊರಗುಳಿದಿದ್ದಾರೆ. ಇದೇ ಲೀಗ್‌ನಲ್ಲಿ ಕಳೆದ ವರ್ಷ ನೀರಜ್ ಚೋಪ್ರಾ ಇತಿಹಾಸ ಬರೆದಿದ್ದರು. ಆದರೆ ಈ ಬಾರಿ ಪ್ರತಿಷ್ಠಿತ ಲೀಗ್‌ನಿಂದ ಹೊರ ನಡೆದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಮುಂಬರುವ ದಿನಗಳಲ್ಲಿ ಸಾಲು ಸಾಲು ಟೂರ್ನಿಗಳು ಇದ್ದು, ಇದಕ್ಕೆ ತಯಾರಿ ನಡೆಸಲು ನೀರಜ್ ಚೋಪ್ರಾ ಡೈಮಂಡ್ ಲೀಗ್ 2026 ನಿಂದ ಹೊರಗುಳಿದಿದ್ದಾರೆ. ಇದೇ ವರ್ಷ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಕ್ರೀಡಾಕೂಟ ನಡೆಯಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ನೀರಜ್ ಚೋಪ್ರಾ ಪುನರ್ವಸತಿ ಪಡೆಯುತ್ತಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ನೀರಜ್ ಚೋಪ್ರಾ ಸದ್ಯ ಸ್ವಿಟ್ಜರ್‌ಲ್ಯಾಂಡ್‌ನ ಬಿಯೆನ್ನೆಯಲ್ಲಿದ್ದಾರೆ. ಇಲ್ಲಿ ಇವರು 47 ದಿನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಶಾನ್ ಮಾರ್ವಾ ಮತ್ತು ತರಬೇತುದಾರ ಜೇ ಚೌಧರಿ ಅವರೊಂದಿಗೆ ನೀರಜ್ ಫಿಟ್ನೆಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ನೀರಜ್ ಚೋಪ್ರಾ 2025ರಲ್ಲಿ ನಡೆದಿದ್ದ ದೋಹಾ ಡೈಮಂಡ್ ಲೀಗ್‌ನಲ್ಲಿ ಜಾವೆಲಿನ್‌ನಲ್ಲಿ 90.23 ಮೀಟರ್ ಎಸೆದು ಇತಿಹಾಸ ಸೃಷ್ಟಿಸಿದರು. ಈ ಮೂಲಕ ನೀರಜ್ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್ ಗಡಿ ದಾಟಿ ಸಾಧನೆ ಮಾಡಿದ್ದರು. ಈ ಮೂಲಕ ನೀರಜ್ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದರು. ಇದೇ ಲೀಗ್‌ನಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಅಂತಿಮ ಸುತ್ತಿನಲ್ಲಿ 91.06 ಮೀಟರ್ ಎಸೆಯುವ ಮೂಲಕ ಚಾಂಪಿಯನ್ ಆದರು.

ಭಾರತದ ಕ್ರೀಡಾಭಿಮಾನಿಗಳು ನೀರಜ್ ಚೋಪ್ರಾ ಅವರ ಆಟವನ್ನು ದೋಹಾ ಡೈಮಂಡ್ ಲೀಗ್ 2026ರಲ್ಲಿ ನೋಡಬಹುದು ಎಂಬ ಆಸೆಗೆ ಪೆಟ್ಟು ಬಿದ್ದಿದೆ. ಹೀಗಾಗಿ ಇವರು ಮೈದಾನಕ್ಕೆ ಕಣಕ್ಕೆ ಇಳಿಯುವುದು ಇನ್ನು ಹೆಚ್ಚು ದಿನ ಕಾಯಬೇಕಾಗುತ್ತದೆ.
ನೀರಜ್ ಸಾಧನೆ
ಟೊಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಸಾಧನೆ ಮಾಡಿ ಸುದ್ದಿಯಾಗಿದ್ದರು. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಆಂಡ್ ಫೀಲ್ಡ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು. ನೀರಜ್ 2024 ರ ಒಲಿಂಪಿಕ್ಸ್‌ನಲ್ಲಿ 89.45 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ಗೆದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications