ಹಾಕಿ ವಿಶ್ವ ಲೀಗ್: ಶುಕ್ರವಾರದಂದು ಭಾರತ vs ಪಾಕಿಸ್ತಾನ
ಆಂಟ್ವೆರ್ಪ್ (ಬೆಲ್ಜಿಯಂ), ಜೂ.24: ಹಾಕಿ ತಂಡ ವಿಶ್ವ ಲೀಗ್ ನಲ್ಲಿ ಭಾರತದ ಪುರುಷರ ಹಾಕಿ ತಂದ ಸತತ ಎರಡು ಗೆಲುವು ಸಾಧಿಸಿದೆ. ಎ ಗುಂಪಿನಲ್ಲಿ ಮಂಗಳವಾರ ಪೋಲ್ಯಾಂಡ್ ತಂಡವನ್ನು ಮಣಿಸಿದ ಭಾರತ ತನ್ನ ಮುಂದಿನ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಶುಕ್ರವಾರ ಆಡಲಿದೆ.
ವಿಶ್ವ ಲೀಗ್ನ ತನ್ನ 2ನೇ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ 3-0 ಗೋಲುಗಳ ಅಂತರದಿಂದ ಸತತ 2ನೇ ಗೆಲುವು ಸಾಧಿಸಲು ವಾಲ್ಮಿಕಿ ಸಹೋದರರ ಜವಾಬ್ದಾರಿಯುತ ಆಟ ಹಾಗೂ ನಾಯಕ ಸರ್ದಾರ್ ಸಿಂಗ್ ಅವರ ಅಚ್ಚರಿಯ ಗೋಲು ಕಾರಣವಾಯಿತು. ಫ್ರಾನ್ಸ್ ವಿರುದ್ಧ ಜಯ ಗಳಿಸಿದ್ದ ನಂ.9 ಸ್ಥಾನದಲ್ಲಿರುವ ಭಾರತಕ್ಕೆ ವಿಶ್ವ ನಂ.17 ಸ್ಥಾನದಲ್ಲಿರುವ ಪೋಲ್ಯಾಂಡ್ ಅಂಥ ಸವಾಲು ಒಡ್ಡಲಿಲ್ಲ.

ಪಂದ್ಯದ 23ನೇ ನಿಮಿಷದಲ್ಲಿ ಯುವರಾಜ್ ವಾಲ್ಮಿಕಿ, 42ನೇ ನಿಮಿಷದಲ್ಲಿ ನಾಯಕ ಸರ್ದಾರ್ ಸಿಂಗ್ ಹಾಗೂ 52ನೇ ನಿಮಿಷದಲ್ಲಿ ದೇವಿಂದರ್ ವಾಲ್ಮಿಕಿ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದರು.
ಇದೇ ವೇಳೆ ಒಲಿಂಪಿಕ್ ಅರ್ಹತೆ ದೃಷ್ಟಿಯಿಂದ ಮಹತ್ವದ್ದಾಗಿರುವ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಸತತ 2ನೇ ಸೋಲು ಅನುಭವಿಸಿದೆ. ಹಾಕಿ ವಿಶ್ವ ಲೀಗ್ನ ಮಂಗಳವಾರದ 2ನೇ ಪಂದ್ಯದಲ್ಲಿ ಭಾರತ 0-5 ರಿಂದ ನ್ಯೂಜಿಲೆಂಡ್ ತಂಡದ ಎದುರು ಸೋಲು ಕಂಡಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಲೀಗ್ ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೂ.28ರಂದು ಸರ್ದಾರ್ ಸಿಂಗ್ ತಂಡ ಸೆಣಸಲಿದೆ. ಜುಲೈ 5 ರಂದು ಅಂತಿಮ ಹಣಾಹಣಿ ನಡೆಯಲಿದೆ.
ಎ ಗುಂಪಿನಲ್ಲಿ ಭಾರತದ ಜೊತೆಗೆ ಆಸ್ಟ್ರೇಲಿಯಾ, ಪಾಕಿಸ್ತಾನ, ಫ್ರಾನ್ಸ್, ಪೋಲ್ಯಾಂಡ್ ಇದ್ದರೆ, ಬಿ ಗುಂಪಿನಲ್ಲಿ ಮಲೇಷಿಯಾ, ಬ್ರಿಟನ್, ಐರ್ಲೆಂಡ್, ಚೀನಾ, ಬೆಲ್ಜಿಯಂ ತಂಡಗಳಿವೆ. ಎ ಗುಂಪಿನಲ್ಲಿ ಸದ್ಯಕ್ಕೆ ಭಾರತ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬೆಲ್ಜಿಯಂ 4 ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications