ಆರ್ಚರ್ ಕಪಿಲ್‌ಗೆ ಕೊರೊನಾವೈರಸ್ ಸೋಂಕು ದೃಢ

ನವದೆಹಲಿ: ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ಯಾಂಪ್‌ನಲ್ಲಿ ಭಾಗವಹಿಸುತ್ತಿದ್ದ ಆರ್ಚರ್ ಕಪಿಲ್‌ಗೆ ಕೊರೊನಾವೈರಸ್ ತಗುಲಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಈ ವಿಚಾರವನ್ನು ಸೋಮವಾರ (ನವೆಂಬರ್ 30) ತಿಳಿಸಿದೆ.
ಪತ್ರಿಕಾ ಪ್ರಕಟಣೆಯ ಮೂಲಕ ಕಪಿಲ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿರುವುದನ್ನು ತಿಳಿಸಿರುವ ಸಾಯ್, 'ಕಪಿಲ್‌ಗೆ ಕೊರೊನಾ ಗುಣಲಕ್ಷಣಗಳೇನೂ ಇರಲಿಲ್ಲ. ಅವರನ್ನು ವೈದ್ಯಕೀಯ ತಂಡ ಉಪಚರಿಸುತ್ತಿದೆ,' ಎಂದು ಮಾಹಿತಿ ನೀಡಿದೆ.
'ಕಪಿಲ್ ಸದ್ಯ ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಅವರು ಕ್ಯಾಂಪ್‌ನಲ್ಲಿರುವ ಉಳಿದ ಯಾವುದೇ ಕ್ರೀಡಾಪಟುಗಳ ಸಂಪರ್ಕಕ್ಕೆ ಬಂದಿಲ್ಲ,' ಎಂದು ತಿಳಿಸಿರುವ ಸಾಯ್, ರಾಷ್ಟ್ರೀಯ ಕ್ಯಾಂಪ್‌ನಲ್ಲಿ ಕೋವಿಡ್-19ಗೆ ಸಂಬಂಧಿಸಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದೆ.
'ಕಪಿಲ್ 18 ದಿನಗಳ ಬಿಡುವಿನಲ್ಲಿದ್ದರು. ಕ್ಯಾಂಪ್‌ಗೆ ಮತ್ತೆ ಸೇರಿಕೊಳ್ಳುವಾಗ ಮಾಡಲಾದ ಕೋವಿಡ್-19 ಪರೀಕ್ಷೆಯಲ್ಲಿ ಅವರ ಫಲಿತಾಂಶ ಪಾಸಿಟಿವ್ ಬಂದಿದೆ,' ಎಂದು ಸಾಯ್ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications