ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಭಾರತದ ಆರ್ಚರ್ ದೀಪಿಕಾ ಕುಮಾರಿ

ನವದೆಹಲಿ, ಡಿಸೆಂಬರ್ 11: ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದಾರೆ. ಮಂಗಳವಾರ (ಸೋಮವಾರ ಡಿ. 10) ಅವರ ನಿಶ್ಚಿತಾರ್ಥವು ಬಿಲ್ಲುಗಾರಿಕೆ ಕ್ರೀಡಾಪಟು ಅತನು ದಾಸ್ ಅವರೊಂದಿಗೆ ನೆರವೇರಿದೆ. ಮುಂದಿನ ವರ್ಷ ದೀಪಿಕಾ ವಿವಾಹ ನಡೆಯಲಿದೆ.
ಆಕರ್ಷಕ ದಿರಿಸು ಧರಿಸಿದ್ದ 24ರ ಹರೆಯದ ದೀಪಿಕಾ ಅವರು 26ರ ಹರೆಯದ ಅತನು ಅವರೊಂದಿಗೆ ನಿಶ್ಚಿತಾರ್ಥದ ಅಂಗವಾಗಿ ನಡೆದ ಸಾಂಪ್ರದಾಯಿಕ ಪೂಜೆಯಲ್ಲಿ ಸೋಮವಾರ (ಡಿಸೆಂಬರ್ 10) ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಮತ್ತವರ ಪತ್ನಿ ಮೀರಾ ಮುಂಡಾ ಪಾಲ್ಗೊಂಡಿದ್ದರು.
ನಿಶ್ಚಿತಾರ್ಥ ಕಾರ್ಯಕ್ರಮದ ಬಳಿಕ ಆರ್ಚರ್‌ಗಳಾದ ದೀಪಿಕಾ-ಅತನು ಮಾತನಾಡಿ, ' ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಳ್ಳುವ ಸಲುವಾಗಿ 2019ರಲ್ಲಿ ಕೊಂಚ ಬ್ಯುಸಿಯಾಗಲಿದ್ದೇವೆ. ಮುಂದಿನ ವರ್ಷ ಬಹುಶಃ ನವೆಂಬರ್‌ನಲ್ಲಿ ಮದುವೆಯಾಗಲಿದ್ದೇವೆ' ಎಂದು ತಿಳಿಸಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ಮಹಿಳಾ ಬಿಲ್ಲುಗಾರಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದೀಪಿಕಾ, ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬಂಗಾರ ಗೆದ್ದಿದ್ದ ಸಾಧಕಿ. ವಿಶ್ವ ನಂ.1 ಆಟಗಾರ್ತಿಯಾಗಿಯೂ ಆಗಿ ಗುರುತಿಸಿಕೊಂಡಿದ್ದ ದೀಪಿಕಾ ಸದ್ಯ ವಿಶ್ವ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications