Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಹೊಸದಾಗಿ ಆರ್ಹತೆ ಪಡೆದ ಭಾರತ ಇಬ್ಬರು ಆಥ್ಲೀಟ್ಸ್‌

ಜುಲೈ 8 ಸೋಮವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತ ಅಥ್ಲೆಟಿಕ್ಸ್ ತಂಡದಲ್ಲಿ ವಿಶ್ವ ಶ್ರೇಯಾಂಕದ ಕೋಟಾದ ಮೂಲಕ ಇಬ್ಬರು ಅಥ್ಲೀಟ್‌ಗಳನ್ನು ಸ್ಥಾನ ಪಡೆದಿದ್ದಾರೆ.

ಲಾಂಗ್ ಜಂಪ್ ಅಥ್ಲೀಟ್ ಜೆಸ್ವಿನ್ ಆಲ್ಡ್ರಿನ್ ಮತ್ತು 5000 ಮೀಟರ್ ಓಟಗಾರ್ತಿ ಅಂಕಿತಾ ಧ್ಯಾನಿ ಭಾನುವಾರ ವಿಶ್ವ ರ‍್ಯಾಂಕಿಂಗ್ ಕೋಟಾ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು, ಭಾರತ ಅಥ್ಲೆಟಿಕ್ಸ್ ತಂಡದ ಸದಸ್ಯರ ಸಂಖ್ಯೆಯನ್ನು 30ಕ್ಕೆ ಏರಿಕೆ ಆಗಿದೆ.

Indian Athletes Jeswin Aldrin- Ankita Dhyani qualify for Paris Olympics 2024

ಲಾಂಗ್ ಜಂಪ್ ರಾಷ್ಟ್ರೀಯ ದಾಖಲೆ ಹೊಂದಿರುವ ಆಲ್ಡ್ರಿನ್ ಮತ್ತು ಅಂಕಿತಾ ಅವರ ಹೆಸರನ್ನು ವಿಶ್ವ ಅಥ್ಲೆಟಿಕ್ಸ್ (ಡಬ್ಲ್ಯೂಎ) ಪ್ರಕಟಿಸಿದ ಇತ್ತೀಚಿನ ಪಟ್ಟಿಯಲ್ಲಿ ಸೇರಿಸಲಾಗಿದೆ. ವಿವಿಧ ಕಾರಣಗಳಿಗಾಗಿ ಪ್ಯಾರಿಸ್‌ನಲ್ಲಿ ಸ್ಪರ್ಧಿಸದ ತಮ್ಮ ಅಥ್ಲೀಟ್‌ಗಳ ಬಗ್ಗೆ ರಾಷ್ಟ್ರೀಯ ಫೆಡರೇಶನ್‌ಗಳು ಅಂತರರಾಷ್ಟ್ರೀಯ ಸಂಸ್ಥೆಗೆ ಮಾಹಿತಿ ನೀಡಿವೆ.

ಇದಕ್ಕೆ ಉದಾಹರಣೆಯೆಂದರೆ ಭಾರತದ ಅಗ್ರ ಲಾಂಗ್ ಜಂಪ್ ಅಥ್ಲೀಟ್ ಎಂ ಶ್ರೀಶಂಕರ್, ಅವರು 8.27 ಮೀಟರ್‌ಗಳ ಅರ್ಹತಾ ಮಾನದಂಡದ ಅಡಿಯಲ್ಲಿ ನೇರವಾಗಿ ಪ್ರವೇಶಿಸಿದರೂ ಗಾಯದ ಕಾರಣ ಕ್ರೀಡಾಕೂಟದಿಂದ ದೂರ ಉಳಿದಿದ್ದಾರೆ.

ಡಬ್ಲ್ಯೂಎ ಪ್ರಕಟಿಸಿದ ಇತ್ತೀಚಿನ ರ‍್ಯಾಂಕಿಂಗ್‌ನಲ್ಲಿಆಲ್ಡ್ರಿನ್ 31ನೇ ಸ್ಥಾನದಲ್ಲಿದ್ದಾರೆ, ಆದರೆ ಒಲಿಂಪಿಕ್ಸ್‌ನಲ್ಲಿ ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ 32 ಆಟಗಾರರು ಸ್ಪರ್ಧಿಸಲಿದ್ದಾರೆ. ಇನ್ನೊಂದೆಡೆ ಅಂಕಿತಾ 42ನೇ ಸ್ಥಾನ ಪಡೆದಿದ್ದು, ಇದು ಕೊನೆಯ ಸ್ಥಾನವಾಗಿದೆ. ಜುಲೈ 2 ರಂದು, ಇಬ್ಬರೂ ಅರ್ಹತಾ ಬ್ರಾಕೆಟ್‌ನಿಂದ ಹೊರಗಿದ್ದರು.

Indian Athletes Jeswin Aldrin- Ankita Dhyani qualify for Paris Olympics 2024

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆಲ್ಡ್ರಿನ್ ಮತ್ತು ಅಂಕಿತಾ ಅವರು ಆರ್ಹತೆ ಪಡೆಯುತ್ತಿದ್ದಂತೆ ಭಾರತ ತಂಡದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಜುಲೈ 4 ರಂದು 28 ಸದಸ್ಯರ ತಂಡವನ್ನು ಪ್ರಕಟಿಸಿದ ಬಳಿಕ ಭಾರತ ಅಥ್ಲೆಟಿಕ್ಸ್ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಅವರು ಪ್ಯಾರಿಸ್ ಕ್ರೀಡಾಕೂಟಕ್ಕೆ ನಂತರ ಅರ್ಹತೆ ಪಡೆದವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ಫೆಡರೇಶನ್ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಹೇಳಿದ್ದರು.

ಅಥ್ಲೆಟಿಕ್ಸ್ ತಂಡಕ್ಕೆ ನೀರಜ್ ಚೋಪ್ರಾ ಸಾರಥಿ

2024ರ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ನೀರಜ್ ಚೋಪ್ರಾ ಅವರು 28 ಸದಸ್ಯರ ಭಾರತ ಅಥ್ಲೆಟಿಕ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ನೀರಜ್ ಚೋಪ್ರಾ ನೇತೃತ್ವ ವಹಿಸಲಿರುವ 28 ಸದಸ್ಯರ ತಂಡದಲ್ಲಿ ಒಟ್ಟು 17 ಪುರುಷ ಮತ್ತು 11 ಮಹಿಳಾ ಅಥ್ಲೀಟ್‌ಗಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ 30 ಸದಸ್ಯರ ಭಾರತ ಅಥ್ಲೆಟಿಕ್ಸ್ ತಂಡ

ಪುರುಷರು: ಅವಿನಾಶ್ ಸಾಬಲ್ (3,000 ಮೀ ಸ್ಟೀಪಲ್ ಚೇಸ್), ನೀರಜ್ ಚೋಪ್ರಾ, ಕಿಶೋರ್ ಕುಮಾರ್ ಜೆನಾ (ಜಾವೆಲಿನ್ ಎಸೆತ), ತಜಿಂದರ್ಪಾಲ್ ಸಿಂಗ್ ತೂರ್ (ಶಾಟ್ ಪುಟ್), ಪ್ರವೀಣ್ ಚಿತ್ರವೆಲ್, ಅಬ್ದುಲ್ಲಾ ಅಬುಬಕರ್ (ಟ್ರಿಪಲ್ ಜಂಪ್), ಅಕ್ಷದೀಪ್ ಸಿಂಗ್, ವಿಕಾಸ್ ಸಿಂಗ್, ಪರಮ್ಜೀತ್ ಸಿಂಗ್ ಬಿಶ್ತ್ (20 ಕಿಮೀ ನಡಿಗೆ), ಮೊಹಮ್ಮದ್ ಅನಾಸ್, ಮುಹಮ್ಮದ್ ಅಜ್ಮಲ್, ಅಮೋಜ್ ಜಾಕೋಬ್, ಸಂತೋಷ್ ತಮಿಳರಸನ್, ರಾಜೇಶ್ ರಮೇಶ್ (4x400 ಮೀ ರಿಲೇ), ಮಿಜೋ ಚಾಕೋ ಕುರಿಯನ್ (4x400 ಮೀ ರಿಲೇ), ಸೂರಜ್ ಪನ್ವಾರ್ (ಮಿಶ್ರ ಮ್ಯಾರಥಾನ್ ನಡಿಗೆ), ಸರ್ವೇಶ್ ಅನಿಲ್ ಕುಶಾರೆ (ಹೈ ಜಂಪ್), ಜೆಸ್ವಿನ್ ಆಲ್ಡ್ರಿನ್ (ಲಾಂಗ್ ಜಂಪ್)

ಮಹಿಳೆಯರು: ಕಿರಣ್ ಪಹಲ್ (400 ಮೀ), ಪಾರುಲ್ ಚೌಧರಿ (3,000 ಮೀ ಸ್ಟೀಪಲ್ ಚೇಸ್ ಮತ್ತು 5,000 ಮೀ), ಜ್ಯೋತಿ ಯರಾಜಿ (100 ಮೀ ಹರ್ಡಲ್ಸ್), ಅಣ್ಣು ರಾಣಿ (ಜಾವೆಲಿನ್ ಎಸೆತ), ಅಭಾ ಖತುವಾ (ಶಾಟ್ ಪಟ್), ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿತ್ಯಾ ರಾಮರಾಜ್, ಪೂವಮ್ಮ ಎಂಆರ್ (4x400 ಮೀ ರಿಲೇ), ಪ್ರಾಚಿ (4x400 ಮೀ), ಪ್ರಿಯಾಂಕಾ ಗೋಸ್ವಾಮಿ (20 ಕಿಮೀ ನಡಿಗೆ), ಅಂಕಿತಾ ಧ್ಯಾನಿ (5000 ಮೀಟರ್).

Story first published: Monday, July 8, 2024, 7:04 [IST]
Other articles published on Jul 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+