Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಗುರುವಾರ, ಜನವರಿ 26ರಂದು ವಡೋದರಾದಲ್ಲಿ ತಮ್ಮ ಗೆಳತಿ ಮೇಹಾ ಪಟೇಲ್ ಅವರನ್ನು ವಿವಾಹವಾದರು.
ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್ ತನ್ನ ವಿವಾಹದ ನಿಮಿತ್ತ ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಆದರೆ, ಮದುವೆಯ ಕುರಿತು ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ.
ಅಕ್ಷರ್ ಪಟೇಲ್ ತಮ್ಮ ಮದುವೆಯ ಯಾವುದೇ ಫೋಟೋ ಅಥವಾ ವೀಡಿಯೊಗಳನ್ನು ಹಂಚಿಕೊಳ್ಳದಿದ್ದರೂ, ಟ್ವಿಟರ್‌ನಲ್ಲಿನ ಅನೇಕ ಅಭಿಮಾನಿಗಳು ಅವರ ಸ್ಮರಣೀಯ ದಿನದ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಅಕ್ಷರ್ ಪಟೇಲ್ ಶ್ರೀಲಂಕಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮದುವೆಯ ಕಾರಣದಿಂದ ನ್ಯೂಜಿಲೆಂಡ್ ವಿರುದ್ಧದ ವೈಟ್‌ಬಾಲ್ ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ.
ಗುಜರಾತ್ ಮೂಲದ ಕ್ರಿಕೆಟಿಗ ಶ್ರೀಲಂಕಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 31 ಎಸೆತಗಳಲ್ಲಿ 65 ರನ್ ಗಳಿಸಿ ಗಮನ ಸೆಳೆದಿದ್ದರು. ಅದರೂ, ಆ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಪ್ರವಾಸಿ ಶ್ರೀಲಂಕಾದೆದುರು ಸೋತಿತು. ಅಂತಿಮವಾಗಿ ಭಾರತ 2-1 ಅಂತರದಲ್ಲಿ ಸರಣಿ ಗೆದ್ದಿತ್ತು.

ಇತ್ತೀಚಿಗಷ್ಟೆ ಭಾರತದ ಇನ್ನೊಬ್ಬ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಬಾಲಿವುಡ್ ನಟಿ ಅಥಿಯಾ ಶೆಟ್ಟಿಯನ್ನು ಮುಂಬೈನ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ಸೋಮವಾರ, ಜನವರಿ 23ರಂದು ವಿವಾಹವಾಗಿದ್ದರು. ಅಥಿಯಾ ಶೆಟ್ಟಿ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಪುತ್ರಿಯಾಗಿದ್ದಾಳೆ.
ಭಾರತ ತಂಡದ ನಿರಂತರ ಕ್ರಿಕೆಟ್ ವೇಳಾಪಟ್ಟಿಯ ಕಾರಣ, ಈ ಇಬ್ಬರ ಮದುವೆ ಸಮಾರಂಭದಲ್ಲಿ ಯಾವುದೇ ಕ್ರಿಕೆಟಿಗರು ಪಾಲ್ಗೊಂಡಿರಲಿಲ್ಲ. ಕೇವಲ ಕುಟುಂಬದ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ಅಕ್ಷರ್ ಪಟೇಲ್ ಮತ್ತು ಕೆಎಲ್ ರಾಹುಲ್ ಅವರು ಕ್ರಿಕೆಟ್ ಬಿಡುವಿನ ಸಮಯದಲ್ಲಿ ಪ್ರತ್ಯೇಕ ಆರತಕ್ಷತೆ ಸಮಾರಂಭ ಆಯೋಜಿಸಲಿದ್ದು, ಆ ವೇಳೆಗೆ ಭಾರತೀಯ ಕ್ರಿಕೆಟಿಗರು ಪಾಲ್ಗೊಳ್ಳುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications