ಚಿತ್ರಗಳು: ಗೆಳತಿ ಜಯಾ ಭಾರದ್ವಾಜ್‌ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ದೀಪಕ್ ಚಹರ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಭಾರತೀಯ ಕ್ರಿಕೆಟಿಗ ದೀಪಕ್ ಚಹರ್ ಜೂನ್ 1ರಂದು ಆಗ್ರಾದ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ದೀರ್ಘಕಾಲದ ಗೆಳತಿ ಜಯಾ ಭಾರದ್ವಾಜ್‌ರನ್ನು ವಿವಾಹವಾದರು.
ಆಗ್ರಾದ ಜೇಪೀ ಪ್ಯಾಲೇಸ್ ಹೋಟೆಲ್‌ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು. ದೀಪಕ್ ಚಹರ್ ಮತ್ತು ಜಯಾ ಭಾರದ್ವಾಜ್ ವಿವಾಹದ ಮೊದಲು ಹಳದಿ ಮತ್ತು ಸಂಗೀತ ಸಮಾರಂಭದ ದೃಶ್ಯವನ್ನು ರಾಹುಲ್ ಚಹರ್ ಹಂಚಿಕೊಂಡಿದ್ದರು. ವಿವಾಹದ ಮೊದಲ ಚಿತ್ರವನ್ನು ದೀಪಕ್ ಚಹರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ವೇಗಿ ದೀಪಕ್ ಚಹರ್ ತಮ್ಮ ನಿಶ್ಚಿತ ವಧು ಜಯಾ ಭಾರದ್ವಾಜ್ ಅವರ ಕುತ್ತಿಗೆಗೆ ಹಾರವನ್ನು ಹಾಕುವುದನ್ನು ಕಾಣಬಹುದು. ಬುಧವಾರ ಆಗ್ರಾದ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ವಿವಾಹವಾದರು.

ಯಾವಾಗಲೂ ಹೀಗೆ ಸಂತೋಷವಾಗಿರಿಸಲು ಭರವಸೆ ನೀಡುತ್ತೇನೆ
"ನಾನು ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾದಾಗ, ನೀವು ಮತ್ತು ನಾನು ಸರಿ ಎಂದು ನನಗೆ ಅನಿಸಿತು. ನಾವು ನಮ್ಮ ಜೀವನದ ಪ್ರತಿ ಕ್ಷಣವನ್ನು ಒಟ್ಟಿಗೆ ಆನಂದಿಸಿದ್ದೇವೆ ಮತ್ತು ನಾನು ನಿಮ್ಮನ್ನು ಯಾವಾಗಲೂ ಹೀಗೆ ಸಂತೋಷವಾಗಿರಿಸಲು ಭರವಸೆ ನೀಡುತ್ತೇನೆ. ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. ದಯವಿಟ್ಟು ಎಲ್ಲರೂ ನಿಮ್ಮ ಆಶೀರ್ವಾದವನ್ನು ನಮಗೆ ನೀಡಿ," ಎಂದು ದೀಪಕ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.
ಈ ಹಿಂದೆ ಐಪಿಎಲ್ 2021ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪಂದ್ಯದ ನಂತರ ದೀಪಕ್ ಚಹರ್ ತನ್ನ ಗೆಳತಿಗೆ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಪ್ರಪೋಸ್ ಮಾಡಿದ್ದರು. ಘಟನೆಯ ವಿಡಿಯೋವನ್ನು ಚಹರ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ದೀಪಕ್ ತನ್ನ ಗೆಳತಿ ಜಯಾ ಭಾರದ್ವಾಜ್ ಕುಳಿತಿದ್ದ ಸ್ಟ್ಯಾಂಡ್‌ಗೆ ಹೋಗಿ ಸಾರ್ವಜನಿಕವಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ್ದನು.

ಜೂನ್ 3ರಂದು ನವದೆಹಲಿಯಲ್ಲಿ ಆರತಕ್ಷತೆ
ಬಾರಾಖಂಬಾ ರಸ್ತೆಯಲ್ಲಿ ನೆಲೆಸಿರುವ ಜಯಾ ಭಾರದ್ವಾಜ್ ಅವರ ಹುಟ್ಟೂರು ನವದೆಹಲಿಯೂ ಹೌದು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಸಿಎಸ್‌ಕೆ ಹಾಗೂ ಟೀಮ್ ಇಂಡಿಯಾದ ಟಾಪ್ ಸ್ಟಾರ್ ಆಟಗಾರರು ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೀಪಕ್ ಚಹರ್ ಮತ್ತು ಜಯಾ ಭಾರದ್ವಾಜ್ ಆರತಕ್ಷತೆ ಸಮಾರಂಭದಲ್ಲಿ ಅನೇಕ ಅತಿಥಿಗಳು ಮತ್ತು ಕೆಲವು ಗಣ್ಯರು ಭಾಗವಹಿಸಲಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ಆಹ್ವಾನ
ಇನ್‌ಸೈಡ್‌ಸ್ಪೋರ್ಟ್‌ನ ವರದಿಯ ಪ್ರಕಾರ, ದೀಪಕ್ ಚಹರ್ ಅವರು ಪತ್ನಿ ಸಾಕ್ಷಿ ಧೋನಿ ಜೊತೆಗೆ ತಮ್ಮ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಈ ದಂಪತಿಗಳು ಶುಭ ಸಂದರ್ಭದಲ್ಲಿ ಹಾಜರಾಗುವ ನಿರೀಕ್ಷೆಯಿದೆ. ಎಂಎಸ್ ಧೋನಿ ಕೂಡ ದೀಪಕ್ ಚಹರ್‌ಗೆ ತುಂಬಾ ಹತ್ತಿರವಾಗಿದ್ದಾರೆ ಮತ್ತು ಭಾರತೀಯ ಮತ್ತು ಸಿಎಸ್‌ಕೆ ತಂಡಗಳಲ್ಲಿ ಅವರನ್ನು ಬೆಂಬಲಿಸಿದ್ದಾರೆ. ಚಹರ್ ಕೂಡ ಎಂಎಸ್ ಧೋನಿಯನ್ನು ತನ್ನ ಮಾರ್ಗದರ್ಶಕನಾಗಿ ಪರಿಗಣಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರನ್ನು ಸಹ ಮದುವೆಗೆ ಆಹ್ವಾನಿಸಲಾಗಿತ್ತು ಮತ್ತು ಭಾರತೀಯ ಪುರುಷರ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಜ್ದೇಹ್ ಅವರನ್ನು ಸಹ ಆಹ್ವಾನಿಸಲಾಗಿತ್ತು. ವರದಿಯ ಪ್ರಕಾರ, ಈ ಮೂವರು ಕ್ರಿಕೆಟ್ ತಾರೆಯರು ದೀಪಕ್ ಚಹರ್ ಆರತಕ್ಷತೆ ಸಮಾರಂಭದಲ್ಲಿ ಹಾಜರಾಗಲಿದ್ದಾರೆ.

ಐಪಿಎಲ್ 2022 ತಪ್ಪಿಸಿಕೊಂಡ ದೀಪಕ್ ಚಹರ್
ಐಪಿಎಲ್ 2022ರ ಆಟಗಾರರ ಹರಾಜಿನಲ್ಲಿ ಸಿಎಸ್‌ಕೆ 14 ಕೋಟಿ ರೂ.ಗೆ ದೀಪಕ್ ಚಹರ್ ಅವರನ್ನು ಮರಳಿ ಖರೀದಿಸಿತ್ತು. ಆದರೆ ಬೆನ್ನುನೋವಿನ ಕಾರಣ ಅವರು ಹಾಲಿ ಚಾಂಪಿಯನ್ನರ ಎಲ್ಲಾ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.
29ರ ಹರೆಯದ ದೀಪಕ್ ಚಹರ್ ಇದುವರೆಗೆ 63 ಪಂದ್ಯಗಳಲ್ಲಿ 29.19 ಸರಾಸರಿಯಲ್ಲಿ 59 ವಿಕೆಟ್ ಪಡೆದಿದ್ದಾರೆ. 2019ರಲ್ಲಿ ಅವರು 17 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಪಡೆದಾಗ ಅವರಿಂದ ಅದ್ಭುತ ಪ್ರದರ್ಶನ ಬಂದಿತ್ತು. 2021ರಲ್ಲಿ ಸಿಎಸ್‌ಕೆ ತಮ್ಮ 4ನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದಾಗ, ಚಹರ್ 15 ಪಂದ್ಯಗಳಲ್ಲಿ ಕೇವಲ 14 ವಿಕೆಟ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು.
ದೀಪಕ್ ಚಹರ್, ಇತ್ತೀಚಿನ ದಿನಗಳಲ್ಲಿ ಬ್ಯಾಟ್‌ನೊಂದಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರು ವೆಸ್ಟ್ ಇಂಡೀಸ್ ವಿರುದ್ಧ 38 ರನ್ ಗಳಿಸಿದ್ದರು ಮತ್ತು ಅದಕ್ಕೂ ಮುನ್ನ ಏಕದಿನನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 54 ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications