Prasidh Krishna: ರಚನಾ ಜೊತೆ ಸಪ್ತಪದಿ ತುಳಿದ ಭಾರತೀಯ ಕ್ರಿಕೆಟಿಗ ಪ್ರಸಿದ್ಧ್ ಕೃಷ್ಣ; ಹಲವು ಕ್ರಿಕೆಟಿಗರು ಭಾಗಿ
ಗುರುವಾರ, ಜೂನ್ 8ರಂದು ಕರ್ನಾಟಕ ಹಾಗೂ ಭಾರತ ಕ್ರಿಕೆಟ್ ತಂಡದ ವೇಗಿ ಪ್ರಸಿದ್ಧ್ ಕೃಷ್ಣ ಅವರು ಗುರುವಾರ ತಮ್ಮ ನಿಶ್ಚಿತ ವಧು ರಚನಾ ಅವರೊಂದಿಗೆ ದಕ್ಷಿಣ ಭಾರತದ ಸಂಪ್ರದಾಯದಂತೆ ವಿವಾಹವಾದರು.
ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವೇಗಿ ಆಗಿರುವ ಪ್ರಸಿದ್ಧ್ ಕೃಷ್ಣ ಅವರು ಮಂಗಳವಾರವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿವಾಹ ಸಮಾರಂಭದಲ್ಲಿ ಭಾರತ ತಂಡದ ಸಹ ಆಟಗಾರರಾದ ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಕೃಷ್ಣಪ್ಪ ಗೌತಮ್ ಸೇರಿದಂತೆ ಹಲವರು ಭಾಗವಹಿಸಿ, ದಂಪತಿಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

27ರ ವರ್ಷದ ಪ್ರಸಿದ್ಧ್ ಕೃಷ್ಣ ಅವರು ಐಪಿಎಲ್ 2023ರ ಸೀಸನ್‌ಗೂ ಮೊದಲು ಗಾಯಗೊಂಡು ಹೊರಗುಳಿದಿದ್ದರು. ಭಾರತೀಯ ಕ್ರಿಕೆಟಿಗ ಪ್ರಸಿದ್ಧ್ ಕೃಷ್ಣ ಮತ್ತು ಅವರ ಪತ್ನಿ ರಚನಾ ಅವರ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಕೃಷ್ಣಪ್ಪ ಗೌತಮ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ ಚಿತ್ರ ಒಂದರಲ್ಲಿ, ಪ್ರಸಿದ್ಧ್ ಕೃಷ್ಣ ದಂಪತಿ, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ, ಮನೀಶ್ ಪಾಂಡೆ ಮತ್ತು ಇತರ ಅನೇಕ ಪ್ರಮುಖ ಕರ್ನಾಟಕದ ಕ್ರಿಕೆಟಿಗರೊಂದಿಗೆ ಪೋಸ್ ನೀಡಿರುವುದನ್ನು ಕಾಣಬಹುದು.
'ಅಭಿನಂದನೆಗಳು ಸ್ಕಿಡ್ಡಿ' ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದು, ದಂಪತಿಗಳನ್ನು ಅಭಿನಂದಿಸಿದ ಕೃಷ್ಣಪ್ಪ ಗೌತಮ್ ಪೋಸ್ಟ್ ಅನ್ನು ಶ್ರೇಯಸ್ ಅಯ್ಯರ್ ಅವರು ಮರುಹಂಚಿಕೊಂಡಿದ್ದಾರೆ.

ಪ್ರಸಿದ್ಧ್ ಕೃಷ್ಣ ಪತ್ನಿ ರಚನಾ ಬಗ್ಗೆ
ಪ್ರಸಿದ್ಧ್ ಕೃಷ್ಣ ಅವರ ಪತ್ನಿ ರಚನಾ ಅವರ ಇನ್‌ಸ್ಟಾಗ್ರಾಮ್ ಖಾತೆಯು ಖಾಸಗಿಯಾಗಿರುವ ಕಾರಣ, ಅವರ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ಹೆಚ್ಚಿನ ವರದಿಗಳ ಪ್ರಕಾರ, ಅವರು ಡೆಲ್‌ನಲ್ಲಿ ಉತ್ಪನ್ನ ನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ ಮತ್ತು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನ ಟೆಕ್ಸಾಸ್‌ನಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.
ರಚನಾ ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಎಂದು ವರದಿಯಾಗಿದೆ. ನಂತರ ರಚನಾ ಸಿಸ್ಕೋಗೆ ಸೇರಿದರು. ವಿದ್ಯಾರ್ಥಿಗಳಿಗೆ ಕಾರ್ಪೊರೇಟ್‌ಗಳೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುವ ಎಡ್‌ಟೆಕ್ ವ್ಯವಹಾರವನ್ನು ಸ್ಥಾಪಿಸಿದ ರಚನಾ ಸ್ವತಃ ಉದ್ಯಮಿ ಎನ್ನಲಾಗಿದೆ.
ಇನ್ನು ಪ್ರಸಿದ್ಧ್ ಕೃಷ್ಣ ಹೇಳುವುದಾದರೆ, ಬಲಗೈ ವೇಗಿ ಪಕ್ಕೆಲುಬು ನೋವಿಗೆ ತುತ್ತಾದರು. ಇದು ಇತ್ತೀಚೆಗೆ ಮುಕ್ತಾಯಗೊಂಡ 2023ರ ಐಪಿಎಲ್ ಸೀಸನ್‌ನಲ್ಲಿ ಅವರ ಭಾಗವಹಿಸುವಿಕೆಗೆ ಅಡ್ಡಿಯಾಯಿತು.

ಐಪಿಎಲ್ 2022ರ ಮಿನಿ ಹರಾಜಿನಲ್ಲಿ, ಪ್ರಸಿದ್ಧ್ ಕೃಷ್ಣ ಅವರನ್ನು ರಾಜಸ್ಥಾನ ರಾಯಲ್ಸ್ 10 ಕೋಟಿ ರೂಪಾಯಿಗೆ ತೆಗೆದುಕೊಂಡಿತು. ಅವರು ತಮ್ಮ ತಂಡಕ್ಕೆ 17 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಪಡೆಯುವ ಮೂಲಕ ಪ್ರಭಾವ ಬೀರಿದ್ದರು ಮತ್ತು ರಾಜಸ್ಥಾನ ರಾಯಲ್ಸ್ ಫೈನಲ್ ತಲುಪಲು ನೆರವಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications