ಪತ್ನಿಯಿಂದ ಮಾನಸಿಕ ಹಿಂಸೆ: ಶಿಖರ್ ಧವನ್ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿಗೆ
ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಶಿಖರ್ ಧವನ್ ಹಾಗೂ ಪತ್ನಿ ಆಯೆಷಾ ಮುಖರ್ಜಿ ನಡುವಿನ ವೈವಾಹಿಕ ಜೀವನದ ಅಧಿಕೃತವಾಗಿ ಅಂತ್ಯವಾಗಿದೆ. ಈ ದಂಪತಿಯ ವಿಚ್ಛೇದನ ಪ್ರಕರಣವನ್ನು ದೆಹಲಿಯ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದ್ದು ನ್ಯಾಯಾಧೀಶ ಹರೀಶ್ ಕುಮಾರ್ ಅವರು ಧವನ್ ತಮ್ಮ ಹೆಂಡತಿಯ ವಿರುದ್ಧದ ವಿಚ್ಛೇದನ ಅರ್ಜಿಯಲ್ಲಿ ಮಾಡಿದ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಶಿಖರ್ ಧವನ್ ಪತ್ನಿ ಈ ಆರೋಪಗಳನ್ನು ಪ್ರಶ್ನಿಸದೆ ತನ್ನನ್ನು ಸಮರ್ಥನೆ ಮಾಡಿಕೊಳ್ಳಲು ವಿಫಲರಾಗಿರುವ ಕಾರಣ ನ್ಯಾಯಾಲಯ ಧವನ್ ಮನವಿಯನ್ನು ಪುಸ್ಕರಿಸಿದೆ.

ಶಿಖರ್ ಧವನ್ ತಮ್ಮ ಪತ್ನಿಯಿಂದಾಗಿ ಮಾನಸಿಕ ಹಿಂಸೆಗೆ ಒಳಗಿದ್ದಾರೆ ಹಾಗೂ ತಮ್ಮ ಮಗನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ತಮ್ಮ ಮಗನನ್ನು ತನ್ನ ಸುಪರ್ದಿಗೆ ಪಡೆಯಲು ನ್ಯಾಯಾಲಯವು ಹಿರಿಯ ಕ್ರಿಕೆಟಿಗನಿಗೆ ಅವಕಾಶ ನೀಡಿಲ್ಲ. ಆದರೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸೂಕ್ತ ಸಮಯದಲ್ಲಿ ಭೇಟಿಯಾಗಲು ಮತ್ತು ಅವರೊಂದಿಗೆ ವೀಡಿಯೊ ಕರೆ ಮೂಲಕ ಚಾಟ್ ಮಾಡಲು ಧವನ್‌ಗೆ ಕೋರ್ಟ್ ಅವಕಾಶ ನೀಡಿ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಆಯೆಶಾ ಮುಖರ್ಜಿಯ ಮೇಲೆ ಶಿಖರ್ ಹೊರಿಸಿದ್ದ ಆರೋಪವನ್ನು ಅವರು ತಿರಸ್ಕರಿಸಲಿಲ್ಲ. ಅಲ್ಲದೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಕೂಡ ಆಯೆಷಾ ವಿಫಲವಾದರು. ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸಿ ಪತ್ನಿ ಧವನ್‌ಗೆ ಮಾನಸಿಕ ಯಾತನೆ ನೀಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆದರೆ ದಂಪತಿಯ ಮಗನ ಶಾಶ್ವತ ಕಸ್ಟಡಿಗೆ ಸಂಬಂಧಿಸಿದ ಯಾವುದೇ ಆದೇಶವನ್ನು ನೀಡಲು ಕೋರ್ಟ್ ನಿರಾಕರಿಸಿದ್ದು ಧವನ್‌ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸೂಕ್ತ ಅವಧಿಗೆ ತನ್ನ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೊ ಕರೆ ಮೂಲಕ ಅವರೊಂದಿಗೆ ಚಾಟ್ ಮಾಡಲು ಭೇಟಿ ನೀಡುವ ಹಕ್ಕುಗಳನ್ನು ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications