Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ-ಪುರುಷರ ರಿಲೇ ತಂಡಗಳು
ಮೇ 6 ಸೋಮವಾರ, ಬಹಾಮಾಸ್‌ನ ನಸ್ಸೌನಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್ ರಿಲೇಸ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ 4x400 ಮೀಟರ್ ರಿಲೇ ತಂಡಗಳು ತಮ್ಮ ಎರಡನೇ ಸುತ್ತಿನ ಹೀಟ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ.
ಮಹಿಳೆಯರ ತಂಡದಲ್ಲಿದ್ದ ರೂಪಲ್ ಚೌಧರಿ, ಎಂ ಆರ್ ಪೂವಮ್ಮ, ಜ್ಯೋತಿಕಾ ಶ್ರೀ ದಂಡಿ ಮತ್ತು ಶುಭಾ ವೆಂಕಟೇಶನ್ 3 ನಿಮಿಷ ಮತ್ತು 29.35 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಮ್ಮ ಟಿಕೆಟ್ ಕಾಯ್ದಿರಿಸಿದರು. ಜಮೈಕಾ ತಂಡ 3 ನಿಮಿಷ 28.54 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೊದಲ ಸ್ಥಾನ ಪಡೆಯಿತು.

ಮತ್ತೊಂದೆಡೆ ಭಾರತದ ಪುರುಷರ ತಂಡದಲ್ಲಿದ್ದ ಮುಹಮ್ಮದ್ ಅನಾಸ್ ಯಾಹಿಯಾ, ಮುಹಮ್ಮದ್ ಅಜ್ಮಲ್, ಅರೋಕಿಯಾ ರಾಜೀವ್ ಮತ್ತು ಅಮೋಜ್ ಜಾಕೋಬ್ ಅವರ 3 ನಿಮಿಷ ಮತ್ತು 3.23 ಸೆಕೆಂಡುಗಳಲ್ಲಿ ತಮ್ಮ ಓಟವನ್ನು ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದರು. ಯುಎಸ್‌ಎ ತಂಡ 2 ನಿಮಿಷ 59.95 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಮೊದಲ ಸ್ಥಾನ ಪಡೆಯಿತು.
ಇದರೊಂದಿಗೆ ಅಗ್ರ ಎರಡು ತಂಡಗಳು ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿವೆ. ಭಾನುವಾರ ನಡೆದ ಮೊದಲ ಸುತ್ತಿನ ಅರ್ಹತಾ ಹೀಟ್‌ನಲ್ಲಿ ಭಾರತ ಮಹಿಳಾ ತಂಡ 3 ನಿಮಿಷ 29.74 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಐದನೇ ಸ್ಥಾನ ಗಳಿಸಿತ್ತು. ಇನ್ನು ಎರಡನೇ ಲೆಗ್ ಓಟಗಾರ ರಾಜೇಶ್ ರಮೇಶ್ ಸೆಳೆತದಿಂದಾಗಿ ಮಧ್ಯದಲ್ಲಿಯೇ ಹಿಂದೆ ಸರಿದ ಕಾರಣ ಪುರುಷರ ತಂಡವು ಮೊದಲ ಸುತ್ತಿನ ಅರ್ಹತಾ ಹೀಟ್‌ನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ.
ಇದರೊಂದಿಗೆ ಭಾರತವು ಈಗ ಪ್ಯಾರಿಸ್‌ಗೆ ಹೋಗುವ 19 ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳನ್ನು ಹೊಂದಿದೆ. ಈ ಪಟ್ಟಿಯಲ್ಲಿ ಹಾಲಿ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಸೇರಿದಂತೆ ಇತರರಿದ್ದಾರೆ. ಅಥ್ಲೆಟಿಕ್ಸ್ ಸ್ಪರ್ಧೆಗಳು ಆಗಸ್ಟ್ 1 ರಿಂದ ಪ್ರಾರಂಭವಾಗಲಿವೆ.

ಪ್ಯಾರಿಸ್‌ಗೆ ಹೋಗಲಿರುವ 7 ಭಾರತದ ಬ್ಯಾಡ್ಮಿಂಟನ್ ಆಟಗಾರು:
ಕಳೆದ ತಿಂಗಳು ಏಪ್ರಿಲ್ 29 ರಂದು ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಸೇರಿದಂತೆ ಏಳು ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ತಮ್ಮ ಶ್ರೇಯಾಂಕದ ಆಧಾರದ ಮೇಲೆ ನಾಲ್ಕು ವಿಭಾಗಗಳಲ್ಲಿ ಪ್ಯಾರಿಸ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಅರ್ಹತೆ ಪಡೆದಿದುಕೊಂಡಿದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಸ್ಥಾನ ಪಡೆದಿದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿರುವ ಪಿವಿ ಸಿಂಧು ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.
ಇನ್ನು ವಿಶ್ವದ 3ನೇ ಶ್ರೇಯಾಂಕದ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಧ್ವಜವನ್ನು ಹಾರಿಸಲು ರೆಡಿಯಾಗಿದ್ದಾರೆ. ಮಹಿಳೆಯರ ಡಂಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications