Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಇತಿಹಾಸ ಸೃಷ್ಟಿಸಲು ರೆಡಿಯಾದ ಭಾರತದ ಮಿಶ್ರ ಆರ್ಚರಿ ತಂಡ!

ಆಗಸ್ಟ್‌ 2 ಶುಕ್ರವಾರ, ಪ್ಯಾರಿಸ್‌ ಒಲಿಂಪಿಕ್ಸ್ 2024ರಲ್ಲಿ ಭಾರತದ ಆರ್ಚರಿ ಮಿಶ್ರ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಆರ್ಹತೆ ಪಡೆದುಕೊಂಡಿದೆ.

ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರನ್ನೊಳಗೊಂಡ ಆರ್ಚರಿ ಮಿಶ್ರ ತಂಡವು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

Indian mixed archery team reached quarter finals of Paris Olympics 2024

ಪ್ರೀ-ಕ್ವಾಟರ್‌ ಫೈನಲ್‌ 16ರ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ದೇಯಾನಂದ ಚೊಯಿರುನಿಸಾ ಮತ್ತು ಆರಿಫ್ ಪಂಗೆಸ್ತು ಅವರನ್ನು 5-1 ರಿಂದ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಜೋಡಿ ಸೋಲಿಸಿತು.

ಪ್ರೀ ಕ್ವಾರ್ಟರ್‌ನ ಸ್ಥಿತಿ ಹೇಗಿತ್ತು?

ಭಕತ್ ಮತ್ತು ಬೊಮ್ಮದೇವರ ಜೋಡಿ ಮೊದಲ ಸೆಟ್‌ನಲ್ಲಿ 37-36 ಅಂಕಗಳಿಂದ ಗೆದ್ದಿತು. ಎರಡನೇ ಸೆಟ್ 38-38ರಲ್ಲಿ ಸಮಬಲಗೊಂಡಿತು. ಇದಾದ ಬಳಿಕ ಭಾರತದ ಜೋಡಿ 38-37 ಅಂಕಗಳೊಂದಿಗೆ ಮೂರನೇ ಸೆಟ್ ಅನ್ನು ಗೆದ್ದುಕೊಂಡಿತು.

ಐದನೇ ಶ್ರೇಯಾಂಕದ ಭಾರತೀಯ ಜೋಡಿಯು ಲೆಸ್ ಇನ್ವಾಲಿಡ್ಸ್‌ನಲ್ಲಿ ತಮ್ಮ ಪ್ರಿ-ಕ್ವಾರ್ಟರ್‌ಫೈನಲ್ ಗೆಲುವಿನ ಸಮಯದಲ್ಲಿ ಐದು 10 ಸೆಗಳನ್ನು ಗಳಿಸಿದರು. ಈ ಗೆಲುವಿನೊಂದಿಗೆ ಭಾರತದ ಆರ್ಚರಿ ಮಿಶ್ರ ತಂಡ ಕ್ವಾಟರ್‌ ಫೈನಲ್‌ ತಲುಪಿದೆ.

ಕ್ವಾಟರ್ ಫೈನಲ್‌ ಯಾವಾಗ?

ಶುಕ್ರವಾರ ಸಂಜೆ 5:30 ಕ್ಕೆ ಕ್ವಾರ್ಟರ್ ಫೈನಲ್ ಸ್ಪರ್ಧೆಗಳು ನಡೆಯಲಿದ್ದು, ಈ ಸ್ಪರ್ಧೆಯ ಪದಕ ಸುತ್ತುಗಳು ಕೂಡ ಇಂದೇ ನಡೆಯಲಿವೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಕತ್ ಮತ್ತು ಬೊಮ್ಮದೇವರ ಜೋಡಿ ಸ್ಪೇನ್ ತಂಡವನ್ನು ಎದುರಿಸಲಿದೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ 6-2 ಅಂಕಗಳ ಅಂತರದಿಂದ ಚೀನಾವನ್ನು ಸೋಲಿಸಿದೆ.

Story first published: Friday, August 2, 2024, 14:52 [IST]
Other articles published on Aug 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+