ಭಾರತದ ಮಿಕ್ಸ್ಡ್ ರಿಲೇ ತಂಡ ಗೆದ್ದ ಬೆಳ್ಳಿ ಪದಕದ ಬಣ್ಣ ಬಂಗಾರಕ್ಕೆ ಬದಲು!

ನವದೆಹಲಿ, ಜುಲೈ 23: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಿಕ್ಸ್ಡ್ ರಿಲೇ ತಂಡ ಗೆದ್ದಿದ್ದ ಬೆಳ್ಳಿ ಪದಕ ಬಂಗಾರಕ್ಕೆ ಬದಲಾಗಿದೆ. 2018ರಲ್ಲಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದ ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿತ್ತು. ಆ ಬೆಳ್ಳಿಯ ಪದಕಕ್ಕೀಗ ಬಂಗಾರದ ಮಣ್ಣನೆ ದೊರೆತಿದೆ.
ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಮೊಹಮ್ಮದ್ ಅನಾಸ್, ಎಂಆರ್ ಪೂವಮ್ಮ, ಹಿಮಾ ದಾಸ್ ಮತ್ತು ಅರೋಕಿಯಾ ರಾಜೀವ್ ಅವರಿದ್ದ ತಂಡ 4X400 ಮೀ. ಮಿಕ್ಸ್ಡ್ ರಿಲೇಯಲ್ಲಿ ಬೆಳ್ಳಿಯ ಪದಕ ಗೆದ್ದಿತ್ತು. ಆ ಬೆಳ್ಳಿ ಪದಕವನ್ನು ಬಂಗಾರಕ್ಕೆ ನವೀಕರಿಸಲಾಗಿದೆ.
ಮಹಿಳಾ ವಿಭಾಗದ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾರತದ ಅನು ರಾಘವನ್ 4ನೇ ಸ್ಥಾನ ಪಡೆದಿದ್ದರು. ಅವರಿಗೀಗ 3ನೇ ಸ್ಥಾನ ನೀಡಲಾಗಿದೆ. ಮಿಕ್ಡ್ಸ್ ರೀಲೇ ಸ್ಪರ್ಧೆಯಲ್ಲಿ ಬಂಗಾರ ಗೆದ್ದಿದ್ದ ಬಹ್ರೇನ್ ರಿಲೇ ತಂಡ ಅನರ್ಹಗೊಂಡಿರುವುದರಿಂದ ಪದಕ ಮತ್ತು ಸ್ಪರ್ಧಾ ವಿಜೇತರ ಸ್ಥಾನಗಳಲ್ಲಿ ಬದಲಾವಣೆಗಳಾಗಿವೆ.
4x400 ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಬಹ್ರೇನ್ ತಂಡದ ಓಟಗಾರ್ತಿ ಕೆಮಿ ಅಡೆಕೋಯಾ ಉದ್ದೀಪನ ಮದ್ದು ಸೇವಿಸಿರುವುದು ಸಾಭೀತಾಗಿದ್ದರಿಂದ ಅವರನ್ನು ಅನರ್ಹಗೊಳಿಸಿ, 4 ವರ್ಷಗಳ ಕಾಲ ನಿಷೇಧಿಸಲಾಗಿದೆ. ಕೆಮಿ ಪಾಲ್ಗೊಂಡಿದ್ದ ಸ್ಪರ್ಧೆಯ ಫಲಿತಾಂಶವನ್ನೂ ಅನರ್ಹಗೊಳಿಸಲಾಗಿದೆ. ಹೀಗಾಗಿ ಪದಕ ವಿಜೇತರಲ್ಲಿ ಬದಲಾವಣೆಗಳಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications