Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡಿಯನ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಲೀಗ್ ಸೀಸನ್ 1 ಉದ್ಘಾಟನೆ: ನಾಳೆಯಿಂದ ಪ್ರಾರಂಭ

INBL Season 1

ಭಾರತದಲ್ಲಿ ಬ್ಯಾಸ್ಕೆಟ್ ಬಾಲ್ ನ ಒಲಿಂಪಿಕ್ ಕ್ರೀಡೆಯ ಆಡಳಿತ ಮಂಡಳಿಯಾದ ಬ್ಯಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ, ಮಾರ್ಚ್ 18 ರಿಂದ ಮೇ 29, 2022 ರವರೆಗೆ ನಡೆಯಲಿರುವ ಇಂಡಿಯನ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಲೀಗ್ 3ಎಕ್ಸ್3 ನ ಉದ್ಘಾಟನಾ ಋತುವನ್ನು ಇಂದು ಘೋಷಿಸಿದೆ.

ಬಹು ನಿರೀಕ್ಷಿತ ಇಂಡಿಯನ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಲೀಗ್ ಅನ್ನು ಭಾರತದಾದ್ಯಂತ 20 ನಗರಗಳಲ್ಲಿ ಏಕಕಾಲದಲ್ಲಿ ನಡೆಸಲಾಗುತ್ತದೆ. FIBA 3x3 ಸ್ಪರ್ಧೆಗಳು ನಾಲ್ಕು ವಿಭಾಗಗಳಲ್ಲಿ ನಡೆಯುತ್ತವೆ - ಪುರುಷರು, ಮಹಿಳೆಯರು, U18 ಪುರುಷರು ಮತ್ತು U18 ಮಹಿಳೆಯರು.

ಈ ಎಲ್ಲಾ ಪಂದ್ಯಗಳನ್ನ ದೇಶದ 20 ನಗರಗಳು ಆತಿಥ್ಯ ವಹಿಸಲಿದ್ದು, ಅವುಗಳು ಹೀಗಿವೆ: ಇಜ್ವಾಲ್, ಬೆಂಗಳೂರು, ಭಾವನಗರ, ಭಿಲೈ, ಚಂಡೀಗಢ, ಚೆನ್ನೈ, ಕಟಕ್, ದೆಹಲಿ, ಗುವಾಹಟಿ, ಹೈದ್ರಾಬಾದ್, ಇಂದೋರ್, ಜೈಪುರ, ಕಾಂಗ್ರಾ, ಕೊಚ್ಚಿ, ಕೊಲ್ಕತ್ತಾ, ಲೂಧಿಯಾನ, ಲಖನೌ, ಮುಂಬೈ, ಪಂಜಿಮ್, ಪುದುಚೇರಿಯಲ್ಲಿ ಪಂದ್ಯಗಳು ನಡೆಯಲಿದೆ.

FIBA 3x3 ಸ್ಪರ್ಧೆಗಳು ನಾಲ್ಕು ವಿಭಾಗಗಳಲ್ಲಿ ನಡೆಯುತ್ತವೆ ಪುರುಷರು, ಮಹಿಳೆಯರು,U18 ಪುರುಷರು ಮತ್ತು U18 ಮಹಿಳೆಯರು.

ಪ್ರತಿ ನಗರದ ಚಾಂಪಿಯನ್‌ಗಳು ಮೇ 27-29, 2022 ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಫೈನಲ್‌ಗಳನ್ನು ಆಡಲು ಅರ್ಹತೆ ಪಡೆಯುತ್ತಾರೆ. ಪುರುಷರು ಮತ್ತು ಮಹಿಳೆಯರಲ್ಲಿನ ಸ್ಪರ್ಧೆಗಳು ಯಾವುದೇ ಆಟಗಾರನಿಗೆ ತಂಡವನ್ನು ರಚಿಸಲು ಮತ್ತು ಭಾಗವಹಿಸಲು ಮುಕ್ತವಾಗಿವೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರನ್ನು
ಒಳಗೊಂಡಿರುತ್ತವೆ. ಅಂಡರ್ 18 ಸ್ಪರ್ಧೆಗಳಲ್ಲಿ 01.01.2004 ರಂದು ಅಥವಾ ನಂತರ ಜನಿಸಿದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಇಂಡಿಯನ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಲೀಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ಯಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಕೆ. ಗೋವಿಂದರಾಜ್ , ಬ್ಯಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಚಂದರ್ ಮುಖಿ ಶರ್ಮಾ ಅವರನ್ನು ಕಾಣಬಹುದು.

Story first published: Thursday, March 17, 2022, 22:58 [IST]
Other articles published on Mar 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+