ಕೈಗೆ ಬಂದಿದ್ದು ಬಾಯಿಗಿಲ್ಲ: ಗೋಮತಿ ಗೆದ್ದ ಏಷ್ಯನ್ ಬಂಗಾರ ವಾಪಸ್!

ನವದೆಹಲಿ, ಮೇ 22: ಭಾರತದ ಮಿಡ್ಲ್ ಡಿಸ್ಟ್ಯಾನ್ಸ್ ರನ್ನರ್ ಗೋಮತಿ ಮಾರಿಮುತ್ತು ಏಷ್ಯಾನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 800 ಮೀಟರ್ ಓಟದಲ್ಲಿ ಗೆದ್ದಿದ್ದ ಬಂಗಾರದ ಪದಕ ಹಿಂದಿರುಗಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾರಣ, ಗೋಮತಿ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಫೇಲಾಗಿದ್ದಾರೆ.
ಕಳೆದ ತಿಂಗಳು ದೋಹಾದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 30ರ ಹರೆಯದ ಗೋಮತಿ ಚಿನ್ನದ ನಗು ಬೀರಿದ್ದರು. ಸ್ಪರ್ಧೆ ಮುಗಿದ ಕೂಡಲೇ ಅವರನ್ನು ಡೋಪ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಆದರೆ ಆ ಉದ್ದೀಪನ ಮದ್ದು ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ಗೋಮತಿ ಅವರು ನಿಷೇಧಿತ ಅನಾಬೋಲಿಕ್ ಸ್ಟೆರಾಯ್ಡ್ ಸೇವಿಸಿರುವುದು ಪತ್ತೆಯಾಗಿದೆ.
'ಗೋಮತಿ ಉದ್ದೀಪನ ಮದ್ದು ಸೇವಿಸಿರುವುದು ಪ್ರಾಥಮಿಕ ಪರೀಕ್ಷೆಯಲ್ಲಿ ಸಾಭೀತಾಗಿದೆ. 'ಬಿ' ಸ್ಯಾಂಪಲ್ ಫಲಿತಾಂಶ ಬರುವವರೆಗೂ ಅವರನ್ನು ಅಮಾನತುಗೊಳಿಸಲಾಗಿದೆ. ಬಿ ಸ್ಯಾಂಪಲ್‌ನಲ್ಲೂ ಮದ್ದು ಸೇವಿಸಿದ್ದು ಕಂಡುಬಂದರೆ ಗೋಮತಿ ಗರಿಷ್ಠ 4 ವರ್ಷಗಳ ನಿಷೇಧಕ್ಕೆ ಒಳಗಾಗಲಿದ್ದಾರೆ. ಭಾರತ ಗೆದ್ದ ಚಿನ್ನದ ಪದಕವನ್ನೂ ಕಳೆದುಕೊಳ್ಳಲಿದೆ' ಎಂದು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ವಕ್ತಾರರೊಬ್ಬರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications