For Quick Alerts
ALLOW NOTIFICATIONS  
For Daily Alerts

ಡೋಪಿಂಗ್‌ ಸುಳಿಯಲ್ಲಿ ಸ್ಟಾರ್‌ ಜಾವೆಲಿನ್‌ ಆಟಗಾರ; ಕನ್ನಡಿಗನಿಗೆ 'ಪ್ಯಾರಿಸ್‌ ಟಿಕೆಟ್‌' ಡೌಟ್‌!

ಭಾರತದ ಖ್ಯಾತ ಜಾವೆಲಿನ್‌ ತಾರೆಯನ್ನು ಸ್ಪರ್ಧೆಯಿಂದ ಹೊರಗಿಡಲಾಗಿದೆ. ಉದ್ದೀಪನ ಮದ್ದು ಸೇವನೆ ಬಲೆಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ (ನಾಡಾ) ಸೂಚನೆಯ ಮೇರೆಗೆ ಜಾವಲಿನ್‌ ಥ್ರೋ ಆಟಗಾರನನ್ನು ಸ್ಪರ್ಧೆಯಿಂದ ದೂರ ಉಳಿಯುವಂತೆ ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಎಫ್‌ಐ) ಹೇಳಿದೆ.

ಕಳೆದ ವರ್ಷ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ 24 ವರ್ಷದ ಜಾವೆಲಿನ್‌ ಎಸೆತಗಾರ, ಕನ್ನಡಿಗ ಡಿ.ಪಿ ಮನು ಅವರು ವಿಶ್ವ ರ್ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಆದರೆ ಈಗ ಅವರ ಹೆಸರು ಉದ್ದೀಪನ ಮದ್ದು ಸೇವನೆಯಲ್ಲಿ ತಳುಕು ಹಾಕುತ್ತಿದ್ದು, ಪ್ಯಾರಿಸ್‌ ಟಿಕೆಟ್‌ ಕೈತಪ್ಪುವ ಆತಂಕ ಎದುರಾಗಿದೆ.

Indian star javelin player who got involved in doping

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಎಎಫ್‌ಐ ಅಧ್ಯಕ್ಷ ಅದಿಲ್‌ ಸುಮರಿವಾಲಾ, "ಸ್ಪರ್ಧಾಕೂಟಗಳಲ್ಲಿ ಭಾಗವಹಿಸದಂತೆ ಮನು ಅವರನ್ನು ತಡೆಯುವಂತೆ 'ನಾಡಾ' ಫೆಡರೇಷನ್‌ಗೆ ಸೂಚನೆ ನೀಡಿದೆ. ಈ ಪ್ರಕರಣದ ವಾಸ್ತವ ಏನೆಂಬುದು ನಮಗೆ ತಿಳಿದಿಲ್ಲ. ಮನು ಅವರಿಗೆ ಸ್ಪರ್ಧೆಗಳಲ್ಲಿ ಅವಕಾಶ ನೀಡಬಾರದು ಎಂಬುದಾಗಿ ನಾಡಾದಿಂದ ಎಎಫ್‌ಐ ಕಚೇರಿಗೆ ಕರೆ ಬಂದಿತ್ತು. ಇದರ ಹೊರತಾಗಿ ಯಾವುದರ ಬಗ್ಗೆಯೂ ಮಾಹಿತಿಯಿಲ್ಲ" ಎಂದು ತಿಳಿಸಿದ್ದಾರೆ.

ಪ್ಯಾರೀಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಂತರ- ರಾಜ್ಯ ಚಾಂಪಿಯನ್‌ ಶಿಪ್‌ನ ಪ್ರಾಥಮಿಕ ಪಟ್ಟಿಯಲ್ಲಿ ಮನು ಅವರ ಹೆಸರನ್ನು ಸೇರಿಸಲಾಗಿತ್ತು. ಆದರೆ ಪರಿಷ್ಕೃತ ಪಟ್ಟಿಯಿಂದ ಅವರ ಹೆಸರನ್ನೇ ಕೈಬಿಡಲಾಗಿದೆ. ಪ್ರಕರಣದ ತನಿಖೆ ಮುಗಿದು ಮನು ನಿರಾಪರಾಧಿ ಎಂಬುದು ಘೋಷಣೆಯಾದ ಬಳಿಕವಷ್ಟೇ ಅವರಿಗೆ ಮತ್ತೆ ಜಾವೆಲಿನ್‌ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ.

ಭುವನೇಶ್ವರದಲ್ಲಿ ಕಳೆದ ತಿಂಗಳು ಮೇ 15ರಿಂದ 19ರವರೆಗೆ ನಡೆದ ಫೆಡರೇಶನ್‌ ಕಪ್‌ನಲ್ಲಿ ಡಿ.ಪಿ ಮನು 82.06 ಮೀಟರ್‌ ಜಾವೆಲಿನ್‌ ಎಸೆದು ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ನಂತರ ಎರಡನೇ ಸ್ಥಾನ ಗಳಿಸಿದ್ದರು. ಜೂನ್‌ 1 ರಂದು ತೈಪೆ ನಗರದಲ್ಲಿ ನಡೆದ ತೈವಾನ್‌ ಅಥ್ಲೆಟಿಕ್ಸ್‌ ಓಪನ್‌ ಕೂಟದಲ್ಲಿ ಜಾವೆಲಿನ್‌ ಅನ್ನು 81.58 ಮೀ. ದೂರ ಎಸೆದು ಚಿನ್ನದ ಪದಕ ಗೆದ್ದಿದ್ದರು.

ವಿಶ್ವ ಅಥ್ಲೆಟಿಕ್ಸ್‌ 'ರೋಡ್‌ ಟು ಪ್ಯಾರೀಸ್‌' ಪಟ್ಟಿಯಲ್ಲಿ ಮನು ಅವರು 15ನೇ ಶ್ರೇಯಾಂಕವನ್ನು ಹೊಂದಿದ್ದರು. ಪ್ಯಾರೀಸ್‌ ಕೂಟಕ್ಕೆ ಆಯ್ಕೆಯಾಗುವ 32 ಅಥ್ಲೀಟ್‌ಗಳಲ್ಲಿ ಅವರೂ ಆಯ್ಕೆಯಾಗುವ ಹಾದಿಯಲ್ಲಿದ್ದರು. ಪ್ರಾಥಮಿಕ ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಲಾಗಿತ್ತು. ಪ್ಯಾರೀಸ್‌ ಒಲಂಪಿಕ್ಸ್‌ಗೆ ಅರ್ಹತೆ ಪಡೆಯಲು ಅಥ್ಲೇಟ್‌ಗಳಿಗೆ ಜೂನ್‌ 30ರವರೆಗೆ ಗಡುವು ನಿಗದಿಯಾಗಿದೆ. ಕನ್ನಡಿಗ ಮನು ಅವರಿಗೆ ಮತ್ತೆ ಸ್ಪರ್ಧೆಯ ಬಾಗಿಲು ತೆರೆಯಲಿದೆಯೇ ಎಂಬುದು ಪ್ರಕರಣದ ತನಿಖೆ ಬಳಿಕವೇ ತಿಳಿಯಲಿದೆ.

ಈಗಾಗಲೇ ಚೋಪ್ರಾ ಮತ್ತು ಕಿಶೋರ್‌ ಜೆನಾ 85.50 ಮೀಟರ್‌ಗಳ ಅರ್ಹತಾ ಮಾನದಂಡವನ್ನು ಸಾಧಿಸುವ ಮೂಲಕ ಒಲಿಂಪಿಕ್ಸ್‌ಗೆ ಸ್ವಯಂಚಾಲಿತ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಒಂದು ದೇಶವು ಒಂದು ಸ್ಪರ್ಧೆಗೆ ಗರಿಷ್ಠ ಮೂವರನ್ನು ಮಾತ್ರ ಕಳುಹಿಸಬಹುದಾಗಿದೆ.

Story first published: Friday, June 28, 2024, 19:06 [IST]
Other articles published on Jun 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+