
ಭಾರತೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಕರ್ನಾಟಕ ರಣಜಿ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ಬೆಂಗಳೂರಿನಲ್ಲಿ ಗುರುವಾರ, ಜನವರಿ 12ರಂದು ಸರಳವಾಗಿ ವಿವಾಹವಾದರು.
ವಿಶೇಷ ಸಂಗತಿಯೆಂದರೆ, ವೇದಾ ಕೃಷ್ಣಮೂರ್ತಿ ತನ್ನ ದಿವಂಗತ ತಾಯಿಯ ಜನ್ಮದಿನದಂದು ತನ್ನ ವಿವಾಹ ನೋಂದಣಿ ಮಾಡಿಕೊಳ್ಳು ನಿರ್ಧರಿಸಿದಳು. ವೇದಾ ಅವರ ತಾಯಿ ಏಪ್ರಿಲ್ 2021ರಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದ್ದರು.
ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಾಗಿರುವ ಆಲ್‌ರೌಂಡರ್ ವೇದಾ ಕೃಷ್ಣಮೂರ್ತಿ ಅವರು ಭಾರತ ತಂಡಕ್ಕಾಗಿ 48 ಏಕದಿನ ಪಂದ್ಯಗಳು ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು 2017ರ ಏಕದಿನ ವಿಶ್ವಕಪ್ ಮತ್ತು 2020ರ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದರು.
ಇನ್ನು ಅರ್ಜುನ್ ಹೊಯ್ಸಳ ಎಡಗೈ ಬ್ಯಾಟರ್ ಆಗಿದ್ದು, ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಡಿದ್ದಾರೆ. ಅವರು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿಯೂ ವಿವಿಧ ಫ್ರಾಂಚೈಸಿಗಳಿಗಾಗಿ ಆಡಿದ್ದರು.

'ಅಮ್ಮಾ ಇದು ನಿನಗಾಗಿ' ವೇದಾ ಭಾವನಾತ್ಮಕ ಪೋಸ್ಟ್
ವೇದಾ ಕೃಷ್ಣಮೂರ್ತಿ ತಮ್ಮ ಮದುವೆ ದಿನದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರು. ಇದರಲ್ಲಿ 30 ವರ್ಷ ವಯಸ್ಸಿನ ಅರ್ಜುನ್ ಹೊಯ್ಸಳ ಅವರೊಂದಿಗೆ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆಗಳಿಗೆ ಸಹಿ ಮಾಡುವುದನ್ನು ಕಾಣಬಹುದು.
"ಇದು ನಿನಗಾಗಿ ಅಮ್ಮಾ, ನಿನ್ನ ಜನ್ಮದಿನವು ಯಾವಾಗಲೂ ವಿಶೇಷವಾಗಿ ಉಳಿಯುತ್ತದೆ, ಲವ ಯೂ ಅಕ್ಕಾ, ಹೊಸಜೀವನ, ವಿವಾಹ," ಎಂದು ವೇದಾ ಕೃಷ್ಣಮೂರ್ತಿ ಅರ್ಜುನ್ ಹೊಯ್ಸಳ ಜೊತೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಸ್ಪೋರ್ಟ್‌ಸ್ಟಾರ್, ಬುಧವಾರದಂದು ಭಾರತ ಮಹಿಳಾ ತಂಡದ ಮಾಜಿ ಕೋಚ್ ರಾಮನ್‌ಗೆ ತಾನು ಆಯ್ಕೆ ಮಾಡಿಕೊಂಡ ವಿವಾಹ ದಿನಾಂಕವನ್ನು ವೇದಾ ಅವರು ಆರಂಭದಲ್ಲಿ ಬಹಿರಂಗಪಡಿಸಿದ್ದರು.

ಮದುವೆಯ ದಿನಾಂಕದ ಬಗ್ಗೆ ಕೇಳಿದಾಗ, ತನ್ನ ತಾಯಿಗೆ ಗೌರವ ಸಲ್ಲಿಸಲು ಈ ದಿನಾಂಕವನ್ನು ಆರಿಸಿಕೊಂಡಿದ್ದೇನೆ ಎಂದು ವೇದಾ ಹೇಳಿದರು. ಈ ನಿರ್ದಿಷ್ಟ ದಿನಾಂಕದಂದು ಯಾವಾಗಲೂ ವಿವಾಹ ವಾರ್ಷಿಕೋತ್ಸವ ಆಚರಿಸಲು ಮತ್ತು ಈ ದಿನಾಂಕವನ್ನು ಅಮರಗೊಳಿಸಲು ಬಯಸಿದ್ದಾರೆ.
"ನನ್ನ ತಾಯಿಯ ಜನ್ಮದಿನವಾದ ಜನವರಿ 12ರಂದು ನನ್ನ ಮದುವೆಯನ್ನು ನೋಂದಾಯಿಸಲು ನಾನು ಬಯಸುತ್ತೇನೆ. ಆ ದಿನವು ವಿಶೇಷವಾಗಿರಬೇಕು ಮತ್ತು ಯಾವಾಗಲೂ ನನ್ನೊಂದಿಗೆ ಸಂಪರ್ಕದಲ್ಲಿರಬೇಕು ಎಂದು ನಾನು ಬಯಸುತ್ತೇನೆ. ಈ ದಿನ ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳಬಾರದು ಅಥವಾ ಮಂಗಳಕರ ಕಾರ್ಯಕ್ರಮಗಳನ್ನು ನಡೆಸಬಾರದು. ಈ ದಿನಾಂಕದಂದು ವಿವಾಹ ಮಾಡಿಕೊಂಡಿದ್ದೇವೆ," ಎಂದು ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ತಿಳಿಸಿದರು.