Archery World Cup: ಚಿನ್ನದ ಪದಕ ಗೆದ್ದ ಭಾರತ ಮಹಿಳಾ ತಂಡ, ಮಿಶ್ರ ಜೋಡಿ ಬೆಳ್ಳಿ
ಮೇ 25 ಶನಿವಾರ, ದಕ್ಷಿಣ ಕೊರಿಯಾದ ಯೆಚಿಯಾನ್‌ನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡವು ಚಿನ್ನ ಪದಕ ಗೆದ್ದಿದ್ದು, ಮಿಶ್ರ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದೆ.
ಭಾರತದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಸ್ವಾಮಿ ಅವರು ತಮ್ಮ 3ನೇ ಆರ್ಚರಿ ವಿಶ್ವಕಪ್ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ವಿಶ್ವದ ನಂಬರ್ ಒನ್ ಭಾರತ ತಂಡ ಟರ್ಕಿಯ ಹಜಾಲ್ ಬುರುನ್, ಆಯ್ಸೆ ಬೆರಾ ಸುಜರ್ ಮತ್ತು ಬೇಗಮ್ ಯುವಾ ವಿರುದ್ಧ ಆರಂಭದಿಂದಲ್ಲೂ ಪ್ರಾಬಲ್ಯ ಸಾಧಿಸಿದರು. ಅಂತಿಮವಾಗಿ 232-226 ಪಾಯಿಂಟ್‌ಗಳ ಅಂತರದಿಂದ ಟರ್ಕಿ ಎದುರು ಭಾರತ ಜಯ ಗಳಿಸಿತು.

ಭಾರತ ತಂಡದ ಯಶಸ್ಸಿನ ಹೊರತಾಗಿಯೂ, ಏಷ್ಯನ್ ಗೇಮ್ಸ್ ಚಾಂಪಿಯನ್ ಜ್ಯೋತಿ ಸುರೇಖಾ ವೆನ್ನಮ್ ಎರಡನೇ ಚಿನ್ನದಿಂದ ವಂಚಿತರಾದರು. ಫೈನಲ್‌ನಲ್ಲಿ ಭಾರತ ಮಿಶ್ರ ತಂಡದ ಜ್ಯೋತಿ ಸರೇಖಾ ವೆನ್ನಮ್ ಮತ್ತು ಪ್ರಿಯಾಂಶ್ ಆರಂಭದಲ್ಲಿ ಮುನ್ನಡೆ ಸಾಧಿಸಿದರು.
ಬಳಿಕ ಅಮೆರಿಕಾದ ಒಲಿವಿಯಾ ಡೀನ್ ಮತ್ತು ಸಾಯರ್ ಸುಲ್ಲಿವಾನ್ ಅವರು ಮುನ್ನೆಡೆ ಪಡೆದು ಜ್ಯೋತಿ ಸರೇಖಾ ವೆನ್ನಮ್ ಮತ್ತು ಪ್ರಿಯಾಂಶ್ ಅವರನ್ನು ಎರಡು ಅಂಕಗಳಿಂದ (155-153) ಸೋಲಿಸಿದರು. ಹೀಗಾಗಿ ಭಾರತೀಯ ಜೋಡಿಗೆ ಬೆಳ್ಳಿ ಪದಕ ಲಭಿಸಿತು.
ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ವಿಶ್ವ ಚಾಂಪಿಯನ್ ಅದಿತಿ ಸ್ವಾಮಿ ಅವರು ಈ ಹಿಂದೆ ಶಾಂಘೈನಲ್ಲಿ ಇಟಲಿಯನ್ನು ಸೋಲಿಸುವ ಮೂಲಕ ಮೊದಲ ವಿಶ್ವಕಪ್ ಚಿನ್ನದ ಪದಕ ಗೆದ್ದಿದ್ದರು. ಬಳಿಕ ಪ್ಯಾರಿಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು. ಇದೀಗಾ ಯೆಚಿಯಾನ್‌ನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿಯೂ ಈ ತಂಡ ಚಿನ್ನಕ್ಕೆ ಮುತ್ತಿಕ್ಕಿದೆ.
ಮೂರನೇ ಪದಕದ ನಿರೀಕ್ಷೆ
ಈ ಆವೃತ್ತಿಯ ವಿಶ್ವಕಪ್‌ನಲ್ಲಿ ಭಾರತ ಮೂರನೇ ಪದಕದ ನರೀಕ್ಷೆಯಲ್ಲಿದೆ. ಪ್ರಥಮೇಶ್ ಫುಗೆ ಅವರು ತಮ್ಮ ಮೊದಲ ವೈಯಕ್ತಿಕ ವಿಶ್ವಕಪ್ ಚಾಂಪಿಯನ್ ಆಗಲು ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ.
ಕ್ವಾರ್ಟರ್‌ಫೈನಲ್‌ನಲ್ಲಿ 2021ರ ವಿಶ್ವ ಚಾಂಪಿಯನ್ ಮತ್ತು ವಿಶ್ವದ ನಂ. 6ನೇ ಶ್ರೇಯಾಂಕದ ಆಸ್ಟ್ರಿಯಾದ ನಿಕೊ ವೀನರ್ ಅವರನ್ನು ಸೋಲಿಸಿದ್ದಾರೆ. ಚೊಚ್ಚಲ ವೈಯಕ್ತಿಕ ವಿಶ್ವಕಪ್ ಪದಕಕ್ಕಾಗಿ ವಿಶ್ವದ ನಂ.7 ಜೇಮ್ಸ್ ಲುಟ್ಜ್ ಅವರನ್ನು ಎದುರಿಸಲು ಪ್ರಥಮೇಶ್ ಸಜ್ಜಾಗಿದ್ದಾರೆ. ಶಾಂಘೈನಲ್ಲಿ ನಡೆದ ವಿಶ್ವಕಪ್ -1 ರಲ್ಲಿ ಪ್ರಥಮೇಶ್ ಚಿನ್ನದ ಪದಕ ವಿಜೇತ ಪುರುಷರ ತಂಡದ ಭಾಗವಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications