ಚದುರಂಗ ಚತುರ ವಿಶ್ವನಾಥನ್ ಆನಂದ್‌ಗೆ 54ನೇ ಜನ್ಮದಿನ; ಪ್ರಮುಖ ಸಾಧನೆ, ಪ್ರಶಸ್ತಿಗಳ ಪಟ್ಟಿ
ಮೊದಲ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಹಾಗೂ ಚೆಸ್ ಆಟದ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ (ವಿಶಿ) ಅವರು 54ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಭಾರತೀಯ ಕ್ರೀಡಾ ಇತಿಹಾಸದ ಅತ್ಯುತ್ತಮ ಚೆಸ್ ಆಟಗಾರರಲ್ಲಿ ಒಬ್ಬರಾಗಿರುವ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು 1969ರ ಡಿಸೆಂಬರ್ 11ರಂದು ತಮಿಳುನಾಡಿನಲ್ಲಿ ಜನಿಸಿದರು.

ವಿಶ್ವನಾಥನ್ ಆನಂದ್ 1988ರಲ್ಲಿ ಮೊದಲ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಎನಿಸಿದರು. ಐದು ಬಾರಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ವಿಜೇತರಾದರು ಮತ್ತು ಅಂತಾರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯ ಚೆಸ್ ಆಟಗಾರನಾಗಿದ್ದಾರೆ. ವಿಶ್ವನಾಥನ್ ಆನಂದ್ 15ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು.
ವಿಶ್ವನಾಥನ್ ಆನಂದ್ ಅವರು 2000, 2007, 2008, 2010 ಮತ್ತು 2012ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಅಲ್ಲದೆ 16ನೇ ವಯಸ್ಸಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಆದರು.

ಚೆಸ್ ಕ್ರೀಡೆಯಲ್ಲಿನ ವಿಶ್ವನಾಥನ್ ಆನಂದ್ ಅವರ ಶ್ರೇಷ್ಠತೆಗಾಗಿ, 1997, 1998, 2003, 2004, 2007 ಮತ್ತು 2008ರಲ್ಲಿ ಆರು ಬಾರಿ ಚೆಸ್ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿಯನ್ನು ಪಡೆದರು.
ವಿಶ್ವನಾಥನ್ ಆನಂದ್ ಅವರು ಇಂದು ತಮ್ಮ 54ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಈ ಕ್ಷಣದಲ್ಲಿ ಅವರ ಕೆಲವು ಸಾಧನೆಗಳು ಮತ್ತು ಪ್ರಶಸ್ತಿಗಳನ್ನು ಗಮನಿಸೋಣ.
* ವಿಶ್ವನಾಥನ್ ಆನಂದ್ 1987ರಲ್ಲಿ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ.
* 1988ರಲ್ಲಿ ವಿಶ್ವನಾಥನ್ ಆನಂದ್ ಮೊದಲ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆದರು.
* ಐದು ಬಾರಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದರು (2000, 2002, 2007, 2008, 2010).
* 2820ರ ಗರಿಷ್ಠ ಎಲೋ ರೇಟಿಂಗ್ ಅನ್ನು ತಲುಪಿದ್ದರು, 2006ರಲ್ಲಿ ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ.
* ವಿಶ್ವನಾಥನ್ ಆನಂದ್ 2017ರಲ್ಲಿ FIDE ವಿಶ್ವ ರಾಪಿಡ್ ಚೆಸ್ ಚಾಂಪಿಯನ್‌ಶಿಪ್ ಗೆದ್ದರು.
* 2000 ಮತ್ತು 2005ರಲ್ಲಿ ವಿಶ್ವನಾಥನ್ ಆನಂದ್ ಚೆಸ್ ವಿಶ್ವಕಪ್ ಗೆದ್ದರು.
* ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ಅನ್ನು ಐದು ಬಾರಿ ಗೆದ್ದಿದ್ದಾರೆ (2003, 2004, 2006, 2008, 2010).
* ಕೋರಸ್ ಚೆಸ್ ಪಂದ್ಯಾವಳಿಯನ್ನು ವಿಶ್ವನಾಥನ್ ಆನಂದ್ ಮೂರು ಬಾರಿ ಗೆದ್ದರು (1998, 2006, 2008)
* ಲಿನಾರೆಸ್ ಚೆಸ್ ಟೂರ್ನಮೆಂಟ್ ಅನ್ನು ಎರಡು ಬಾರಿ ಗೆದ್ದರು (1998, 2008).
* ಡಾರ್ಟ್ಮಂಡ್ ಚೆಸ್ ಟೂರ್ನಮೆಂಟ್ ಅನ್ನು ಎರಡು ಬಾರಿ ಗೆದ್ದರು (1996, 2004).
* ವಿಶ್ವನಾಥನ್ ಆನಂದ್ ಅವರು Wijk aan Zee ಚೆಸ್ ಟೂರ್ನಮೆಂಟ್ ಅನ್ನು ಎರಡು ಬಾರಿ ಗೆದ್ದರು (1998, 2003).
* 2012ರಲ್ಲಿ ಗ್ರ್ಯಾಂಡ್ ಸ್ಲಾಮ್ ಚೆಸ್ ಪಂದ್ಯಾವಳಿಯನ್ನು ಗೆದ್ದರು.
* 19911-92ರಲ್ಲಿ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲಿಗರಾದರು.
* ಹಲವು ಚೆಸ್ ಪ್ರಶಸ್ತಿಗಳಲ್ಲದೆ, ವಿಶ್ವನಾಥನ್ ಆನಂದ್ ಅವರು ಪದ್ಮಶ್ರೀ, ಅರ್ಜುನ ಪ್ರಶಸ್ತಿ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications