ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿನ್ನ ವಿಜೇತ ನೀರಜ್‌ಗೆ ಕೋಚಿಂಗ್ ನೀಡಿದ್ದ ಕರ್ನಾಟಕದ ಕಾಶೀನಾಥ್ ಕುರಿತು ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು!

Interesting things about Tokyo Olympic Gold medalist Neeraj Chopras coach Kashinath Naik

ಬೆಂಗಳೂರು: ಆಗಸ್ಟ್ 8 ಭಾನುವಾರವಷ್ಟೇ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದರು. ಪುರುಷರ ಜಾವೆಲಿನ್ ಥ್ರೋನಲ್ಲಿ ಬಂಗಾರ ಗೆದ್ದಿದ್ದ ನೀರಜ್ ಭಾರತದ ಹಿರಿಮೆಯನ್ನು ಜಗತ್ತಿಗೆ ಎತ್ತಿ ತೋರಿಸಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೋಪ್ರಾ ಗೆದ್ದ ಆ ಪದಕ ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಚೊಚ್ಚಲ ಚಿನ್ನದ ಪದಕವಾಗಿ ಗುರುತಿಸಿಕೊಂಡಿತ್ತಲ್ಲದೆ, ಭಾರತಕ್ಕೆ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ದೊರೆತ ಚೊಚ್ಚಲ ಬಂಗಾರವಾಗಿ ದಾಖಲೆಗೆ ಕಾರಣವಾಗಿತ್ತು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಜ್ಯೋತಿ ಹಿಡಿದಿದ್ದ ಪಿಂಕಿ ಕರ್ಮಾಕರ್ ಈಗ ದಿನಗೂಲಿ ನೌಕರೆ!ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಜ್ಯೋತಿ ಹಿಡಿದಿದ್ದ ಪಿಂಕಿ ಕರ್ಮಾಕರ್ ಈಗ ದಿನಗೂಲಿ ನೌಕರೆ!

23ರ ಹರೆಯದ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಎಸೆತದಲ್ಲಿ 87.58 ಮೀಟರ್ ಸಾಧನೆಯೊಂದಿಗೆ ಭಾರತಕ್ಕೆ ಬಂಗಾರದ ಮೆರಗು ತಂದಿದ್ದರು. ಚೋಪ್ರಾ ಈ ಸಾಧನೆಗೆ ಅವರ ಅವಿರತ ಶ್ರಮ ಕಾರಣ. ಜೊತೆಗೆ ಕೋಚ್‌ಗಳ ಶ್ರಮ, ಮಾರ್ಗದರ್ಶನವನ್ನೂ ನಾವಿಲ್ಲಿ ಸ್ಮರಿಸಿಕೊಳ್ಳಬೇಕು.

ಪ್ರಮುಖ ಕೋಚ್‌ಗಳ ಸಾಲಿನಲ್ಲಿ ಕನ್ನಡಿಗ ಕೋಚ್

ಪ್ರಮುಖ ಕೋಚ್‌ಗಳ ಸಾಲಿನಲ್ಲಿ ಕನ್ನಡಿಗ ಕೋಚ್

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಆ ಸಾಧನೆ ಮಾಡಿದ್ದಕ್ಕೆ ಹಲವಾರು ಕೋಚ್‌ಗಳ ಶ್ರಮ, ಮಾರ್ಗದರ್ಶನವೂ ಕಾರಣ. ಚೋಪ್ರಾ ಅವರನ್ನು ಮೊದಲು ಗುರುತಿಸಿದ ಕೋಚ್ ಜೈವೀರ್ ಚೌಧರಿಯಿಂದ ಹಿಡಿದು ಕಳೆದ ಎರಡು ವರ್ಷಗಳಿಂದ ತರಬೇತಿ ನೀಡುತ್ತಿರುವ ಡಾ. ಕ್ಲಾಸ್ ಬಾರ್ಟೋನಿಯೆಟ್ಜ್ ಅವರ ವರೆಗೆ ಅನೇಕ ಕೋಚ್‌ಗಳು ಬೆಳೆಸಿದ್ದಾರೆ. ಇವರಲ್ಲಿ ಆಸ್ಟ್ರೇಲಿಯಾದ ಗ್ಯಾರಿ ಕ್ಯಾಲ್ವರ್ಟ್ ಮತ್ತು ಜರ್ಮನ್‌ನ ದಂತಕತೆ ಉವೆ ಹಾನ್‌ ಕೂಡ ಇದ್ದಾರೆ. ಈ ಕೋಚ್‌ಗಳ ಸಾಲಿನಲ್ಲಿ ಒಬ್ಬರು ಕರ್ನಾಟಕದ ಕೋಚ್ ಕೂಡ ಇದ್ದಾರೆ. ಕಾಶೀನಾಥ್ ನಾಯ್ಕ್ ಅವರ ಹೆಸರು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಇವರ ಊರು. ಭಾರತೀಯ ಆರ್ಮಿಯಲ್ಲಿ ಜೂನಿಯರ್ ಕಮೀಶನರ್ ಆಫೀಸರ್ ಆಗಿರುವ ಚೋಪ್ರಾ ಟೋಕಿಯೋದಲ್ಲಿ ಬಂಗಾರ ಗೆಲ್ಲುತ್ತಲೇ 38ರ ಹರೆಯದ ಕಾಶೀನಾಥ್ ಬಹಳ ಪ್ರಸಿದ್ಧಿಗೆ ಬಂದಿದ್ದರು. ಕಾಶೀನಾಥ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಯಾರೀ ಕಾಶೀನಾಥ್ ನಾಯ್ಕ್?

ಯಾರೀ ಕಾಶೀನಾಥ್ ನಾಯ್ಕ್?

ಕಾಶೀನಾಥ್ ನಾಯ್ಕ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತ ಜಾವೆಲಿನ್ ಥ್ರೋವರ್. ನವದೆಹಲಿಯಲ್ಲಿ 2010ರಂದು ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ವೇಳೆ ಕಾಶೀನಾಥ್ ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ ಜಯಿಸಿದ್ದರು. ಅದಾಗಿ ಒಂದು ವರ್ಷದ ಬಳಿಕ 14 ವರ್ಷ ಪ್ರಾಯದವರಾಗಿದ್ದ ನೀರಜ್ ಚೋಪ್ರಾ ಜೈವೀರ್ ಚೌಧರಿ ಜೊತೆಗೆ ಜಾವೆಲಿನ್ ಎಸೆತದ ಅಭ್ಯಾಸ ಆರಂಭಿಸಿದ್ದರು. ಅಂದ್ಹಾಗೆ ಆವತ್ತು ಕಾಶಿನಾಥ್‌ಗೆ ಸಿಕ್ಕ ಕಂಚಿನ ಪದಕ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಜಾವೆಲಿನ್‌ ಎಸೆತದಲ್ಲಿ ಸಿಕ್ಕ ಮೊದಲ ಪದಕ. ಅಲ್ಲದೆ, 1982ರ ಏಷ್ಯನ್ ಗೇಮ್ಸ್‌ ಪದಕದ ಬಳಿಕ ಭಾರತಕ್ಕೆ ಸಿಕ್ಕ ಚೊಚ್ಚಲ ಪದಕ. ಅಥ್ಲೀಟ್‌ ಆಗಿ ವೃತ್ತಿ ಬದುಕು ಮುಗಿಸಿದ ಬಳಿಕ ಕಾಶಿನಾಥ್ ಕೋಚಿಂಗ್‌ ವೃತ್ತಿಗೆ ಬಂದಿದ್ದರು. 2016ಲ್ಲಿ ಪೋಲ್ಯಾಂಡ್‌ನಲ್ಲಿ ನಡೆದಿದ್ದ ಅಂಡರ್-20 ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಬಂಗಾರದ ಪದಕ ಗೆದ್ದಾಗ ಗ್ಯಾರಿ ಕ್ಯಾಲ್ವರ್ಟ್ ಜೊತೆಗೆ ಸಹ ಕೋಚ್ ಆಗಿ ಕಾಶಿನಾಥ್ ಅವರೂ ನೀರಜ್‌ಗೆ ಕೋಚಿಂಗ್ ನೀಡುತ್ತಿದ್ದರು. ಈಗ ಕಾಶಿನಾಥ್ ಅವರು ಮಹಾರಾಷ್ಟ್ರ ಪುಣೆಯಲ್ಲಿ ಇಂಡಿಯನ್ ಆರ್ಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

ಚೋಪ್ರಾಗೆ ಕಾಶೀನಾಥ್ ಕೋಚಿಂಗ್‌ ನೀಡೇಯಿಲ್ವಾ?

ಚೋಪ್ರಾಗೆ ಕಾಶೀನಾಥ್ ಕೋಚಿಂಗ್‌ ನೀಡೇಯಿಲ್ವಾ?

ಒಲಿಂಪಿಕ್ಸ್ ಬಂಗಾರ ಗೆದ್ದ ಭಾರತದ ಅಥ್ಲೀಟ್‌ಗೆ ಕನ್ನಡಿಗ ಕೋಚ್ ಎಂಬ ಸಂಗತಿ ಕನ್ನಡಿಗರು ಬೀಗುವಂತೆ ಮಾಡಿತ್ತು. ಆದರೆ ಚೋಪ್ರಾಗೆ ಕಾಶಿನಾಥ್ ಕೋಚಿಂಗ್‌ ನೀಡೇಯಿಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ. ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಅವರು, "ಕಾಶಿನಾಥ್ ನಾಯ್ಕ್ ಯಾರೋ ಗೊತ್ತಿಲ್ಲ. ಆ ಹೆಸರಿನ ಯಾರೂ ಚೋಪ್ರಾಗೆ ಕೋಚಿಂಗ್ ನೀಡಿಲ್ಲ. ಉವೆ ಹಾನ್‌ ನೇತೃತ್ವದಲ್ಲಿ ಕ್ಲಾಸ್‌ ಬಾರ್ಟೊನಿಟ್ಜ್, ಗ್ಯಾರಿ ಕಲ್ವರ್ಟ್‌, ವರ್ನರ್‌ ಡೇನಿಯಲ್ಸ್‌ ಎಂಬ ಮೂವರು ವಿದೇಶಿ ತರಬೇತುದಾರರು ಚೋಪ್ರಾ ಅವರಿಗೆ ತರಬೇತಿ ನೀಡಿದ್ದಾರೆ. ಅದಕ್ಕೆ ಮೊದಲು ನಸೀಮ್‌ ಅಹ್ಮದ್‌ ಎಂಬುವರು ಕೋಚ್‌ ಆಗಿದ್ದರು. ಶ್ರಮ ವಹಿಸಿ ಪದಕ ಗೆದ್ದಿದ್ದು ನೀರಜ್ ಚೋಪ್ರಾ, ತರಬೇತಿ ನೀಡಿದ್ದು ಬೇರೆಯ ತರಬೇತುದಾರರು. ಒಬ್ಬರ ಶ್ರಮ ಬೇರೊಬ್ಬರಿಗೆ ಲಾಭ ತಂದುಕೊಡಬಾರದು," ಎಂದಿರುವುದಾಗಿ ತಿಳಿದು ಬಂದಿದೆ. ಚೋಪ್ರಾ ಸಾಧನೆಗೆ ನೆರವಾಗಿದ್ದಕ್ಕೆ ಕರ್ನಾಟಕ ಸರ್ಕಾರದಿಂದ ಕಾಶೀನಾಥ್‌ಗೆ 10 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ, ಕಾಶೀನಾಥ್ ಅವರು ಚೋಪ್ರಾಗೆ ಕೋಚಿಂಗ್ ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ(ಚಿತ್ರದಲ್ಲಿ ಕೋಚ್ ಡಾ. ಕ್ಲಾಸ್ ಬಾರ್ಟೋನಿಯೆಟ್ಜ್ ).

ಸ್ಪಷ್ಟನೆ ನೀಡಿದ ಕಾಶೀನಾಥ್ ನಾಯ್ಕ್

ಸ್ಪಷ್ಟನೆ ನೀಡಿದ ಕಾಶೀನಾಥ್ ನಾಯ್ಕ್

ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿಕೆ ಕುರಿತು 'ಮೈಖೇಲ್ ಕನ್ನಡ' ಮಾತನಾಡಿದಾಗ ಕಾಶೀನಾಥ್ ಪ್ರತಿಕ್ರಿಯಿಸಿದ್ದಾರೆ. "ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಅಥ್ಲೀಟ್‌ ಒಬ್ಬರ ಹೆಸರೇ ಗೊತ್ತಿಲ್ಲ ಅನ್ನುವುದಾದರೆ ಅವರು (ಅದಿಲ್ಲೆ ಸುಮರಿವಾಲ್ಲಾ) ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರು ಹೇಗಾದರೋ ಅರ್ಥವಾಗುತ್ತಿಲ್ಲ. ಭಾರತದ ಕೋಚ್‌ಗಳ ಹೆಸರು ಕೇಳಿ ಬರಬಾರದು ಅನ್ನೋ ಹುನ್ನಾರವಿದು. ವಿದೇಶಿ ಕೋಚ್‌ಗಳಿಗೇ ಎಲ್ಲಾ ಶ್ರೇಯಸ್ಸು ಸಲ್ಲಲಿ ಎಂದು ಅದಿಲ್ಲೆ ಸುಮರಿವಾಲ್ಲಾ ಹೀಗೆ ಮಾಡುತ್ತಿರಬಹುದು. ಈಗಲೂ ನಾನು ನೀರಜ್‌ಗೆ ಕೋಚ್ ಆಗಿದ್ದೇನೆ. ನೀರಜ್ ಸದ್ಯ ವಿದೇಶದಲ್ಲಿ ಅಥವಾ ಬೇರೆ ಕೋಚ್‌ಗಳ ಜೊತೆ ಕೋಚಿಂಗ್ ಪಡೆಯುತ್ತಿದ್ದಾರೆ. ಆದರೂ ಅವರಿಗೆ ನಾನೂ ಕೂಡ ಈಗಲೂ ಕೋಚ್ ಆಗಿದ್ದೇನೆ. ಅವರಿಗೆ ಅಗತ್ಯ ನೆರವು ನೀಡುತ್ತಿದ್ದೇನೆ. ಆದರೂ ಸುಮರಿವಾಲ್ಲಾ ಹೊಟ್ಟೆಕಿಚ್ಚಿನಿಂದ ಹೀಗೆ ಹೇಳುತ್ತಿರಬಹುದು," ಎಂದು ಕಾಶೀನಾಥ್ ವಿವರಿಸಿದ್ದಾರೆ. ರಾಜ್ಯ ಘೋಷಿಸಿದ ನಗದು ಪುರಸ್ಕಾರದ ಬಗ್ಗೆ ಮಾತನಾಡಿದ ಕಾಶೀನಾಥ್, "ಹೌದು ಸರ್ಕಾರದಿಂದ 10 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ. ಆದರೆ ನೀಡಿಲ್ಲ, ನೀಡಬೇಕಷ್ಟೆ," ಎಂದಿದ್ದಾರೆ.

ಕಾಶೀನಾಥ್ ಅವರ ವೈಯಕ್ತಿಕ ಸಾಧನೆಗಳು

ಕಾಶೀನಾಥ್ ಅವರ ವೈಯಕ್ತಿಕ ಸಾಧನೆಗಳು

* 2010ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ
* ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, 2010
* ಏಷ್ಯನ್ ಆಲ್ ಸ್ಟಾರ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ, 2020
* ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಟದ ಜಾವೆಲಿನ್‌ನಲ್ಲಿ ಬೆಳ್ಳಿ, 2008
* ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕಂಚಿನ ಪದಕ, 2008
* 14 ಬಾರಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನ
* ರಾಷ್ಟ್ರೀಯ ಮಟ್ಟದಲ್ಲಿ 5 ಬಾರಿ ಬೆಳ್ಳಿ
* 2012ರಲ್ಲಿ ಏಕಲವ್ಯ ಪ್ರಶಸ್ತಿ
* 2011ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕೋಚ್ ಆಗಿ ಕಾಶೀನಾಥ್ ಸಾಧನೆಗಳು

ಕೋಚ್ ಆಗಿ ಕಾಶೀನಾಥ್ ಸಾಧನೆಗಳು

1. ಸಮರ್ ಜೀತ್ ಸಿಂಗ್ 2013 ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ
2. ಮುಖೇಶ್ ಕುಮಾರಿ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಕಂಚಿನ ಪದಕ 2013
3. ರಾಜೇಶ್ ಕುಮಾರ್ ಬಿಂಧ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಫೈನಲಿಸ್ಟ್
4. ಅಣ್ಣು ರಾಣಿ ಏಷ್ಯನ್ ಗೇಮ್ಸ್‌, ಏಷ್ಯನ್ ಚಾಂಪಿಯನ್‌ಶಿಪ್ ಪದಕ, ವಿಶ್ವ ಚಾಂಪಿಯನ್‌ಶಿಪ್ ನಲ್ಲಿ 2013 ರಿಂದ 2019 ಭಾಗವಹಿಸಿದ್ದರು.
5. ದೇವಿಂದರ್ ಸಿಂಗ್ ಏಷ್ಯನ್ ಚಾಂಪಿಯನ್‌ಶಿಪ್ ಕಂಚು, ವಿಶ್ವ ಚಾಂಪಿಯನ್‌ಶಿಪ್ ಫೈನಲಿಸ್ಟ್ 84.44 ಮೀ. ಸಾಧನೆ, 2013 ರಿಂದ 2018ರವರೆಗೆ
6. ನೀರಜ್ ಚೋಪ್ರಾ ದಕ್ಷಿಣ ಏಷ್ಯನ್ ಗೇಮ್ಸ್ ಚಿನ್ನ 2016, ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್ ಚಿನ್ನ 86.48 ಮಿ., ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನ 2017, 2015 ರಿಂದ 2017 ಕೋಚಿಂಗ್
7. ಶಿವಪಾಲ್ ಸಿಂಗ್ ಏಷ್ಯನ್ ಗೇಮ್ಸ್ 2018, ಏಷ್ಯನ್ ಚಾಂಪಿಯನ್ಶಿಪ್ ಪದಕ 2019, 2016 ರಿಂದ 2019 ಮತ್ತು 2021 ಒಲಿಂಪಿಕ್ಸ್ ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು
8. ರಶ್ಮಿ, ಕರಿಷ್ಮಾ, ಮನು, ಪ್ರತಾಪ್ - ಕರ್ನಾಟಕದ ಪ್ರತಿಭೆಗಳಿಗೆ ಕೋಚಿಂಗ್
9. ರಾಜೇಂದರ್, ಅನಿಲ್, ರೋಹಿತ್, ಸುದಾಮ ಇವರಿಗೆ ರಾಷ್ಟ್ರೀಯ ಮಟ್ಟದ ಪದಕ

Story first published: Wednesday, August 11, 2021, 12:28 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X