CWG: ಭಾರತಕ್ಕೆ ಕಪ್ಪು ಮಸಿ ಬಳಿದ ಅಧಿಕಾರಿಗಳು
ಗ್ಲಾಸ್ಗೊ, ಆ.3: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಭಾರತದ ಗೌರವಕ್ಕೆ ಕಪ್ಪು ಮಸಿ ಬಳಿದ ಪ್ರಕರಣ ನಡೆದಿದೆ. ದೆಹಲಿಯ ಕ್ರೀಡಾಕೂಟದ ಹಗರಣಗಳ ಕರಿ ನೆರಳು ಮರೆಯಾಯಿತು ಎನ್ನುವಷ್ಟರಲ್ಲೆ ಹಲ್ಲೆ ಪ್ರಕರಣವೊಂದರಲ್ಲಿ ಇಬ್ಬರು ಭಾರತೀಯ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಗ್ಲಾಸ್ಕೊದಲ್ಲಿ ನಡೆದಿರುವ 20ನೇ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರಳಿರುವ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಐಓಎ ಜನರಲ್ ಸೆಕ್ರೆಟರಿ ರಾಜೀವ್ ಮೆಹ್ತಾ ಮತ್ತು ರೆಸ್ಲಿಂಗ್ ರೆಫ್ರಿ ವಿರೇಂದರ್ ಮಲಿಕ್ ಅವರನ್ನು ಗ್ಲಾಸ್ಗೋ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ, ಕುಡಿದು ಕಾರು ಚಲಾಯಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದ್ದು, ಇದರಿಂದ ಭಾರತಕ್ಕೆ ತೀವ್ರ ಮುಜುಗರ ಉಂಟಾಗಿದೆ. ಇದರ ಜತೆಗೆ ವೀರೇಂದರ್ ಮಲ್ಲಿಕ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರೆಸಲಾಗಿದೆ. ರಾಜೀವ್ ಮೆಹ್ತಾ ಅವರ ಮೇಲೆ ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪ ಮಾಡಲಾಗಿದೆ. ಪೊಲೀಸರು ಸೋಮವಾರ ಗ್ಲಾಸ್ಗೊ ನ್ಯಾಯಾಲಯದ ಮುಂದೆ ಅಧಿಕಾರಿಗಳನ್ನು ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಡನ್ನಿನ ಭಾರತೀಯ ರಾಯಭಾರಿ ಕಚೇರಿ, 45 ಹಾಗೂ 49 ವರ್ಷ ವಯಸ್ಸಿನ ಇಬ್ಬರು ಕ್ರೀಡಾ ಅಧಿಕಾರಿಗಳನ್ನು ಬಂಧಿಸಿರುವ ಬಗ್ಗೆ ಮಾಹಿತಿ ಬಂದಿದೆ. ಎಡಿನ್ ಬರೋದಲ್ಲಿರುವ ನಮ್ಮ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಪೂರ್ಣ ಮಾಹಿತಿ ಪಡೆದ ಮೇಲೆ ಗ್ಲಾಸ್ಗೊಗೆ ನಮ್ಮ ಪ್ರತಿನಿಧಿಗಳು ತೆರಳಿ ಪೊಲೀಸರ ಜತೆ ಮಾತುಕತೆ ನಡೆಸಲಿದ್ದಾರೆ.
ಇತರೆ ಯುರೋಪಿಯನ್ ದೇಶಗಳಂತೆ ಬ್ರಿಟನ್ ನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ವಾಹನ ಚಾಲನೆ ಪರವಾನಗಿ ರದ್ದು, 3 ಅಥವಾ 6 ತಿಂಗಳು ಜೈಲುವಾಸ, ಸುಮಾರು 2,500 ರಿಂದ 5,000 ಪೌಂಡ್ ದಂಡ ವಿಧಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications